ಕಶಿಶ್ ಚೌಧರಿ ಬಲೂಚಿಸ್ತಾನದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡ ಮೊದಲ ಹಿಂದೂ ಮಹಿಳೆ. 25 ವರ್ಷದ ಚೌಧರಿ ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಈ ಹುದ್ದೆ ಅಲಂಕರಿಸಿದ್ದಾರೆ. ಮಹಿಳೆಯರ ಪ್ರಗತಿ, ಅಲ್ಪಸಂಖ್ಯಾತರ ಬೆಂಬಲ ಮತ್ತು ಪ್ರಾಂತ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.
ಪಾಕಿಸ್ತಾನದ ಬಳಿಕ ಇದೀಗ ಪಾಕಿಸ್ತಾನದ ವಿರುದ್ಧ ಸೆಟೆದು ನಿಂತಿರುವ ಬಲೂಚಿಸ್ತಾನದಲ್ಲಿಯೂ ಮೊದಲ ಹಿಂದೂ ಮಹಿಳೆ ಹವಾ ಶುರುವಾಗಿದೆ. ಜುಲೈ 2022 ರಲ್ಲಿ, ಮಣೇಶ್ ರೋಪೆಟಾ ಕರಾಚಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಅಲ್ಲಿ ಅವರು ಇನ್ನೂ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಿದ್ದಾರೆ. 35 ವರ್ಷದ ಪುಷ್ಪಾ ಕುಮಾರಿ ಕೊಹ್ಲಿ ಕೆಲವು ವರ್ಷಗಳ ಹಿಂದೆ ಸಿಂಧ್ ಸಾರ್ವಜನಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ಕರಾಚಿ ಪೊಲೀಸರಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ ಸುಮನ್ ಪವನ್ ಬೋದಾನಿ ತಮ್ಮ ತವರು ಸಿಂಧ್ ಪ್ರಾಂತ್ಯದ ಶಹದದ್‌ಕೋಟ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಇನ್ನೂ ಹೈದರಾಬಾದ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರ ಸಾಲಿಗೆ ಸೇರಿದ್ದಾರೆ 25 ವರ್ಷದ ಕಶಿಶ್ ಚೌಧರಿ.
ಪಾಕಿಸ್ತಾನದಲ್ಲಿ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ ಕಶಿಶ್ ಚೌಧರಿ ಅವರನ್ನು ಅಲ್ಪಸಂಖ್ಯಾತ ಸಮುದಾಯದಿಂದ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ, ಈ ಹುದ್ದೆ ಏರಿದ ಮೊದಲ ಹಿಂದೂ ಮಹಿಳೆ ಎನ್ನಿಸಿದ್ದಾರೆ ಕಶಿಶ್. ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದಲ್ಲಿ ಸೇನೆಯಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ, ಹೆಣ್ಣು ಮುಟ್ಟದ ಕ್ಷೇತ್ರ ಎನ್ನಿಸಿಕೊಂಡಿರುವ ಕ್ಷೇತ್ರಗಳಿಗೂ ಹೆಣ್ಣುಮಕ್ಕಳು ಲಗ್ಗೆ ಇಡುತ್ತಿರುವ ಈ ಹೊತ್ತಿನಲ್ಲಿ, ಮುಸ್ಲಿಂ ರಾಷ್ಟ್ರಗಳಲ್ಲಿಯೂ ಹಿಂದೂ ಹೆಣ್ಣುಮಕ್ಕಳಿಗೆ ಈ ರೀತಿಯ ಮನ್ನಣೆ ಸಿಗುತ್ತಿರುವುದು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.
Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್
ಮಹಿಳೆಯರ ಪ್ರಗತಿಗೆ ಶ್ರಮಿಸುವುದು, ಅಲ್ಪಸಂಖ್ಯಾತ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಪ್ರಾಂತ್ಯದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವುದಾಗಿ ಕಶಿಶ್ ತಿಳಿಸಿದ್ದಾರೆ. ಬಲೂಚಿಸ್ತಾನ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಕಶಿಶ್ ಚೌಧರಿ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಂದು, ಕಶಿಶ್ ಮತ್ತು ಅವರ ತಂದೆ ಗಿರ್ಧಾರಿ ಲಾಲ್ ಅವರು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಅವರನ್ನು ಭೇಟಿ ಮಾಡಲು ಕ್ವೆಟ್ಟಾಗೆ ಪ್ರಯಾಣ ಬೆಳೆಸಿದರು. ಬಳಿಕ ಅವರು ಅಧಿಕಾರ ವಹಿಸಿಕೊಂಡರು.
25 ವರ್ಷದ ಕಶಿಶ್ ಅವರು, ಚಾಗೈ ಜಿಲ್ಲೆಯ ದೂರದ ಪಟ್ಟಣವಾದ ನೋಶ್ಕಿಯವರಾಗಿದ್ದಾರೆ. ಮಧ್ಯಮ ಮಟ್ಟದ ವ್ಯಾಪಾರಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ, ತಮ್ಮ ಮಗಳು ಯಾವಾಗಲೂ ಅಧ್ಯಯನ ಮಾಡಲು ಮತ್ತು ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲು ಬಯಸುತ್ತಿದ್ದಳು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. "ನನ್ನ ಮಗಳು ತನ್ನ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಹಾಯಕ ಆಯುಕ್ತಳಾಗಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ" ಎಂದು ಅವರು ವರದಿಗಾರರಿಗೆ ತಿಳಿಸಿದರು. ಅಲ್ಪಸಂಖ್ಯಾತ ಸಮುದಾಯಗಳ ಜನರು ಸಮರ್ಪಣೆ ಮತ್ತು ಪ್ರಯತ್ನದ ಮೂಲಕ ಅಂತಹ ಸ್ಥಾನಗಳನ್ನು ತಲುಪಿದ್ದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಮುಖ್ಯಮಂತ್ರಿ ಬುಗ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಕ್ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್ ಸಿಂದೂರ'ದ ಹೀರೋ ಸ್ಟೋರಿ ಇದು!


