ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬರಲು ಕಾರಣವೇನು ಎಂದು ಲಾಕಪ್ ರಿಯಾಲಿಟಿ ಶೋನಲ್ಲಿ ರಿವೀಲ್ ಮಾಡಿದ ನಟಿ. 

ಬಾಲಿವುಡ್‌ನ ಸೆನ್ಸೇಷನಲ್ ರಿಯಾಲಿಟಿ ಶೋ ಲಾಕಪ್‌ನಲ್ಲಿ ನಟಿ ಪಾಯಲ್ ರೋಹಟಗಿ ಸ್ಪರ್ಧಿಸುತ್ತಿದ್ದಾರೆ. ಎಂಟ್ರಿ ಕೊಟ್ಟ ದಿನದಿಂದಲ್ಲೂ ಸೆನ್ಸೇಷನಲ್ ಹೇಳಿಕೆ ಕೊಟ್ಟು ಬ್ರೇಕಿಂಗ್‌ ನ್ಯೂಸ್‌ ಕ್ವೀನ್‌ ಎನ್ನುವ ಕಿರೀಟ ಪಡೆದುಕೊಂಡಿದ್ದಾರೆ. ಎಲಿಮಿನೇಷನ್‌ ಝೋನ್‌ಗೆ ಬಂದಾಗಲೇ ಪಾಯಲ್‌ ಶಾಕಿಂಗ್ ಹೇಳಿಕೆ ನೀಡುವುದು. ತಮ್ಮ ವ್ಯಕ್ತಿತ್ವ ಮತ್ತು ಲೈಫ್‌ಸ್ಟೈಲ್‌ಗೆ ವಿರುದ್ಧವಾದ ಕೇಳಿಕೆ ಕೊಟ್ಟ ವೀಕ್ಷಕರಿಗೆ ಕನ್ಫ್ಯೂಸ್ ಮಾಡುತ್ತಾರೆ. ಅತಂಹ ಘಟನೆ ಮತ್ತೆ ನಡೆದಿದೆ.

ಪಾಯಲ್ ಹೇಳಿಕೆ:

ಲಾಕಪ್‌ಗೂ ಮೊದಲು ಪಾಯಲ್ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಸುತ್ತಿದ್ದರು. ಆ ರಿಯಾಲಿಟಿ ಶೋನಲ್ಲಿ ಪ್ರೀತಿ ವಿಚಾರ ಎಳೆದು ನೆಗೆಟಿವ್ ಆಂಗಲ್ ಕೊಟ್ಟು ನನ್ನ ವೈಯಕ್ತಿಕ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ನೆಗೆಟಿವ್ ಇಮೇಜ್‌ನಿಂದ ನಾನು ಕುಡಿಯಲು ಶುರು ಮಾಡಿದೆ ಈ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಅಲ್ಲದೆ ಕೈ ಕೂಡ ಕಟ್ ಮಾಡಿಕೊಂಡೆ ಎಂದು ಹೇಳಿಕೊಂಡಿದ್ದಾರೆ. 

ಆ ನಿರ್ಮಾಪಕರ ಜೊತೆ ಕೆಲಸ ಮಾಡುವುದಕ್ಕೆ ವಶೀಕರಣ ಮಾಡಿಸಿದೆ: ನಟಿ ಶಾಕಿಂಗ್ ಹೇಳಿಕೆ!

'ನನ್ನ ಹಿಂದಿನ ರಿಯಾಲಿಟಿ ಶೋ ನನ್ನನ್ನು ಫೇಮಸ್ ಮಾಡಿತ್ತು ಆದರೆ ನೆಗೆಟಿವ್ ರೀತಿಯಲ್ಲಿ. ಶೋನಲ್ಲಿ ಒಬ್ಬರು ಹೇಳಿದ್ದರು ನಿನಗೆ ಪಿಜಾ ಬೇಕಿದ್ದರೆ ತಿನ್ನು ಇಲ್ಲ ಪಾವ್ ಬಾಜಿ ಬೇಕಿದ್ದರೆ ತಿನ್ನು ಏನ್ ಬೇಕಿದ್ದರೂ ಮಾಡಿಕೋ ಎಂದು ನಾನು ಆ ರೀತಿ ವ್ಯಕ್ತಿ ಆಗಿಬಿಟ್ಟೆ. ಕ್ಯಾರೆಕ್ಟರ್‌ನ ನೆಗೆಟಿವ್ ಆಗಿ ತೋರಿಸಿದಕ್ಕೆ ನಾನು ಹೆಚ್ಚಿಗೆ ಕುಡಿಯಲು ಶುರು ಮಾಡಿದೆ. 48 ಗಂಟೆ ನಿರಂತರವಾಗಿ ಕುಡಿಯುತ್ತಿದ್ದೆ. ನನ್ನ ತಾಯಿಗೆ ಈ ವಿಚಾರ ಗೊತ್ತಿಲ್ಲ ತಂದೆ ನಮ್ಮ ಜೊತೆಗಿಲ್ಲ' ಎಂದು ಪಾಯಲ್ ಹೇಳಿದ್ದಾರೆ.

'ಎಷ್ಟರ ಮಟ್ಟಕ್ಕೆ ನಾನು ಕುಡಿಯುತ್ತಿದ್ದೆ ಅಂದ್ರೆ ಹಗಲು ಯಾವಾಗ ಆಯ್ತು ರಾತ್ರಿ ಯಾವಾಗ ಆಯ್ತು ಅನ್ನೋದೇ ಗೊತ್ತು ಆಗುತ್ತಿರಲಿಲ್ಲ. ಇದರಿಂದ ಹೊರ ಬರಲು ವೈದ್ಯರು ಕೊಡುತ್ತಿದ್ದ ಮಾತರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ತುಂಬಾ ಸಿಗರೇಟ್‌ ಸೇದುತ್ತಿದ್ದೆ. ನನಗೆ ಒಳ್ಳೆ ಹುಡುಗ ಸಂಗಾತಿಯಾಗಿ ಸಿಕ್ಕರೆ ಇದೆಲ್ಲಾ ಅಭ್ಯಾಸಗಳನ್ನು ಬಿಡುತ್ತೀನಿ ಎಂದು ದೇವರಿಗೆ ಪ್ರಾರ್ಥನೆ ಮಾಡಿಕೊಂಡೆ. ಎಷ್ಟ ಮಟ್ಟಕ್ಕೆ ಮನಸ್ಸು ಹಾಳಾಗಿತ್ತು ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳು ನಿರ್ಧಾರ ಮಾಡಿದೆ. ಆಗ ನಾನು ಕೈ ಕೂಡ ಕಟ್ ಮಾಡಿಕೊಂಡೆ. ಆ ಸಮಯದಲ್ಲಿ ನಾನು ಒಂಟಿಯಾಗಿ ಜೀವನ ಮಾಡುತ್ತಿದ್ದೆ. Sangram ನನ್ನ ಜೀವನಕ್ಕೆ ಬಂದಾಗಿನಿಂದಲೂ ನನಗೆ ಫ್ರೆಂಡ್ಸ್‌ ಅಂತ ಯಾರೂ ಇಲ್ಲ' ಎಂದು ಪಾಯಲ್ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ.

ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?

ಈ ಕೆಟ್ಟ ಚಟದಿಂದ ಹೊರ ಬರಲು ನಾನು rehab ಸೇರಿಕೊಂಡೆ ಆದರೆ ಈಗಲೂ ನಾನು ಡ್ರಗ್ಸ್‌ ವಸ್ತು ಅಥವಾ ಸಿರಪ್ ನೋಡಿದರೆ ಆಸೆ ಆಗತ್ತದೆ ಎಂದು ಹೇಳಿದ ಪಾಯಲ್‌ ತಂದೆಗೆ ಕಾಲ್ ಮಾಡಿದ ಘಟನೆ ನೆನಪಿಸಿಕೊಂಡರು. 'ನಮಗೆ ನಿಮ್ಮ ಸಪೋರ್ಟ್ ಬೇಕು ದಯವಿಟ್ಟು ವಾಪಸ್ ಬನ್ನಿ. ನನಗೆ ನರ್ವಸ್‌ ಬ್ರೇಕ್‌ಡೌನ್‌ ಆಗುತ್ತಿದೆ. ಸಾಯುವುದಕ್ಕೆ ಇಷ್ಟ ಇಲ್ಲ ನಾನು ಬದುಕಬೇಕು ಆದರೆ ಕಂಟ್ರೋಲ್ ಮಾಡುವುದಕ್ಕೆ ಆಗುತ್ತಿಲ್ಲ' ಎಂದಿದ್ದಾರೆ ಪಾಯಲ್.