ಮನಮೋಹನ್ ಸಿಂಗ್ ರೀತಿ ಹಮಾಸ್ ವಿರುದ್ಧ ಇಸ್ರೇಲ್ ಸುಮ್ಮನಿರಬೇಕಿತ್ತು: ಅಮೆರಿಕದ ಖ್ಯಾತ ಲೇಖಕ
2008ರಲ್ಲಿ ಮುಂಬೈ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಹೊರತಾಗಿಯೂ ಆ ದೇಶದ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ಪ್ರತಿಕಾರದ ಕ್ರಮ ಕೈಗೊಂಡಿರಲಿಲ್ಲ. ಹಮಾಸ್ ವಿರುದ್ಧವೂ ಇಸ್ರೇಲ್ ಇಂಥದ್ದೇ ನಿಲುವು ಪ್ರದರ್ಶಿಸಬಹುದಿತ್ತು ಎಂದು ಅಮೆರಿಕದ ಖ್ಯಾತ ಲೇಖಕ ಥಾಮಸ್ ಫ್ರೈಡ್ಮನ್ ಹೇಳಿದ್ದಾರೆ.
ನವದೆಹಲಿ: 2008ರಲ್ಲಿ ಮುಂಬೈ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಹೊರತಾಗಿಯೂ ಆ ದೇಶದ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ಪ್ರತಿಕಾರದ ಕ್ರಮ ಕೈಗೊಂಡಿರಲಿಲ್ಲ. ಹಮಾಸ್ ವಿರುದ್ಧವೂ ಇಸ್ರೇಲ್ ಇಂಥದ್ದೇ ನಿಲುವು ಪ್ರದರ್ಶಿಸಬಹುದಿತ್ತು ಎಂದು ಅಮೆರಿಕದ ಖ್ಯಾತ ಲೇಖಕ ಥಾಮಸ್ ಫ್ರೈಡ್ಮನ್ ಹೇಳಿದ್ದಾರೆ.
ಹಮಾಸ್- ಇಸ್ರೇಲ್ ಯುದ್ಧದ ಕುರಿತು ಥಾಮಸ್ ಬರೆದಿರುವ ಲೇಖನ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾಗಿದ್ದು, ಈ ಲೇಖನದಲ್ಲಿ ಮೇಲಿನ ತಮ್ಮ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ‘ನಾನು ಇಸ್ರೇಲ್- ಹಮಾಸ್ ಯುದ್ಧವನ್ನು ನೋಡುತ್ತಿದ್ದೇನೆ. ಈ ವೇಳೆ ನನ್ನ ನೆಚ್ಚಿನ ವಿಶ್ವನಾಯಕರಲ್ಲಿ ಒಬ್ಬರಾದ ಮನಮೋಹನ್ ಸಿಂಗ್ ಬಗ್ಗೆ ನಾನು ಯೋಚಿಸುತ್ತಿದ್ದೇನೆ. 10 ಜನ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಭಾರತದೊಳಗೆ ನುಸುಳಿ ಮುಂಬೈನಲ್ಲಿ 160ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದಾಗ ಮನಮೋಹನ್ ಅವರು ಪಾಕಿಸ್ತಾನ ಅಥವಾ ಉಗ್ರರ ವಿರುದ್ಧ ಯಾವುದೇ ಪ್ರತಿಕಾರ ತೀರಿಸಿಕೊಳ್ಳಲಿಲ್ಲ. ಇದು ಆಗ ಸರಿಯಾದ ನಿರ್ಧಾರವಾಗಿತ್ತು’ ಎಂದಿದ್ದಾರೆ.
8 ದಶಕಗಳ ಸುಧೀರ್ಘ ಸೇವೆಯ ಬಳಿಕ ವಾಯುಪಡೆಗೆ ಮಿಗ್ 21 ಗುಡ್‌ಬೈ
ಹಮಾಸ್ ಉಗ್ರ ಸುರಂಗಗಳ ಮೇಲೆ ತೀವ್ರಗೊಂಡ ಇಸ್ರೇಲ್ ಭೂ ದಾಳಿ
ಡೇರ್ ಅಲ್ ಬಲಾ (ಗಾಜಾ ಪಟ್ಟಿ): ಹಮಾಸ್ ಉಗ್ರರ ನೆಲೆವೀಡಾದ ಗಾಜಾ ಪಟ್ಟಿಯಲ್ಲಿ ಮತ್ತಷ್ಟು ನುಗ್ಗಿರುವ ಇಸ್ರೇಲಿ ಪಡೆಗಳು, ಗಾಜಾದಲ್ಲಿನ ಸುರಂಗಗಳ ಮೇಲೆ ಹಾಗೂ ಉಗ್ರರು ಅವಿತಿದ್ದ ಕಟ್ಟಡಗಳ ಮೇಲೆ ದಾಳಿ ನಡೆಸಿವೆ. ಇದೇ ವೇಳೆ, ದಾಳಿಗೆ ಬೆಚ್ಚಿ ಉತ್ತರ ಗಾಜಾದ 11 ಲಕ್ಷ ಪ್ಯಾಲೆಸ್ತೀನೀಯರ ಪೈಕಿ 8 ಲಕ್ಷ ಪ್ಯಾಲಿಸ್ತೀನೀಯರು ದಕ್ಷಿಣ ಗಾಜಾಗೆ ಪಲಾಯನ ಮಾಡಿದ್ದಾರೆ.
