ಗಾಜಾ ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ಬಾಂಬ್ ದಾಳಿ: ಸಂತ್ರಸ್ತರಿಗಾಗಿ ಮೊದಲ ಬಾರಿ ರಾಫಾ ಗಡಿ ತೆರೆಯಲೊಪ್ಪಿದ ಈಜಿಫ್ಟ್‌

ಗಾಜಾಪಟ್ಟಿಯ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪ್ರಬಲ ಬಾಂಬ್‌ ದಾಳಿ ನಡೆಸಿದ್ದು, ಈ ದಾಳಿಗೆ ಹಲವರು ಬಲಿಯಾಗಿದ್ದಾರೆ.

Israel Hamas war Israel Bombs Gazas Largest Refugee Center Egypt agrees to open Rafah border for first time for victims treatment akb

ಗಾಜಾಪಟ್ಟಿ: ಗಾಜಾಪಟ್ಟಿಯ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪ್ರಬಲ ಬಾಂಬ್‌ ದಾಳಿ ನಡೆಸಿದ್ದು, ಈ ದಾಳಿಗೆ ಹಲವರು ಬಲಿಯಾಗಿದ್ದಾರೆ. ಹಮಾಸ್‌ ಮುನ್ನಡೆಸುತ್ತಿರುವ ಗಾಜಾದ ಆರೋಗ್ಯ ಸಚಿವಾಲಯವೂ ಈ ದಾಳಿಯಲ್ಲಿ ಮೃತರ ಸಂಖ್ಯೆ 50ಕ್ಕೆ ಏರಿಕೆ ಆಗಿದ್ದು, 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಅಲ್ಲಿರುವ ಸ್ವಯಂಸೇವಕರು ಬದುಕುಳಿದವರಿಗಾಗಿ ಅವಶೇಷಗಳಡಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಈ ದಾಳಿಯಲ್ಲಿ  ಆಕ್ಟೋಬರ್ 7ರ ಇಸ್ರೇಲ್  ಮೇಲಿನ ದಾಳಿಗೆ ಕಾರಣನಾದ ಹಮಾಸ್ ಕಮಾಂಡರ್‌ನ ಹತ್ಯೆಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇದರ ಜೊತೆಗೆ ಈ ದಾಳಿಯಲ್ಲಿ 9 ಇಸ್ರೇಲಿ ಸೈನಿಕರು ಕೂಡ ಸಾವಿಗೀಡಾಗಿದ್ದಾರೆ. ಈ ಮೂಲಕ ಅಕ್ಟೋಬರ್ 7 ರ ದಾಳಿಯಿಂದ ಇದುವರೆಗೆ ಈ ಯುದ್ಧದಲ್ಲಿ ಸಾವನ್ನಪ್ಪಿದ್ದ ಇಸ್ರೇಲ್ ಯೋಧರ ಸಂಖ್ಯೆ 326ಕ್ಕೇರಿದೆ. ಈ ದಾಳಿಯಲ್ಲಿ ಇಬ್ಬರು ಸೈನಿಕರೂ ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.

ರಾಜಕೀಯ ನಾಯಕರ ಮೊಬೈಲ್‌ಗೆ ರವಾನೆಯಾದ ಸಂದೇಶದಿಂದ ತಲ್ಲಣ: ಏನಿದು ಆಪಲ್ ಹೈ ಅಲರ್ಟ್ ವಿವಾದ

ಇಂದು ಬೆಳಗ್ಗೆ ನಡೆದ ದಾಳಿಯಿಂದಾಗಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. 'ನಮ್ಮ ಪ್ರೀತಿಯ ದೇಶದಲ್ಲಿರುವ ನಮ್ಮ ಒಳ್ಳೆಯ ಜನರಿಗೆ, ಗಾಜಾದಲ್ಲಿ ಸಂವಹನ ಮತ್ತು ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಎಂದು ಘೋಷಿಸಲು ನಾವು ವಿಷಾದಿಸುತ್ತೇವೆ' ಎಂದು ಪ್ಯಾಲೇಸ್ತೀನ್ ಟೆಲಿಕಮ್ಯುನಿಕೇಶನ್ಸ್ ಕಂಪನಿ (ಪಾಲ್ಟೆಲ್) ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ. ಈ ಮಧ್ಯೆ ಇಸ್ರೇಲ್ ದಾಳಿಯ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದ  ಹಮಾಸ್ ಮಿಲಿಟರಿಗೆ ಸೇರಿದ  ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ (al-Qassam Brigades), ಗಾಜಾದಲ್ಲಿ ಇಸ್ರೇಲ್‌ ಪಡೆಗಳ ಸ್ಮಶಾನ ಮಾಡಬೇಕು ಎಂದು  ಶಪಥ ಮಾಡಿದೆ. 

ಮಸ್ಕ್‌ ಖರೀದಿಸಿದ 1 ವರ್ಷದಲ್ಲಿ ಟ್ವೀಟರ್‌ ಮೌಲ್ಯ ಅರ್ಧ ಕುಸಿತ: ಐಟಿ ಉದ್ಯಮ ನೇಮಕಾತಿಯಲ್ಲಿ ಭಾರೀ ಕುಂಠಿತ

ಗಾಜಾಪಟ್ಟಿಯ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್ ಮಾಡಿದ  ದಾಳಿಯನ್ನು ಈಜಿಫ್ಟ್ (Cairo) ದೇಶ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಗಾಯಗೊಂಡ ಪ್ಯಾಲೆಸ್ತೀನಿಯನ್ನರ ವೈದ್ಯಕೀಯ ಚಿಕಿತ್ಸೆಗಾಗಿ (medical treatment) ಆಸ್ಪತ್ರೆಗೆ ಸೇರಿಸಲು ರಾಫಾ ಗಡಿಯನ್ನು(Rafah border) ತೆರೆಯುವುದಾಗಿ ಹೇಳಿದೆ. ಇಸ್ರೇಲ್ ಪ್ಯಾಲೇಸ್ತೀನ್ ಯುದ್ಧ ಆರಂಭವಾಗಿ ಇಷ್ಟು ದಿನದ ಬಳಿಕ ಇದೇ ಮೊದಲು ಈಜಿಪ್ಟ್‌, ಗಾಜಾ ನಾಗರಿಕರಿಗಾಗಿ ಬಂದ್ ಮಾಡಲಾಗಿದ ಗಡಿಯನ್ನು ತೆರೆಯುವುದಾಗಿ ಹೇಳಿದೆ.

ಗಾಜಾದಲ್ಲಿ ಪರಿಸ್ಥಿತಿ ಹದಗೆಟ್ಟು ಮಾನವೀಯ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಯುದ್ಧ ನಿಲ್ಲಿಸಬೇಕೆಂಬ ಜಾಗತಿಕ ಮಟ್ಟದ ಆಗ್ರಹದ ಮಧ್ಯೆಯೇ ಇಸ್ರೇಲ್‌ ಆ ಪ್ರದೇಶದ ಮೇಲೆ ಈ ವೈಮಾನಿಕ ದಾಳಿ ( airstrikes) ನಡೆಸಿದೆ. ಈ ದಾಳಿಗೆ ಕೆಲವೇ ಗಂಟೆಗಳ ಮೊದಲಷ್ಟೇ ಪ್ಯಾಲೇಸ್ತೀನ್ ಆರೋಗ್ಯ ಸಚಿವಾಲಯ (health ministry) ಈ ಯುದ್ಧದಿಂದಾಗಿ  3,542 ಮಕ್ಕಳು ಮತ್ತು 2,187 ಮಹಿಳೆಯರು ಸೇರಿದಂತೆ 8,525 ಜನ ಸಾವಿಗೀಡಾಗಿದ್ದಾರೆ ಎಂದು ವರದಿ ನೀಡಿತ್ತು. 

ಮನಮೋಹನ್‌ ಸಿಂಗ್‌ ರೀತಿ ಹಮಾಸ್ ವಿರುದ್ಧ ಇಸ್ರೇಲ್‌ ಸುಮ್ಮನಿರಬೇಕಿತ್ತು: ಅಮೆರಿಕದ ಖ್ಯಾತ ಲೇಖಕ

ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಸಹ ಇಸ್ರೇಲ್‌ನ (Israel's Prime Minister) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಕದನ ವಿರಾಮ ಅನುಸರಿಸುವ ಮಾರ್ಗವನ್ನು ನಿರಾಕರಿಸಿದ್ದಾರೆ. ಇಂತಹ ಮನವಿಗಳು ಇಸ್ರೇಲ್‌ನ್ನು ಹಮಾಸ್‌ಗೆ ಶರಣಾಗುವಂತೆ, ಭಯೋತ್ಪಾದನೆ ಹಾಗೂ ಅಮಾನವೀಯತೆಗೆ ಶರಣಾಗುವಂತೆ ಹೇಳುವ ಕರೆಯಾಗಿದೆ ಎಂದು ಅವರು ಹೇಳಿದ್ದಾರೆ. 

