ಇಸ್ರೇಲ್ ಟಾರ್ಗೆಟ್ ದಾಳಿ ಆರಂಭ, 17 ಭಾರತೀಯ ಸಿಬ್ಬಂದಿಗಳಿದ್ದ ಹಡಗು ವಶಪಡಿಸಿದ ಇರಾನ್!
ಇಸ್ರೇಲ್ ಮೇಲೆ ಯುದ್ಧ ಆರಂಭಿಸುವ ಘೋಷಣೆ ಮಾಡಿರುವ ಇರಾನ್ ಇದೀಗ ಟಾರ್ಗೆಟ್ ಇಸ್ರೇಲ್ ದಾಳಿ ಆರಂಭಿಸಿದೆ. ಮೊದಲ ಭಾಗವಾಗಿ ಇಸ್ರೇಲ್ ಮೂಲದ ಹಡಗಿನ ಮೇಲೆ ಇರಾನ್ ಸೇನೆ ದಾಳಿ ಮಾಡಿ ಹಡಗನ್ನು ಕೈವಶ ಮಾಡಿದೆ. ಈ ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಗಳು ಇರಾನ್ ಸೇನೆಯ ವಶದಲ್ಲಿದ್ದಾರೆ.
ಯುಎಇ(ಏ.13) ಇಸ್ರೇಲ್ ಹಾಗೂ ಇರಾನ್ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯನ್ನು ಹಲವು ಮೂಲಗಳು ಹೇಳುತ್ತಿದೆ. ಈ ಎಚ್ಚರಿಕೆ ನಡುವೆ ಇರಾನ್ ಈಗಾಗಲೇ ಟಾರ್ಗೆಟ್ ದಾಳಿ ಆರಂಭಿಸಿದೆ. ಇಸ್ರೇಲ್ ಮೂಲಕ ಸರಕು ಹಡಗನ್ನು ಯುಎಇ ಸಮುದ್ರ ತೀರದಲ್ಲಿ ಇರಾನ್ ಸೇನೆ ವಶಕ್ಕೆ ಪಡೆದಿದೆ. ಹೆಲಿಕಾಪ್ಟರ್ ಮೂಲಕ ಹಡಗು ಚೇಸ್ ಮಾಡಿದ ಇರಾನ್ ಸೇನೆ ಸೈನಿಕರನ್ನು ಸರಕು ಹಡಗಿನ ಮೇಲೆ ಇಳಿ ವಶಕ್ಕೆ ಪಡೆದಿದೆ. ಈ ಹಡಗಿನ 25 ಸಿಬ್ಬಂದಿಗಳ ಪೈಕಿ 17 ಸಿಬ್ಬಂದಿಗಳು ಭಾರತೀಯರು ಅನ್ನೋ ಮಾಹಿತಿ ಲಭ್ಯವಾಗಿದೆ.
ಎಪ್ರಿಲ್ 1 ರಂದು ಸಿರಿಯಾದಲ್ಲಿ ಬಾಂಬ್ ಸ್ಟ್ರೈಕ್‌ನಲ್ಲಿ ಇರಾನ್ ಅಧಿಕಾರಿಗಳು ಮೃತಪಟ್ಟಿದ್ದರು. ಈ ದಾಳಿಯನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ಆರೋಪಿಸಿತ್ತು. ಇಷ್ಟೇ ಅಲ್ಲ ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಇದರಂತೆ ಇರಾನ್ ದಾಳಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಇದರ ನಡುವೆ ಇರಾನ್ ಸೇನೆ ಇಸ್ರೇಲ್ ಮೂಲದ ಹಡಗಿನ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಇಸ್ರೇಲ್ ಮೇಲೆ ಇರಾನ್ ಯುದ್ಧ ಸಾಧ್ಯತೆ, ಈ ದೇಶಕ್ಕೆ ಪ್ರಯಾಣ ಮಾಡದಂತೆ ಭಾರತೀರಿಗೆ MEA ಮನವಿ!
ಗಲ್ಫ್ ಸಮುದ್ರ ವಲಯದಲ್ಲಿ ಸಂಚರಿಸುತ್ತಿದ್ದ ವೇಳೆ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ವಶಪಡಿಸಿಕೊಂಡಿದೆ. 25 ಸಿಬ್ಬಂದಿಗಳ ಪೈಕಿ 17 ಮಂದಿ ಭಾರತೀಯರಾಗಿದ್ದರೆ, ಇಬ್ಬರು ಪಾಕಿಸ್ತಾನ ಮೂಲದವರು. ಇನ್ನು ನಾಲ್ವರು ಪಿಲಿಪೈನ್ಸ್, ರಷ್ಯಾ ಹಾಗೂ ಎಸ್ಟೊನಿಯನ್ ದೇಶದ ಇಬ್ಬರು ಸಿಬ್ಬಂದಿಗಳಿದ್ದಾರೆ.
ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಮೂಲದ ಎಂಸಿಸಿ ಸರಕು ಹಡಗಿನಲ್ಲಿ ಭಾರತದ 17 ಸಿಬ್ಬಂದಿಗಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಭಾರತ ಸರ್ಕಾರ ಇರಾನ್ ಅಧಿಕಾರಿಗಳ ಜೊತೆ ಸಂಪರ್ಕ ಮಾಡಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಭಾರತೀಯ ಸಿಬ್ಬಂದಿಗಳ ಸುರಕ್ಷತೆ ಹಾಗೂ ಬಿಡುಗಡೆ ಪ್ರಯತ್ನಗಳು ನಡೆಯುತ್ತಿದೆ ಎಂದು ಭಾರತ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ.
ಮತ್ತೊಂದು ಯುದ್ಧಕ್ಕೆ ಸಜ್ಜಾದ ವಿಶ್ವ, ಇಸ್ರೇಲ್ ಮೇಲೆ ದಾಳಿಗೆ ಮುಂದಾದ ಇರಾನ್!
ನಿನ್ನೆಯಷ್ಟೇ ಭಾರತ ವಿದೇಶಾಂಗ ಸಚಿವಾಲಯ ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಕಾರ್ಮೋಡಾ ಹೆಚ್ಚಾಗುತ್ತಿರುವ ಕಾರಣ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಇರಾನ್ ಹಾಗೂ ಇಸ್ರೇಲ್ ದೇಶಗಳಿಗೆ ಪ್ರಯಾಣ ಮಾಡಬೇಡಿ ಅಥವಾ ಮುಂದೂಡಿ ಎಂದು ಭಾರತೀಯರಿಗೆ ಸೂಚಿಸಿತ್ತು. ಭಾರತೀಯರನ್ನು ಅಲ್ಲಿಗೆ ಹೋಗದಂತೆ ತಡೆಯುವ ಜೊತೆಗೆ ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರೂ ಸಹ ಅತ್ಯಂತ ಎಚ್ಚರಿಕೆಯಿಂದಿದ್ದು, ತಮ್ಮ ಸಂಚಾರಗಳನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿಕೊಳ್ಳಲು ಸೂಚನೆ ನೀಡಿದೆ. ಜೊತೆಗೆ ಅಲ್ಲಿನ ಭಾರತೀಯ ದೂತಾವಾಸ ಕಚೇರಿಯ ಜೊತೆ ಸಂಪರ್ಕದಲ್ಲಿರುವಂತೆ ಸೂಚನೆ ನೀಡಿತ್ತು.