Asianet Suvarna News Asianet Suvarna News

ಜನಪ್ರಿಯ GIF ಗ್ರಿನ್ನಿಂಗ್ ಗರ್ಲ್ ಆತ್ಮಹತ್ಯೆ: 16ಕ್ಕೆ ಬದುಕಿಗೆ ಗುಡ್‌ಬೈ ಹೇಳಿದ ಪೋಸಿ

  • ಖ್ಯಾತ ಜಿಐಎಫ್‌ ಗ್ರಿನ್ನಿಂಗ್ ಗರ್ಲ್ ಆತ್ಮಹತ್ಯೆ
  • 16ರ ಹರೆಯದಲ್ಲೇ ಬದುಕಿಗೆ ಗುಡ್‌ಬೈ ಹೇಳಿದ ಪೋಸಿ
  • ವಾಷಿಂಗ್ಟನ್‌ನಲ್ಲಿ ಕೈಲಿಯಾ ಪೋಸಿ ನಿಧನ
Kailia Posey, The Grinning Girl in Popular GIF Dies by Suicide akb
Author
Bangalore, First Published May 5, 2022, 9:39 AM IST

ಖ್ಯಾತ ಜಿಐಎಫ್‌ ಪಾತ್ರಧಾರಿ  ಗ್ರಿನ್ನಿಂಗ್ ಗರ್ಲ್ (ರಂಜನಾತ್ಮಕವಾಗಿ ನಗುವ ಹುಡುಗಿ) ಎಂದೆ ಖ್ಯಾತಿಯಾಗಿದ್ದ ಕೈಲಿಯಾ ಪೋಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ 16ರ ಹರೆಯದಲ್ಲೇ ಬದುಕಿಗೆ ಗುಡ್‌ ಬೈ ಹೇಳಿದ್ದಾರೆ. ತನ್ನ ವೈರಲ್ ಗ್ರಿನಿಂಗ್ ಜಿಐಎಫ್‌ನಿಂದ ಅಂತರ್ಜಾಲದಲ್ಲಿ ಜನಪ್ರಿಯ ಮುಖವಾಗಿದ್ದ ಕೈಲಿಯಾ ಪೋಸಿ ವಾಷಿಂಗ್ಟನ್‌ನಲ್ಲಿ 16 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ನೀವು ಸಾಮಾಜಿಕ ಜಾಲತಾಣ ಬಳಕೆ ಮಾಡುವುವರಾಗಿದ್ದರೆ ನಿಮಗೆ ಜಿಐಎಫ್‌ (graphics interchange format) ಬಗ್ಗೆ ಚೆನ್ನಾಗಿ ತಿಳಿದಿರುತ್ತೆ. ಅದರಲ್ಲಿ ಸಂಭಾಷಣೆಗೆ ತಕ್ಕಂತೆ ಮ್ಯಾಚ್‌ ಆಗುವ ಜಿಐಎಫ್‌ ಗಳನ್ನು ನೀವು ಪರಸ್ಪರ ಒಬ್ಬರಿಗೊಬ್ಬರು ಕಳುಹಿಸಿ ಖುಷಿ ಪಡಬಹುದು.

ಈಕೆ ಬಾಲ್ಯದಲ್ಲೇ ರಿಯಾಲಿಟಿ ಟಿವಿ ತಾರೆಯಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮದ ತುಂಬಾ ಅಭಿಮಾನಿಗಳನ್ನು ಹೊಂದಿದ್ದ ಸಕ್ರಿಯ ವ್ಯಕ್ತಿಯಾಗಿದ್ದರು. ಕೈಲಿಯಾ ಅವರ ನಗುವ ಮುಖದ  GIF ಸದಾ ಕಾಲ ಸಾಮಾಜಿಕ ಜಾಲತಾಣ ಬಳಕೆದಾರರನ್ನು ನಗುವಂತೆ ಮಾಡುತ್ತಿತ್ತು. ಕೈಲಿಯಾ ತಾಯಿ ಮಾರ್ಸಿ ಪೋಸಿ ಗ್ಯಾಟರ್‌ಮ್ಯಾನ್ (Marcy Posey Gatterman) ಫೇಸ್‌ಬುಕ್‌ನಲ್ಲಿ (Facebook) ಈ ಹೃದಯವಿದ್ರಾವಕ ಸುದ್ದಿಯನ್ನು ಪ್ರಕಟಿಸಿದ್ದಾರೆ. "ನನಗೆ ಇದನ್ನು ತಿಳಿಸಲು ಯಾವುದೇ ಪದಗಳು ಅಥವಾ ಯಾವುದೇ ಯೋಚನೆ ಹೊಳೆಯುತ್ತಿಲ್ಲ. ಸುಂದರ ಹೆಣ್ಣು ಮಗು ಹೊರಟು ಹೋದಳು. ಕೈಲಿಯಾಳನ್ನು ಕಳೆದುಕೊಂಡು ದುಃಖಿಸುತ್ತಿರುವಾಗ ದಯವಿಟ್ಟು ನಮಗೆ ಖಾಸಗಿತನ ನೀಡಿ. ನನ್ನ ಮಗು ಶಾಶ್ವತವಾಗಿ ಹೊರಟು ಹೋದಳು'ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೆನಡಾದ (Canada) ಗಡಿಯಿಂದ ಕಿಲೋಮೀಟರ್ ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ (Washington state) ಬಿರ್ಚ್ ಬೇ ಸ್ಟೇಟ್ ಪಾರ್ಕ್‌ನಲ್ಲಿ (Birch Bay State Park)  ಕೈಲಿಯಾ ಶವ ಪತ್ತೆಯಾಗಿದೆ.

