ಅಂದು ಕೃಷ್ಣ ನನ್ನ ಕೈಹಿಡಿದ : ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಶಯನ್ ಅಲಿ ಹೇಳಿದಿಷ್ಟು!

ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಮೊಹಮ್ಮದ್ ಶಯನಾ ಅಲಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಚಾರ ಬಹಿರಂಗಪಡಿಸಿದ್ದಾರೆ.

Krishna took my hand what did Pakistani social media star Shayan Mohamed Ali who Returned to Hinduism said akb

ಕರಾಚಿ: ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಮೊಹಮ್ಮದ್ ಶಯನಾ ಅಲಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಚಾರ ಬಹಿರಂಗಪಡಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಅವರು ಮರಳಿ ಮನೆಗೆ (ಘರ್ ವಾಪ್ಸಿ) ಎಂದು ಕರೆದುಕೊಂಡಿದ್ದಾರೆ.  ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಕಳೆದ 2 ವರ್ಷಗಳಿಂದ ನನ್ನ ಪೂರ್ವಜರ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಗಮನಿಸಿದ ನಂತರ, ಇಂದು ನಾನು ನನ್ನ 'ಘರ್ ವಾಪ್ಸಿ' ಯನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ. ನನ್ನನ್ನು ಎಂದಿಗೂ ಬಿಟ್ಟು ಕೊಡದ ಇಸ್ಕಾನ್‌ಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನಿ (Pakistan Agency) ಏಜೆನ್ಸಿಗಳ ಚಿತ್ರಹಿಂಸೆಯಿಂದ ನಾನು 2019 ರಲ್ಲಿ ಪಾಕಿಸ್ತಾನವನ್ನು ತೊರೆಯುವಂತಹ ಸ್ಥಿತಿ ನಿರ್ಮಾಣವಾದಾಗ ನಾನು ಬಹಳ ಖಿನ್ನತೆಗೆ ಒಳಗಾಗಿದ್ದೆ ಹಾಗೂ ಸೋತು ಹೋಗುವವನಿದೆ. ಆದರೆ ನಂತರ 'ಕೃಷ್ಣ' ನನ್ನ ಕೈ ಹಿಡಿದ.  ಮತ್ತು ಆಗ ಆತ ನೀಡಿದ ನೆರವನ್ನು ಈಗ ಹಿಂದಿರುಗಿಸುವ ಸಮಯ ಹಾಗೂ  ನನ್ನ ಪೂರ್ವಜರು (Ancestors) ಹೆಮ್ಮೆ ಪಡುವಂತೆ ಮಾಡುವ ಸಮಯ ಬಂದಿದೆ. ನಾನು ಶೀಘ್ರದಲ್ಲೇ ನನ್ನ ತಾಯ್ನಾಡಿಗೆ ಭೇಟಿ ನೀಡಲಿದ್ದೇನೆ. ನನ್ನ ಅಜ್ಜ ಅಜ್ಜಿಯರು ಮತ್ತು ನನ್ನ ಎಲ್ಲಾ ಪೂರ್ವಜರು ಜನಿಸಿದ್ದ ನೆಲವದು. ಮತ್ತು ಅದು ನನ್ನ ಸ್ವಂತ ತಾಯ್ನೆಲ ಅಲ್ಲಿನ ಮಣ್ಣು ಹಾಗೂ ನನ್ನ ಜನರೊಂದಿಗೆ ನಾನು ಬೆರೆಯುವೆ ಏಕೆಂದರೆ, ಕೊನೆಯಲ್ಲಿ ಮನೆ ಮನೆಯೇ ಆಗಿರುತ್ತದೆ ಎಂದು ಶಯನ್ ಅಲಿ ಬರೆದುಕೊಂಡಿದ್ದಾರೆ.

ಘರ್ ವಾಪ್ಸಿ... ಪ್ರೇಮಿಯ ವಿವಾಹವಾಗಲೂ ಹಿಂದೂ ಧರ್ಮ ಸ್ವೀಕರಿಸಿದ 19 ವರ್ಷದ ಮುಸ್ಲಿಂ ಹುಡುಗಿ

ಓರ್ವ ಸನಾತನಿಯಾಗಿ (Sanatan) ನಾನು ಯಾವುದೇ ಇತರ ಧರ್ಮವನ್ನು ದ್ವೇಷಿಸುವುದಿಲ್ಲ, ಯಾವುದೇ ದ್ವೇಷದ ಭಾಗವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾನು ನಿಮ್ಮ ನಂಬಿಕೆಗಳನ್ನು ಗೌರವಿಸುತ್ತೇನೆ ಮತ್ತು ನೀವೂ ನನ್ನ ನಂಬಿಕೆಯನ್ನು ಗೌರವಿಸಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ನನ್ನ ಗೀತೆಯು ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಅಥವಾ ಅವಳ ಧರ್ಮದ ಹೊರತಾಗಿಯೂ ಗೌರವಿಸಲು ನನಗೆ ಕಲಿಸುತ್ತದೆ.

ಈ ವಿಶೇಷ ದಿನದಂದು, ನನ್ನ ಇಡೀ ಜೀವನದಲ್ಲಿ ನಾನು ತಿಳಿದೋ ಅಥವಾ ತಿಳಿಯದೆಯೋ ಯಾರನ್ನಾದರೂ ನೋಯಿಸಿದಲ್ಲಿ ನಾನು ಕ್ಷಮೆ ಕೇಳಲು ಬಯಸುತ್ತೇನೆ.  ಏಕೆಂದರೆ ಜನರನ್ನು ನೋಯಿಸುವ ಮೂಲಕ ನನ್ನ ಜೀವನದಲ್ಲಿ ಈ ಸುಂದರ ಪ್ರಯಾಣವನ್ನು ಪ್ರಾರಂಭಿಸಲು ನಾನು ಬಯಸುವುದಿಲ್ಲ. ನನ್ನ ಮೂಲಕ್ಕೆ ಮರಳಿರುವುದಕ್ಕೆ ಇಂದು ನನಗೆ ಬಹಳ ಹೆಮ್ಮೆಯಾಗುತ್ತಿದೆ. ನನ್ನ ಪೂರ್ವಜರು ಕೂಡ ಇದೇ ರೀತಿ ಹೆಮ್ಮೆ ಪಡುವರೆಂದು ನಾನು ಭಾವಿಸುವೆ ಎಂದು ಅವರು ಟ್ವಿಟ್ಟರ್‌ನಲ್ಲಿ (Twitter) ಸುದೀರ್ಘವಾದ ಪೋಸ್ಟ್ ಮಾಡಿದ್ದಾರೆ.

Ghar Wapsi : ಒಂದೇ ಕುಟುಂಬದ 9 ಮಂದಿ ಹಿಂದು ಧರ್ಮಕ್ಕೆ ವಾಪಸ್‌

2019ರಲ್ಲಿ ಪಾಕಿಸ್ತಾನ ತೊರೆದಿದ್ದ ಅಲಿ

ಪಾಕಿಸ್ತಾನದಲ್ಲಿ ತೀವ್ರ ಕಿರುಕುಳವನ್ನು ಎದುರಿಸಿದ ನಂತರ 2019 ರಲ್ಲಿ ಪಾಕಿಸ್ತಾನವನ್ನು ತೊರೆದಿದ್ದರು. ದೇಶ ಬಿಡುವುದಕ್ಕೆ ಕಾರಣವಾದ ವಿಚಾರಗಳ ಬಗ್ಗೆ ಅಲಿ ಈ ವರ್ಷದ ಮೇ ತಿಂಗಳಲ್ಲಿ ಟ್ವಿಟ್ ಮಾಡುವ ಮೂಲಕ ತಿಳಿಸಿದ್ದರು.  ಕಾಶ್ಮೀರದ ಕುರಿತಾಗು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಪಿಆರ್ ಮ್ಯೂಸಿಕ್ (PR Music) ವಿಡಿಯೋ ಮಾಡಲು ಅವರುನಿರಾಕರಿಸಿದ ನಂತರ ಅವರನ್ನು ಪಾಕಿಸ್ತಾನದ ಐಎಸ್‌ಐ (ISI) ಹೇಗೆ ಬಿಂಬಿಸಿತ್ತು? ಯಹೂದಿ ಏಜೆಂಟ್ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ(RAW)ದ ಸದಸ್ಯ ಎಂದು ಹೇಗೆ ಆರೋಪಿಸಿತ್ತು ಎಂಬುದರ ಕುರಿತು ಅವರು ಆ ಟ್ವಿಟ್‌ನಲ್ಲಿ ಉಲ್ಲೇಖಿಸಿದ್ದರು. ಮೈ ಸ್ಟೋರಿ ಆಫ್ ಲೀವಿಂಗ್ ಪಾಕಿಸ್ತಾನ್ ಎಂಬ ಶೀರ್ಷಿಕೆಯ ಟ್ವಿಟ್‌ನಲ್ಲಿ ಪಾಕಿಸ್ಥಾನದ ಐಎಸ್‌ಐ ನೀಡಿದ ಕಿರುಕುಳದ ಬಗ್ಗೆ ಅವರು ತಿಳಿಸಿದ್ದಾರೆ. 

 

 

Latest Videos
Follow Us:
Download App:
  • android
  • ios