Asianet Suvarna News Asianet Suvarna News

UK Prime Minister 2022: ಬ್ರಿಟನ್‌ನ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; Truss - Sunak ಗೆಲುವು ಯಾರಿಗೆ?

UK Prime Minister Election Results 2022: ಭಾರತ ಮೂಲದ ರಿಷಿ ಸುನಕ್‌ ಮತ್ತು ಲಿಜ್‌ ಟ್ರಸ್‌ ನಡುವಿನ ಅಂತಿಮ ಹಣಾಹಣಿಯಲ್ಲಿ ಗೆಲುವು ಯಾರಿಗೆ ಸಿಗಲಿದೆ ಎಂಬುದು ಇಂದು ಸಂಜೆ ತಿಳಿಯಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಫಲಿತಾಂಶ ಹೊರಬೀಳಲಿದೆ.

Liz Truss likely to become UK new Prime Minister result out in the evening
Author
First Published Sep 5, 2022, 3:14 PM IST

ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್‌ ಪ್ರಧಾನಿ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿದ್ದು ಇಂದು ಸಂಜೆ 5 ಗಂಟೆಗೆ ಅಧಿಕೃತ ಘೋಷಣೆಯಾಗಲಿದೆ. ಭಾರತ ಮೂಲದ ರಿಷಿ ಸುನಕ್‌ ಮತ್ತು ಲಿಜ್‌ ಟ್ರಸ್‌ (Rishi Sunak vs Liz Truss) ನಡುವೆ ಜಿದ್ದಾಜಿದ್ದಿನ ಪೈಪೋಟಿಯಿದ್ದು ಯುಕೆಯ ಮುಂದಿನ ಪ್ರಧಾನಿ ಇಬ್ಬರಲ್ಲಿ ಯಾರಾಗಲಿದ್ದಾರೆ ಎಂಬ ಕುತೂಹಲ ಕೇವಲ ಇಂಗ್ಲೆಂಡಿನಲ್ಲಷ್ಟೇ ಅಲ್ಲದೇ ಪ್ರಪಂಚಾದ್ಯಂತ ಸೃಷ್ಟಿಯಾಗಿದೆ. ಇಂಗ್ಲೆಂಡ್‌ಲ್ಲಿ ಭಾರತೀಯರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಮತ್ತು ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್‌ ಭಾರತ ಮೂಲದವರಾಗಿರುವುದರಿಂದ ದೇಶದಲ್ಲಿ ಸಹಜ ಕುತೂಹಲವಿದೆ. ಚುನಾವಣಾ ಪ್ರಕ್ರಿಯೆ ಕಳೆದ ವಾರವೇ ಮುಕ್ತಾಯವಾಗಿತ್ತು ಲಿಜ್‌ ಟ್ರಸ್‌ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನಲಾಗಿತ್ತು. ಆರ್ಥಿಕ ಕುಸಿತ ಕಂಡಿರುವ ಬ್ರಿಟನ್‌ನ ಅಧಿಕಾರ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದು ಸಂಜೆ ತೀರ್ಮಾನವಾಗಲಿದೆ. 

ನಲವತ್ತು ವರ್ಷಗಳ ನಂತರ ಬ್ರಿಟನ್‌ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ದಿನ ನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಗಳಿಕೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಬೋರಿಸ್‌ ಜಾನ್ಸನ್‌ ರಾಜೀನಾಮೆಯ ನಂತರ ಮುಂದಿನ ಪ್ರಧಾನಿ ಆಯ್ಕೆಗೆ ಚುನಾವಣೆ ಆರಂಭವಾಗಿತ್ತು. ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ನಡೆದ ಚುನಾವಣಾ ಪ್ರಕ್ರಿಯೆ ಶನಿವಾರ ಅಂತ್ಯಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಾದರಿಯಲ್ಲಿ ಪ್ರತಿ ಮನೆಗೂ ವಿದ್ಯುತ್‌ ಪುಕ್ಕಟೆಯಾಗಿ ಕೊಡುವ ಭರವಸೆಯನ್ನು ರಿಷಿ ಸುನಕ್‌ ಪ್ರಚಾರದ ವೇಳೆ ನೀಡಿದ್ದರು. ಲಿಜ್‌ ಟ್ರಸ್‌ ಕೂಡ ಪ್ರಚಾರದ ವೇಳೆ ಇಂಧನ ಬೆಲೆ ಇಳಿಕೆ ಮತ್ತು 30 ಬಿಲಿಯನ್‌ ಪೌಂಡ್ಸ್‌ನಷ್ಟು ತೆರಿಗೆಯಲ್ಲಿ ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ಅವರ ಕೈ ಹಿಡಿಯಲಿದೆಯಾ ಎಂಬುದಕ್ಕೆ ಫಲಿತಾಂಶ ಉತ್ತವಾಗಲಿದೆ. 

ಮೊದಲ ಕೆಲ ಸುತ್ತುಗಳ ಮತದಾನದಲ್ಲಿ ರಿಷಿ ಸುನಕ್‌ ಭಾರೀ ಮುನ್ನಡೆ ಕಾದುಕೊಂಡಿದ್ದರು. ಮುಂದಿನ ಪ್ರಧಾನಿ ಇವರೇ ಎನ್ನುವಷ್ಟು ಅವರ ಪರ ಮತದಾನವಾಗಿತ್ತು. ಆದರೆ ಸುತ್ತುಗಳು ಮುಂದುವರೆದಂತೆಲ್ಲಾ ಲಿಜ್‌ ಟ್ರಸ್‌ ರಿಷಿ ಸುನಕ್‌ರನ್ನು ಹಿಂದಿಕ್ಕಿದರು. ಈಗ ಅಂತಿಮ ಹಂತದಲ್ಲಿ ಹೆಚ್ಚು ಮತಗಳನ್ನು ಟ್ರಸ್‌ ಪಡೆದಿದ್ದಾರೆ ಎನ್ನಲಾಗಿದೆ. ಮತದಾನ ತಜ್ಞರು ಈಗಾಗಲೇ ಟ್ರಸ್‌ ಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ. ರಿಷಿ ಸುನಕ್‌ ಇತ್ತೀಚಿನ ಪ್ರತಿಕ್ರಿಯೆ ಅದೇ ರೀತಿಯಲ್ಲಿದೆ. ಸೋಲನ್ನು ಅವರು ಮನಗಂಡಂತೆ ಕಾಣಿಸುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ. 

ಇದನ್ನೂ ಓದಿ: ಅಂತಿಮ ಹಂತಕ್ಕೆ UK President ಚುನಾವಣೆ: ಲಿಜ್‌ ಟ್ರಸ್‌ ಮುಂದೆ Rishi Sunakಗೆ ಸೋಲುವ ಭೀತಿ

ಕಳೆದೆರಡು ತಿಂಗಳುಗಳಿಂದ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಬೋರಿಸ್‌ ಜಾನ್ಸನ್‌ ರಾಜೀನಾಮೆಯ ನಂತರ ತೆರವಾದ ಸ್ಥಾನಕ್ಕೆ ಹಲವರು ಸ್ಪರ್ಧಿಸಿದ್ದರು. ಆದರೆ ಭಾರತ ಮೂಲದ ರಿಷಿ ಸುನಕ್‌ ಮತ್ತು ಲಿಜ್‌ ಟ್ರಸ್‌ ಅಂತಿಮ ಹಂತಕ್ಕೆ ತಲುಪಿದ್ದರು. ಚುನಾವಣೆಯ ಆರಂಭಿಕ ಹಂತದಲ್ಲಿ ರಿಷಿ ಸುನಕ್‌ ಮುಂದಿನ ಪ್ರಧಾನಿಯಾಗುವುದು ಖಚಿತ ಎಂದೇ ಬಿಂಬಿತವಾಗಿತ್ತು. ಆದರೆ ಸಮಯ ಕಳೆದಂತೆ ಲಿಜ್‌ ಟ್ರಸ್‌ ಒಂದೊಂದೇ ಮೆಟ್ಟಿಲು ರಿಷಿ ಸುನಕ್‌ರಿಗೆ ಪೈಪೋಟಿ ನೀಡುತ್ತಾ ಈಗ ಗೆಲ್ಲುವ ಫೇವರೆಟ್‌ ಅನಿಸಿಕೊಂಡಿದ್ದಾರೆ. 

ಪ್ರಧಾನಿಯಾಗಿ ಯಾರೇ ಆಯ್ಕೆಯಾದರೂ ಮುಂದಿನ ಹಾದಿ ಸುಗಮವಾಗಿಲ್ಲ. ಯಾಕೆಂದರೆ ಇಂಗ್ಲೆಂಡ್‌ನ ಆರ್ಥಿಕತೆ ಕುಸಿತ ಕಂಡಿದೆ. ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಅಕ್ಟೋಬರ್‌ ನಂತರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇಂಗ್ಲೆಂಡ್‌ ಹಿಂದೆಂದೂ ಕಂಡರಿಯದಷ್ಟು ಹಣದುಬ್ಬರ ಅನುಭವಿಸುತ್ತಿದೆ. ಪ್ರಧಾನಿಯಾಗಿ ಆಯ್ಕೆಯಾದವರು ಈ ಪರಿಸ್ಥಿತಿಯನ್ನು ನಿಭಾಯಿಸದಿದ್ದರೆ, ಸಾರ್ವಜನಿಕರ ಆಕ್ರೋಶ ಹೆಚ್ಚಲಿದೆ. ಈ ಕಾರಣಕ್ಕಾಗಿಯೇ ಯಾರೇ ಗೆದ್ದರೂ, ಯುದ್ಧ ಗೆದ್ದ ನಂತರವೇ ಆರಂಭವಾಗಲಿದೆ ಎನ್ನುತ್ತವೆ ವರದಿಗಳು. 

ಯಾರಿವರು ರಿಷಿ ಸುನಾಕ್‌:

ವೆಸ್ಟ್‌ ಮಿನಿಸ್ಟರ್‌ನ ಅತ್ಯಂತ ಪ್ರಬಲ ನಾಯಕ ರಿಷಿ ಸುನಾಕ್‌. ಇಂಗ್ಲೆಂಡ್‌ ಕೋವಿಡ್‌ ಬೆಂಬಲಿತ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದರು. ಬೊರಿಸ್‌ ಜಾನ್ಸನ್‌ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಇವರ ಹೆಸರು ಪೇ ಗೇಟ್‌ ಹಗರಣದಲ್ಲಿ ಜಾನ್ಸನ್‌ ಅವರೊಂದಿಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲಿಯೇ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು.

ಇದನ್ನೂ ಓದಿ: ಲಂಡನ್‌ನಲ್ಲಿ ಗೋ ಪೂಜೆ ಮಾಡಿ ಭಾರತೀಯರ ಹೃದಯ ಗೆದ್ದ Rishi Sunak

42 ವರ್ಷದ ರಿಷಿ ಸುನಕ್ ಅವರನ್ನು ಬೋರಿಸ್ ಜಾನ್ಸನ್ 2020ರ ಫೆಬ್ರವರಿಯಲ್ಲಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. ಖಜಾನೆಯ ಚಾನ್ಸಲರ್‌ ಆಗಿ ನೇಮಕವಾಗಿದ್ದ ಇವರು ಮೊದಲ ಬಾರಿಗೆ ಪೂರ್ಣ ಕ್ಯಾಬಿನೆಟ್‌ ಸ್ಥಾನವನ್ನು ಪಡೆದಿದ್ದರು.

Follow Us:
Download App:
  • android
  • ios