ನಿರಂತರ ಸಿಗರೇಟ್‌ ಸೇದುತ್ತಿದ್ದೆ, ಕುಡಿಯುತ್ತಿದ್ದೆ: ಕೈ ಕತ್ತರಿಸಿಕೊಂಡ ನಟಿ ಶಾಕಿಂಗ್ ಹೇಳಿಕೆ!

ಗಮನಾರ್ಹವಾಗಿ, ಕೈಲಿಯಾ ಕೇವ 5 ವರ್ಷ ವಯಸ್ಸಿನವರಿರುವಾಗಲೇ  TLC ಯ ಟೊಡ್ಲಾರ್ಸ್‌ & ಟಿಯಾರಾಸ್‌ನಲ್ಲಿ ಕಾಣಿಸಿಕೊಂಡು ನಂತರ ಪ್ರಸಿದ್ಧರಾಗಿದ್ದರು. ಈ ಪ್ರದರ್ಶನದ ಸಮಯದಲ್ಲಿ ಆಕೆಯ ಸಂತೋಷದ ಅಭಿವ್ಯಕ್ತಿಯ GIF ಪ್ರಪಂಚದಾದ್ಯಂತ ವೈರಲ್ ಆಯಿತು ಮತ್ತು ಶೀಘ್ರದಲ್ಲೇ ಜನಪ್ರಿಯ ಮೆಮೆ ಮತ್ತು GIF ಆಯಿತು.

TMZ ಮಾಧ್ಯಮದ ವರದಿಯ ಪ್ರಕಾರ, ಕೈಲಿಯಾ ಅವರ ಕುಟುಂಬವು ಆಕೆ ಸಾವಿಗೀಡಾಗಿದ್ದಾಳೆ ಎಂಬುದನ್ನು ದೃಢಪಡಿಸಿದೆ. ಕೈಲಿಯಾ ಮುಂದೆ ಉಜ್ವಲ ಭವಿಷ್ಯವನ್ನು ಹೊಂದಿದ್ದ ನಿಪುಣ ಹದಿಹರೆಯದವಳಾಗಿದ್ದರೂ, ದುರದೃಷ್ಟವಶಾತ್ ಒಂದು ಪ್ರಚೋದನೆಯ ಕ್ಷಣದಲ್ಲಿ ಅವಳು ತನ್ನ ಐಹಿಕ ಜೀವನವನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರವನ್ನು ಮಾಡಿದಳು ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಕಿರುತೆರೆ ನಟ ಆತ್ಮಹತ್ಯೆಗೆ ಶರಣು: ನಿಗೂಢ ಸಾವಿನ ತನಿಖೆ ಶುರು!

ಆಕೆಯನ್ನು ಉತ್ತಮ ಸಾಧಕಿ ಎಂದು ಕರೆದ ಆಕೆಯ ಕುಟುಂಬವು ಆಕೆ ತನ್ನ ಜೀವನವಿಡೀ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಲೆಕ್ಕವಿಲ್ಲದಷ್ಟು ಕಿರೀಟಗಳು ಮತ್ತು ಟ್ರೋಫಿಗಳನ್ನು ಗೆದ್ದರು. ಕನ್‌ಟೋರ್ಷನಿಸ್ಟ್ (ಕನ್‌ಟೋರ್ಷನಿಸ್ಟ್ ಎಂದರೆ ಆಂಗಿಕ ಹಾವಭಾವದ ಮೂಲಕ ಮನೋರಂಜನೆ ಮಾಡುವ ಒಂದು ವಿಧಾನ) ಆಗಿ ಆಕೆ ಹೆಚ್ಚು ಜನಪ್ರಿಯವಾಗಿದ್ದ ಆಕೆಗೆ ಹಲವು ಈಗಾಗಲೇ ವೃತ್ತಿಪರ ಟೂರಿಂಗ್ ಉದ್ಯೋಗದ ಹಲವು ಆಫರ್‌ಗಳು ಬಂದಿದ್ದವು. 
 

Follow Us:
Download App:
  • android
  • ios