ಇಸ್ರೇಲ್‌-ಪ್ಯಾಲೆಸ್ತೀನ್‌ ಕದನಕ್ಕೆ 6 ತಿಂಗಳು: ಈವರೆಗೆ 35,000 ಬಲಿ..!

ಯುದ್ಧದಲ್ಲಿನ ಸಾವು- ನೋವಿನ ಕುರಿತು ಉಭಯ ಬಣಗಳು ಅತ್ಯಂತ ನಿಖರ ಮಾಹಿತಿ ಬಹಿರಂಗಪಡಿಸಿಲ್ಲವಾದ ಕಾರಣ ಗಾಯಾಳುಗಳ ಸಂಖ್ಯೆ ಹಲವು ಸಾವಿರ ದಾಟಿರಬಹುದು, ಅದೇ ರೀತಿ ಸಾವಿನ ಸಂಖ್ಯೆ ಕೂಡಾ ಎಂದು ವಿವಿಧ ರಕ್ಷಣಾ ಸಂಸ್ಥೆಗಳು ಹೇಳಿವೆ.

6 Months Complete the Israel Palestine War grg

ಗಾಜಾ/ಜೆರುಸಲೇಂ(ಏ.09): ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಭೀಕರ ಯುದ್ಧಕ್ಕೆ ಭಾನುವಾರ 6 ತಿಂಗಳು ತುಂಬಿದೆ. ಇತ್ತೀಚಿನ ದಶಕಗಳ ಈ ಭೀಕರ ಯುದ್ಧದಲ್ಲಿ 10 ಸಾವಿರಕ್ಕೂ ಹೆಚ್ಚು ರಾಕೆಟ್‌ ಬಳಸಿ ಉಭಯ ಬಣಗಳು ದಾಳಿ ನಡೆಸಿದ್ದರೆ, ದಾಳಿ-ಪ್ರತಿದಾಳಿಯಲ್ಲಿ 35 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಯುದ್ಧದಲ್ಲಿನ ಸಾವು- ನೋವಿನ ಕುರಿತು ಉಭಯ ಬಣಗಳು ಅತ್ಯಂತ ನಿಖರ ಮಾಹಿತಿ ಬಹಿರಂಗಪಡಿಸಿಲ್ಲವಾದ ಕಾರಣ ಗಾಯಾಳುಗಳ ಸಂಖ್ಯೆ ಹಲವು ಸಾವಿರ ದಾಟಿರಬಹುದು, ಅದೇ ರೀತಿ ಸಾವಿನ ಸಂಖ್ಯೆ ಕೂಡಾ ಎಂದು ವಿವಿಧ ರಕ್ಷಣಾ ಸಂಸ್ಥೆಗಳು ಹೇಳಿವೆ.

ಏನಾಗಿತ್ತು?:

ಕಳೆದ ವರ್ಷದ ಅ.7ರಂದು ಹಮಾಸ್‌ ಉಗ್ರರು ಏಕಾಏಕಿ ಇಸ್ರೇಲ್‌ನ ಗಡಿಭಾಗದ ನಗರದೊಳಗೆ ನುಗ್ಗಿ ಭೀಕರ ಹತ್ಯಾಕಾಂಡ ನಡೆಸಿದ್ದರು. ಈ ವೇಳೆ 1170 ಇಸ್ರೇಲಿಗಳು ಮತ್ತು ವಿದೇಶಿಯರು ಸಾವನ್ನಪ್ಪಿದ್ದರು. ಅದಾದ ಬಳಿಕ ಹಮಾಸ್‌ ಉಗ್ರರ ನೆಲೆಯಾದ ಗಾಜಾಪಟ್ಟಿ ಪ್ರದೇಶದ ಮೇಲೆ ಸತತ 6 ತಿಂಗಳಿನಿಂದ ದಾಳಿ ನಡೆಸುತ್ತಿರುವ ಇಸ್ರೇಲಿ ಸೇನೆ, ಆ ಪ್ರದೇಶವನ್ನು ಅಕ್ಷರಶಃ ನೆಲಸಮ ಮಾಡಿದೆ. ಗಾಜಾಪಟ್ಟಿಯ ಬಹುತೇಕ ಕಟ್ಟಡಗಳು ನೆಲಸಮವಾಗಿದ್ದು, ವಾಸಕ್ಕೆ ಅಯೋಗ್ಯ ಸ್ಥಿತಿ ತಲುಪಿವೆ.

ಗಾಝಾದಲ್ಲಿ ತಕ್ಷಣ ಕದನ ವಿರಾಮ ಘೋಷಣೆಗೆ ಇದೇ ಮೊದಲ ಬಾರಿ UN ಭದ್ರತಾ ಮಂಡಳಿ ನಿರ್ಣಯ!

ಕಳೆದ 6 ತಿಂಗಳ ಅವಧಿಯಲ್ಲಿ ಎರಡೂ ಬಣಗಳು ಪರಸ್ಪರ 10 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳನ್ನು ಬಳಸಿ ದಾಳಿ ನಡೆಸಿವೆ. ಮತ್ತೊಂದೆಡೆ ಇಸ್ರೇಲ್ ಕಡೆ 1200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಗಾಜಾಪಟ್ಟಿ ಪ್ರದೇಶದಲ್ಲಿ 33,500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ರಕ್ಷಣಾ ಕಾರ್ಯಕರ್ತರು ಅಂದಾಜಿಸಿದ್ದಾರೆ.

ಕದನ ವಿರಾಮ ಚರ್ಚೆಗೆ ಸಿದ್ಧ ಇಲ್ಲ

ಹಮಾಸ್‌ ಮೇಲಿನ ಯುದ್ಧದ ಗೆಲುವಿನಿಂದ ನಾವು ಕೇವಲ ಒಂದು ಮೆಟ್ಟಿಲು ದೂರದಲ್ಲಿದ್ದೇವೆ. ಆದರೆ ಇದಕ್ಕಾಗಿ ನಾವು ಸಾಕಷ್ಟು ತ್ಯಾಗ, ಬಲಿದಾನ ನೀಡಬೇಕಾಯ್ತು ಎಂಬುದು ನೋವಿನ ಸಂಗತಿ. ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮಾಡುವವರೆಗೂ ಹಮಾಸ್‌ ಜೊತೆಗೆ ಯಾವುದೇ ಕದನ ವಿರಾಮದ ಮಾತುಕತೆಗೆ ನಾವು ಸಿದ್ಧರಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios