Asianet Suvarna News Asianet Suvarna News

ಬೆಂಕಿ ಹೊತ್ತಿಸಿದ ಗೋಡ್ಸೆ ಬರ್ತಡೆ, ಬಿಜೆಪಿ ಮೇಲೆ ಕಾಂಗ್ರೆಸ್ ಅಟ್ಯಾಕ್

ಮಧ್ಯಪ್ರದೇಶದಲ್ಲಿ ನಾಥೂರಾಮ್ ಗೋಡ್ಸೆ ಜನ್ಮದಿನಾಚರಣೆ/ ಬಿಜೆಪಿ ಮೇಲೆ ತಿರುಗಿ ಬಿದ್ದ ಕಾಂಗ್ರೆಸ್?  ಬಿಜೆಪಿ ಅಧಿಕಾರದಲ್ಲಿ ಇದ್ದರೆ ಮಾತ್ರ ಇಂಥ ಕೆಲಸ ಸಾಧ್ಯ

Hindu Mahasabha celebrates Nathuram Godse's birth anniversary in Gwalior MP
Author
Bengaluru, First Published May 20, 2020, 5:37 PM IST
  • Facebook
  • Twitter
  • Whatsapp

ಭೋಪಾಲ್(ಮೇ 20) ಮಹಾತ್ಮಾ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಣೆ ಮಾಡಿದ ಹಿಂದೂ ಮಹಾಸಭಾದ ಕಾರ್ಯಕ್ರಮ ಇದೀಗ ವಿವಾದ ಎಬ್ಬಿಸಿದೆ. 

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವಿವಾದ ಎಬ್ಬಿಸಿದೆ.  ಆಡಳಿತಕ್ಕೆ ಏರಿರುವ ಬಿಜೆಪಿಯನ್ನು ವಿಪಕ್ಷ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಮಾತ್ರ ಇಂಥ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಲಾಕ್ ಡೌನ್ ಸಹ ಇದೆ ಆದರೆ ಗ್ವಾಲಿಯರ್ ನ ಹಿಂದೂ ಮಹಾಸಭಾ ಆಫೀಸ್ ನಲ್ಲಿ ಇಂಥ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಸಾವರ್ಕರ್  ಗೋಡ್ಸೆ ನಡುವೆ ದೈಹಿಕ ಸಂಬಂಧ; ವಿವಾದದ ಕಿಡಿ ಹೊತ್ತಿಸಿದ ಕೈಪಿಡಿ

ಸುಮಾರು 3 ಸಾವಿರ ಹಿಂದೂ ಮಹಾಸಭಾ ಕಾರ್ಯಕರ್ತರ ಮನೆಯಲ್ಲಿ ದೀಪ ಬೆಳಗಲು ಹೇಳಲಾಗಿದೆ ಎಂದಿರುವ ಮಹಾಸಭಾದ ರಾಷ್ಟೀಯ ಉಪಾಧ್ಯಕ್ಷ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ ಎಂದು ಮಾಜಿ ಸಿಎಂ ಕಮಲ್ ನಾಥ್ ಸರಣಿ ಟ್ವೀಟ್ ಗಳ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.  ಬಿಜೆಪಿ ಜನರಿಗೆ ಯಾವ ಐಡಿಯಾಲಜಿಯನ್ನು ಹೇರಲು ಮುಂದಾಗಿದೆ ಎಂದು ಕಮಲ್ ನಾಥ್ ಪ್ರಶ್ನೆ ಮಾಡಿದ್ದಾರೆ. 

 

Follow Us:
Download App:
  • android
  • ios