ಭುಗಿಲೆದ್ದ ಇಸ್ರೇಲ್ ಇರಾನ್ ನಡುವಣ ಬಿಕ್ಕಟ್ಟು: ಬೈಡೆನ್ ಜೊತೆ ಇಸ್ರೇಲ್ ಅಧ್ಯಕ್ಷರ ಚರ್ಚೆ

ಇಸ್ರೇಲ್ ಮೇಲೆ ಇರಾನ್ ದಾಳಿಯ ಹಿನ್ನೆಲೆ ಇಸ್ರೇಲ್ ಅಧ್ಯಕ್ಷ ನೆತನ್ಯಾಹು, ಅಮೆರಿಕಾ ಅಧ್ಯಕ್ಷ ಬೈಡೆನ್ ಹಾಗೂ ವಿಶ್ವಸಂಸ್ಥೆ ಜೊತೆ ಮಾತುಕತೆ ನಡೆಸಿದ್ದು, ಯುಎಸ್ ಭದ್ರತಾ ಮಂಡಳಿಗೆ ತುರ್ತು ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ.. ಇಸ್ರೇಲ್ ಕೋರಿಕೆಯ ಮೇರೆಗೆ ಅಮೆರಿಕಾ ಭದ್ರತಾ ಮಂಡಳಿಯು ಇಂದು ಸಭೆ ಸೇರಲಿದೆ.

Israel Iran crisis erupts US President Joe Biden and Israeli Prime Minister Netanyahu discussed the situation over a phone call akb

ಇಸ್ರೇಲ್ ಪ್ಯಾಲೇಸ್ತೀನ್ ಯುದ್ಧದ ಮಧ್ಯೆ ಈಗ ಇಸ್ರೇಲ್ ಮೇಲೆ ಇರಾನ್ ಕೂಡ ಮಿಸೈಲ್ ದಾಳಿ ನಡೆಸಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇಸ್ರೇಲ್ ಮೇಲೆ ಇರಾನ್‌ನ ಅನಿರೀಕ್ಷಿತ ಕ್ಷಿಪಣಿ ದಾಳಿ ಈ ಯುದ್ಧದ ಸ್ಥಿತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಎರಡು ಪ್ರಾದೇಶಿಕ ವೈರಿಗಳ ನಡುವಿನ ದೀರ್ಘಾವಧಿಯ ಈ  ವಿನಾಶಕಾರಿ ಯುದ್ಧದಲ್ಲಿ ಈಗ ಇರಾನ್ ಕೂಡ ಕೈ ಜೋಡಿಸಿರುವುದರಿಂದ ಗಮನಾರ್ಹವಾಗಿ ಯುದ್ಧ ಮತ್ತೊಂದು ಹಂತಕ್ಕೆ ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಉತ್ತರ ಮತ್ತು ದಕ್ಷಿಣ ಇಸ್ರೇಲ್, ಉತ್ತರ ಪಶ್ಚಿಮ ದಂಡೆ ಮತ್ತು ಜೋರ್ಡಾನ್ ಗಡಿಯ ಬಳಿಯ ಡೆಡ್‌ ಸೀ ಮುಂತಾದ ಕಡೆ ವಾಯುದಳಿ ನಡೆದಿರುವ ಬಗ್ಗೆ ಸೈರನ್‌ಗಳು ಹೊರಹೊಮ್ಮಿದ್ದು, ಎಷ್ಟು ಹಾನಿಯಾಗಿದೆ ಎಮಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ದಾಳಿ ನಿಲ್ಲಿಸಲು ಅಥವಾ ಪ್ರತಿದಾಳಿ ನಡೆಸಲು  ಅಮೆರಿಕಾ ಸೇರಿದಂತೆ ತನ್ನನ್ನು ಬೆಂಬಲಿಸುವ ಇತರ ರಾಷ್ಟ್‌ರಗಳ ಜೊತೆ ಕೆಲಸ ಮಾಡುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಇದಾದ ಬಳಿಕ ಅಮೆರಿಕಾದ ಪಡೆಗಳು ಇಸ್ರೇಲ್ ಕಡೆ ಇರಾನ್ ಬಿಟ್ಟಿದ್ದ ಕೆಲ ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.

ಇಸ್ರೇಲ್ ಟಾರ್ಗೆಟ್ ದಾಳಿ ಆರಂಭ, 17 ಭಾರತೀಯ ಸಿಬ್ಬಂದಿಗಳಿದ್ದ ಹಡಗು ವಶಪಡಿಸಿದ ಇರಾನ್!

ಪ್ರಸ್ತುತ ಈ ಪ್ರದೇಶದಲ್ಲಿ ಬೆಂಕಿಯಲ್ಲಿ ಬೇಯುತ್ತಿರುವಂತಹ ಸ್ಥಿತಿ ಇದ್ದು, ಇರಾನ್‌ನ ಕ್ರಾಂತ್ರಿಕಾರಿ ಗಾರ್ಡ್( Iranian Revolutionary Guards) ಈ ಕೃತ್ಯದಲ್ಲಿ ತಮ್ಮ ಪಾತ್ರವನ್ನು ಖಚಿತಪಡಿಸಿದ್ದಾರೆ. ಇವರು ಇಸ್ರೇಲ್ ಮೇಲಿನ ತಮ್ಮ ದಾಳಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಬಳಸಿದ್ದಾರೆ. 

ಇರಾನ್‌ನ ಡಮಾಸ್ಕಸ್ ಕಾನ್ಸುಲರ್ ಅನೆಕ್ಸ್‌ ಮೇಲೆ ಏಪ್ರಿಲ್ 1 ರಂದು ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ  ಇರಾನ್ ಗಾರ್ಡ್‌ನ ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಲವಾರು ಪ್ರಾಣ ಕಳೆದುಕೊಂಡಿದ್ದರು.

ಏನೇನಾಯ್ತು:  ಪ್ರಮುಖ ಅಂಶಗಳು

  • ಇರಾನ್ ಇದೇ ಮೊದಲ ಬಾರಿಗೆ ಇಸ್ರೇಲ್ ಪ್ರದೇಶದ ಮೇಲೆ ಸ್ಫೋಟಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿತ್ತು.
  • ಏಪ್ರಿಲ್ 1 ರಂದು ಇರಾನ್‌ನ ಡಮಾಸ್ಕಸ್ ಕಾನ್ಸುಲರ್ ಅನೆಕ್ಸ್‌  ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಇದು ಪ್ರತೀಕಾರವಾಗಿತ್ತು. ಈ ದಾಳಿ ಇರಾನ್‌ನ ಮಿಲಿಟರಿ ಸೌಲಭ್ಯಕ್ಕೆ ಹಾನಿಯುಂಟುಮಾಡಿತ್ತು. 
  • ಈ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ ಇರಾನ್, ಇಸ್ರೇಲ್ ಪ್ರದೇಶಗಳ ಮೇಲೆ ಪ್ರತಿದಾಳಿ ನಡೆಸಿತ್ತು. ಆದರೆ ವಿಶ್ವಸಂಸ್ಥೆಯೂ ಸೇರಿದಂತೆ ವಿವಿಧ ದೇಶಗಳು ಇರಾನ್‌ನ ಕ್ರಮಗಳನ್ನು ಖಂಡಿಸಿದವು, ಇದು ಈಗಾಗಲೇ ಹದಗೆಟ್ಟ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದವು.
  • ಇದಾದ ನಂತರ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದರು.
  • ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಯುಎಸ್ ಭದ್ರತಾ ಮಂಡಳಿಗೆ ತುರ್ತು ಸಭೆ ನಡೆಸುವಂತೆ ಮನವಿ ಮಾಡಿದರು. ಇಸ್ರೇಲ್ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಂದು ಸಭೆ ಸೇರಲಿದೆ.
  • ತಮ್ಮ ಬದ್ಧವೈರಿ ಇಸ್ರೇಲ್ ಮೇಲಿನ ದಾಳಿಯನ್ನು ಬೆಂಬಲಿಸಿ ಸಾವಿರಾರು ಇರಾನ್ ಜನ ಬೀದಿಗಿಳಿದು ಮೆರವಣಿಗೆ ನಡೆಸಿ, ತಮ್ಮ ಸೇನೆಗೆ ಬೆಂಬಲ ಸೂಚಿಸುತ್ತಿದ್ದಾರೆ. 
  •  

 ಇಸ್ರೇಲ್‌-ಪ್ಯಾಲೆಸ್ತೀನ್‌ ಕದನಕ್ಕೆ 6 ತಿಂಗಳು: ಈವರೆಗೆ 35,000 ಬಲಿ..!

Latest Videos
Follow Us:
Download App:
  • android
  • ios