ರಾಜಕೀಯ ನಾಯಕರ ಮೊಬೈಲ್‌ಗೆ ರವಾನೆಯಾದ ಸಂದೇಶದಿಂದ ತಲ್ಲಣ: ಏನಿದು ಆಪಲ್ ಹೈ ಅಲರ್ಟ್ ವಿವಾದ
ಈ ನಡುವೆ ಇಸ್ರೇಲ್ ಅಧ್ಯಕ್ಷ ಬೆಂಜ ಮಿನ್ ನೆತನ್ಯಾಹು ಅವರು ಕದನ ವಿರಾಮದ ಕರೆಗಳನ್ನು ತಿರಸ್ಕರಿಸಿದ್ದಾರೆ ಹಾಗೂ ಹಮಾಸ್ ಅನ್ನು ಸಂಪೂರ್ಣ ಸೋಲಿಸಿ ಗಾಜಾವನ್ನು ಅವರ ಹಿಡಿತದಿಂದ ಮುಕ್ತಗೊಳಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಯುದ್ಧ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ. ಮತ್ತೊಂದೆಡೆ ಹಮಾಸ್ ಉಗ್ರರು ಒಬ್ಬ ಇಸ್ರೇಲಿ ಒತ್ತೆಯಾಳುವನ್ನು ಸೋಮವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ.
ದಾಳಿಗೆ ಬೆಚ್ಚಿ ಮನೆ ಬಿಟ್ಟ ಪ್ಯಾಲೆಸ್ತೀನಿಗಳು
8 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನೀಯರು ದಾಳಿಗೆ ಬೆಚ್ಚಿ ಮನೆಬಿಟ್ಟು ದಕ್ಷಿಣದತ್ತ ವಲಸೆ ಹೋಗಿದ್ದಾರೆ ಇಲ್ಲವೆ. ವಿಶ್ವಸಂಸ್ಥೆ ನಡೆಸುವ ಗಾಯಾಳುಗಳೊಂದಿಗೆ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಆಸ್ಪತ್ರೆಗಳ ಸನಿಹವೂ ಇಸ್ರೇಲ್ ವಾಯುದಾಳಿ ಮಾಡಿದ್ದು, ಜನರನ್ನು ಆತಂಕಕ್ಕೆ ನೂಕಿವೆ. ವಿಶ್ವಸಂಸ್ಥೆಯ 64 ಸ್ವಯಂಸೇವಕರು ಕೂಡ ಒಂದು ತಿಂಗಳ ಯುದ್ಧದಲ್ಲಿ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ.
ಮಸ್ಕ್ ಖರೀದಿಸಿದ 1 ವರ್ಷದಲ್ಲಿ ಟ್ವೀಟರ್ ಮೌಲ್ಯ ಅರ್ಧ ಕುಸಿತ: ಐಟಿ ಉದ್ಯಮ ನೇಮಕಾತಿಯಲ್ಲಿ ಭಾರೀ ಕುಂಠಿತ
ಇದೇ ವೇಳೆ, ಪದೇ ಪದೇ ವಿದ್ಯುತ್ ವ್ಯತ್ಯಯವು ಗಾಜಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸುಮಾರು 8 ಲಕ್ಷ ಜನರು ಗಾಜಾ ಪಟ್ಟಿಯ ಉತ್ತರ ಭಾಗದಿಂದ ದಕ್ಷಿಣಕ್ಕೆ ಪಲಾಯನ ಮಾಡಿ, ಇಸ್ರೇಲಿ ಮಲಿ ಟರಿಯಆದೇಶಗಳನ್ನು ಪಾಲಿಸಿದ್ದಾರೆ. ಆದರೂ ಸಾವಿರಾರು ಜನರು ಗಾಜಾ ನಗರ ಮತ್ತು ಸುತ್ತಮುತ್ತ ಉಳಿದಿ ದ್ದಾರೆ. ಭೂದಾಳಿ ಮುಂದುವರಿದರೆ ಸಾವು ನೋವುಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಜೊನಾಥನ್ ಕಾಕಸ್ ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ: ಹೆಲ್ಮೆಟ್ ಧರಿಸದೇ 50029 ಜನರ ಸಾವು