ಇರಾನ್‌ ಸರ್ವೋಚ್ಚ ನಾಯಕನ ನಿವಾಸದ ಮೇಲೆ ಫೆ.28ರಂದು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಪರಿವಾರದ ಅನೇಕರು ಸಾವನ್ನಪ್ಪಿದರೂ, ಪ್ರಸ್ತುತ ತಂದೆಯ ಸ್ಥಾನಕ್ಕೇರಿರುವ ಮೊಜ್ತಬಾ ಖಮೇನಿ ಮಾತ್ರ ಸ್ವಲ್ಪದರಲ್ಲಿಯೇ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದರು

ಟೆಹ್ರಾನ್‌: ಇರಾನ್‌ ಸರ್ವೋಚ್ಚ ನಾಯಕನ ನಿವಾಸದ ಮೇಲೆ ಫೆ.28ರಂದು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಪರಿವಾರದ ಅನೇಕರು ಸಾವನ್ನಪ್ಪಿದರೂ, ಪ್ರಸ್ತುತ ತಂದೆಯ ಸ್ಥಾನಕ್ಕೇರಿರುವ ಮೊಜ್ತಬಾ ಖಮೇನಿ ಮಾತ್ರ ಸ್ವಲ್ಪದರಲ್ಲಿಯೇ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದರು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಅಂದು ನಡೆದ ದಾಳಿಯಲ್ಲಿ ಮೊಜ್ತಬಾ ಸಾವನ್ನಪ್ಪಿದ್ದಾರೆ, ಇಲ್ಲವೇ, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವದಂತಿಗಳ ನಡುವೆಯೇ ಮೊಜ್ತಬಾ ಕುರಿತ ರಹಸ್ಯ ವಿಷಯದ ಕುರಿತು ‘ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆ.

ಬಹಿರಂಗವಾಗಿದ್ದು ಹೇಗೆ?

ಇರಾನ್‌ನ ಉನ್ನತಾಧಿಕಾರಿಗಳು ಮತ್ತು ಐಆರ್‌ಜಿಸಿ ಕಮಾಂಡರ್‌ಗಳ ನಡುವೆ ಮಾ.12ರಂದು ನಡೆದ ಸಭೆಯ ಸಂಭಾಷಣೆಯ ಸೋರಿಕೆಯಾದ ತುಣುಕನ್ನು ಉಲ್ಲೇಖಿಸಿ ಈ ವರದಿಯನ್ನು ಮಾಡಲಾಗಿದೆ. ‘ದಾಳಿಯ ಸ್ವಲ್ಪ ಹೊತ್ತಿಗೂ ಮುನ್ನ ಆ ಕಟ್ಟಡದ ಅಂಗಳಕ್ಕೆ ಹೋಗಿದ್ದರಿಂದ ಮೊಜ್ತಬಾ ದೇವರ ದಯೆಯಿಂದ ಬದುಕಿದರು. 

ಒಟ್ಟು 3 ಕ್ಷಿಪಣಿಗಳು

ಒಟ್ಟು 3 ಕ್ಷಿಪಣಿಗಳು ಹಾರಿಬಂದಿದ್ದು, ಒಂದು ಅಯತೊಲ್ಲಾ ಇದ್ದ ಕಡೆ, ಇನ್ನೊಂದು ಅವರ ನಿವಾಸಕ್ಕೆ ಮತ್ತು ಮೂರನೆಯದು ಅವರ ಭಾವನ ಮನೆಗೆ ಅಪ್ಪಳಿಸಿತು. ಆ ವೇಳೆ ಮೆಟ್ಟಿಲು ಹತ್ತುತ್ತಿದ್ದ ಮೊಜ್ತಬಾ ಕಾಲಿಗೆ ಗಾಯವಾಯಿತು’ ಎಂದು ಅಲಿ ಖಮೇನಿಯ ದಿನಚರಿಯನ್ನು ನಿರ್ಧರಿಸುತ್ತಿದ್ದ ಮಜಾಹಿರ್ ಹೊಸೇನಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ದಾಳಿಯಲ್ಲಿ ಮೊಜ್ತಬಾರ ಪತ್ನಿ ಮೃತಪಟ್ಟಿದ್ದರು.

ಮೊಜ್ತಬಾ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ರಷ್ಯಾಗೆ ರವಾನಿಸಲಾಗಿದೆ ಎಂಬೆಲ್ಲಾ ವರದಿಗಳ ನಡುವೆ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.