ಈ ಮಧ್ಯೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (Antony Blinken) ಈ ಶುಕ್ರವಾರ (ನ.3) ದಂದು ಮತ್ತೊಮ್ಮೆ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಬ್ಲಿಂಕೆನ್ ಇಸ್ರೇಲ್ ಸರ್ಕಾರದ ಸದಸ್ಯರೊಂದಿಗೆ ಸಭೆ ನಡೆಸಲು ಇಸ್ರೇಲ್‌ಗೆ ಪ್ರಯಾಣಿಸುತ್ತಾರೆ ಎಂದು ಅಮೆರಿಕಾ ಸ್ಟೇಟ್ ವಿಭಾಗದ ವಕ್ತಾರ ಮ್ಯಾಥ್ಯೂ ಮಿಲ್ಲರ್ (Matthew Miller) ಹೇಳಿದ್ದಾರೆ. 

ಗಾಜಾ ಪಟ್ಟಿಯು ಸಾವಿರಾರು ಮಕ್ಕಳ ಪಾಲಿಗೆ ಸ್ಮಶಾನವಾಗಿ ಮಾರ್ಪಟ್ಟಿದೆ ಎಂದು ವಿಶ್ವಸಂಸ್ಥೆ ನಿನ್ನೆಯಷ್ಟೇ  ಹೇಳಿತ್ತು. ಹತ್ಯೆಯಾದ ಮಕ್ಕಳ ಸಂಖ್ಯೆಯು  ಡಜನ್‌ನಿಂದ ಆರಂಭವಾಗಿ ಕೇವಲ 15 ದಿನಗಳಲ್ಲಿ ನೂರು ಸಾವಿರ ಅಂತಿಮವಾಗಿ ಹಲವು ಸಾವಿರದ ಹಂತ ದಾಟಿದೆ ಎಂದು ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. 

1967 ರ ಅರಬ್-ಇಸ್ರೇಲಿ ಯುದ್ಧದ ನಂತರ ಇಸ್ರೇಲಿ ವಶದಲ್ಲಿರುವ ಪ್ಯಾಲೇಸ್ತೀನ್ ಪ್ರದೇಶವಾದ ವೆಸ್ಟ್‌ ಬ್ಯಾಂಕ್‌ನಲ್ಲಿ(West Bank)  ಆಕ್ಟೋಬರ್‌ 7 ರ ದಾಳಿಯ ನಂತರ ಒಟ್ಟು 122 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದಾರೆ. ನಿನ್ನೆಯ ದಾಳಿಯಲ್ಲಿ ಇಸ್ರೇಲ್‌, ಹಮಾಸ್ ನಾಯಕ (Hamas leader) ಸಲೇಹ್ ಅಲ್-ಅರುರಿಯ (Saleh al-Aruri) ಮನೆಯನ್ನು ಧ್ವಂಸಗೊಳಿಸಿದೆ. ರಾಮಲ್ಲಾದ ಸಮೀಪವಿರುವ ಅರೂರಾ ಎಂಬ ಹಳ್ಳಿಯಲ್ಲಿದ್ದ ಈ ಮನೆ ಕಡೆವುವ ವೇಳೆ ಕೆಲವರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪಡೆ ಹೇಳಿದೆ. 

ಆದರೆ ಪ್ಯಾಲೇಸ್ತೀನ್‌ನ  ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯನ್ನು ಯುರೋಪಿಯನ್ ಯೂನಿಯನ್ ಬಲವಾಗಿ ಖಂಡಿಸಿದೆ. ಈ ದಾಳಿಯ ಕಾರಣಕ್ಕೆ ಇಸ್ರೇಲ್‌ನೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗುವುದು ಎಂದು ಬೊಲಿವಿಯಾ (Bolivia) ಮಂಗಳವಾರ ಘೋಷಿಸಿದೆ.  ಬೊಲಿವಿಯನ್ ಸರ್ಕಾರವು 'ಗಾಜಾ ಪಟ್ಟಿಯಲ್ಲಿ (Gaza Strip) ಇಸ್ರೇಲ್ ನಡೆಸುತ್ತಿರುವ ಆಕ್ರಮಣಕಾರಿ ಮಿಲಿಟರಿ ಆಕ್ರಮಣವನ್ನು ಖಂಡಿಸಿ, ಇಸ್ರೇಲ್ ರಾಜ್ಯದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು (diplomatic relations) ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಉಪ ವಿದೇಶಾಂಗ ಸಚಿವ ಫ್ರೆಡ್ಡಿ ಮಾಮಾನಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios