Ghar Wapsi : ಒಂದೇ ಕುಟುಂಬದ 9 ಮಂದಿ ಹಿಂದು ಧರ್ಮಕ್ಕೆ ವಾಪಸ್‌

  •  9 ಜನರ ಕುಟುಂಬವೊಂದು ಕ್ರಿಶ್ಚಿಯನ್‌ ಧರ್ಮ ತೊರೆದು ಮಾತೃ ಧರ್ಮಕ್ಕೆ
  •   ಒಂದೇ ಕುಟುಂಬದ 9 ಮಂದಿ ಹಿಂದು ಧರ್ಮಕ್ಕೆ ವಾಪಸ್‌
9 People Back To Hinduism in Bhadravathi snr

 ಭದ್ರಾವತಿ (ಡಿ.27):  ತಾಲೂಕಿನ 9 ಜನರ ಕುಟುಂಬವೊಂದು (Family)  ಕ್ರಿಶ್ಚಿಯನ್‌ ಧರ್ಮ (Christianity)  ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ. ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿ ಜಯಶೀಲನ್‌ ಕುಟುಂಬದ 9 ಸದಸ್ಯರು ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ನೇತೃತ್ವದಲ್ಲಿ ಜನ್ನಾಪುರದ ಶ್ರೀರಾಮ ಭಜನಾ ಮಂದಿರದಲ್ಲಿ ಅರ್ಚಕ ಕೃಷ್ಣ ಮೂರ್ತಿ ಸೋಮಯಾಜಿ ಹಾಗೂ ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು. 

ಮೂಲತಃ ಹಿಂದೂ (Hindhu) ಧರ್ಮದವರಾದ ಜಯಶೀಲನ್‌ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರಮುಖರು ಕುಟುಂಬ ಸದಸ್ಯರನ್ನು ಅಭಿನಂದಿಸಿದರು. ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

"

ಘರ್ ವಾಪಸಿಗೆ ಕರೆ ಕೊಟ್ಟ ತೇಜಸ್ವಿ ಸೂರ್ಯ :  ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ (BJP national Yuva Morcha president) ಮತ್ತು ಸಂಸದ ತೇಜಸ್ವಿ ಸೂರ್ಯ (MP Tejasvi Surya) ಅವರು ಡಿಸೆಂಬರ್ 25 ರಂದು ನಿಡಿರುವ ಹೇಳಿಕೆಯೊಂದು ವಿವಾದ ಸೃಷ್ಟಿಸಲಾರಂಭಿಸಿದೆ. ಹೌದು ಘರ್‌ ವಾಪಸಿ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ "ಎಲ್ಲಾ ಧಾರ್ಮಿಕ ಮಠಗಳು ಇತರ ಧರ್ಮದ ಜನರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರಲು ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.

ಡಿಸೆಂಬರ್ 25, ಶನಿವಾರ ಶ್ರೀಕೃಷ್ಣ ಮಠದ ವಿಶ್ವಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ ಮತಾಂತರ ತಡೆ ಹಾಗೂ ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಕರೆತರುವ ಕೆಲಸ ಯುದ್ಧಕ್ಕೆ ನಡೆಯುವ ತಯಾರಿಯಂತರ ನಡೆಯಬೇಕು. ಘರ್ ವಾಪಸಿ ಬಿಟ್ಟು ಬೇರೆ ದಾರಿ ಇಲ್ಲ ಎಂದೂ ಯುವ ಸಂಸದರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶಾಸಕ ರಘುಪತಿ ಭಟ್, ಹೋಟೆಲ್ ಉದ್ಯಮಿ ಬಿಪಿ ರಾಘವೇಂದ್ರರಾವ್ ಉಪಸ್ಥಿತರಿದ್ದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಜಾತ್ಯತೀತತೆಯು ಹಿಂದೂಗಳ ಮೇಲೆ ಪರಿಣಾಮ ಬೀರಿದೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ದೌರ್ಜನ್ಯವನ್ನು ಖಚಿತಪಡಿಸಿದೆ ಎಂದೂ ಉಲ್ಲೇಖಿಸಿದ್ದಾರೆ.

ಹಿಂದೂಗಳ ಮೇಲಿನ ದೌರ್ಜನ್ಯ ಅವರ ಸ್ವಾಭಿಮಾನ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಸೂರ್ಯ ಹೇಳಿದ್ದಾರೆ. “ನಾವು ಈ ದೇಶದಲ್ಲಿ ರಾಮಮಂದಿರವನ್ನು ನಿರ್ಮಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ. ನಾವು ಪಾಕಿಸ್ತಾನದ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಬೇಕು. ಘರ್ ವಾಪಸಿಗೆ ಆದ್ಯತೆ ನೀಡಬೇಕು. ಅಖಂಡ ಭಾರತ ಕಲ್ಪನೆಯಲ್ಲಿ ಪಾಕಿಸ್ತಾನವೂ ಸೇರಿದೆ. ಈ ನಿಟ್ಟಿನಲ್ಲಿ ಮಠಗಳು ಮತ್ತು ದೇವಸ್ಥಾನಗಳು ಮುಂದಾಳತ್ವ ವಹಿಸಬೇಕು,' ಎಂದಿದ್ದಾರೆ.

ಹಿಂದೂ ಧರ್ಮ ದುರ್ಬಲವಾಗಲು ಕಮ್ಯುನಿಸಂ ಮತ್ತು ವಸಾಹತುಶಾಹಿ ಕಾರಣ ಎಂದು ಆರೋಪಿಸಿರುವ ತೇಜಸ್ವಿ ಸೂರ್ಯ ಟಿಪ್ಪು ಜಯಂತಿ ಆಚರಿಸಲು ಒತ್ತಾಯಿಸುವವರು ಕಲಾಂ ಜಯಂತಿ ಅಥವಾ ಶಿಶುನಾಳ ಷರೀಫ ಜಯಂತಿ ಆಚರಿಸಲು ಒತ್ತಾಯಿಸಿದ್ದಾರೆಯೇ? ಇದೇ ವ್ಯತ್ಯಾಸ ಎಂದು ಅವರು ಪ್ರತಿಪಾದಿಸಿದ್ದಾರೆ.

ಹೆಚ್ಚುತ್ತಿರುವ ವಿರೋಧದ ನಡುವೆಯೂ ಕರ್ನಾಟಕ ವಿಧಾನಸಭೆಯು ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ಎರಡು ದಿನಗಳ ನಂತರ ತೇಜಸ್ವಿ ಸೂರ್ಯ ಈ ಹೇಳಿಕೆ ನೀಡಿದ್ದಾರೆಂಬುವುದು ಉಲ್ಲೇಖನೀಯ. 

ದೇಗುಲಗಳ ರಕ್ಷಣೆ ಹೆಸರಿನಲ್ಲಿ ಲಾಭಕ್ಕೆ ಯತ್ನ : ಮಂದಿರ ರಕ್ಷಣೆ ಹೋರಾಟದಲ್ಲಿ 5 ಪರ್ಸೆಂಟ್‌ ಲಾಭ ತೆಗೆದುಕೊಳ್ಳೋಣ ಎಂದು ಕಾಂಗ್ರೆಸ್‌ ಹೊರಟಿದೆ ಎಂದು ಬೆಂಗಳೂರು ದಕ್ಷಿಣ ಸಂಸದ  ತೇಜಸ್ವಿ  ವ್ಯಂಗ್ಯವಾಡಿದ್ದಾರೆ.  ನಂಜನಗೂಡಿನ ಹುಚ್ಚಗಣಿ ದೇವಾಲಯ ತೆರವು ವಿರೋಧಿಸಿ ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರಿಗೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂದಿರ ರಕ್ಷಣೆ ಹೋರಾಟದಲ್ಲಿ ತಮಗೂ 5 ಪರ್ಸೆಂಟ್‌ ಲಾಭ ಬರಲಿ ಅಂತಾ ಕಾಂಗ್ರೆಸ್‌ ಯೋಚಿಸುತ್ತಿದೆ. ಹೀಗಾಗಿ ರಾತ್ರೋರಾತ್ರಿ ಮಂದಿರದ ಬಗ್ಗೆ ಪ್ರೀತಿ ಬಂದಿದೆ ಎಂದು ಹೇಳಿದರು. ಆಷಾಡಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬುವುದಿಲ್ಲ. ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ಜನಕ್ಕೆ ಗೊತ್ತಿದೆ. ನಾಟಕ ಮಾಡುವುದನ್ನು ಕಾಂಗ್ರೆಸ್‌ ಮೊದಲು ನಿಲ್ಲಿಸಲಿ ಎಂದಿದ್ದರು. 

Latest Videos
Follow Us:
Download App:
  • android
  • ios