ಏಲಿಯನ್‌ಗಳ ಅಸ್ತಿತ್ವದ ಕುರಿತ ದಶಕಗಳ ಜಿಜ್ಞಾಸೆಗೆ ಹೊಸ ತಿರುವು ಸಿಕ್ಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಫ್‌ಒ ಮತ್ತು ಅನ್ಯಜೀವಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಬೆಳವಣಿಗೆಯು ಬಾಬಾ ವಾಂಗಾ ಭವಿಷ್ಯವಾಣಿಯ ಚರ್ಚೆ ಮುನ್ನೆಲೆಗೆ ತಂದಿದೆ.
ಏಲಿಯನ್‌ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್. ಏಲಿಯನ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್‌ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ನೂರಾರು ವರ್ಷಗಳ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಮುಂದೊಂದು ದಿನ ಈ ಭೂಮಿಯ ಮೇಲೆ ಏಲಿಯನ್ ಆಳುತ್ತದೆ ಎಂದಿದ್ದರು. ಅದೇ ರೀತಿ, 2026ರಲ್ಲಿಯೇ ಏಲಿಯನ್‌ಗಳು ಪ್ರತ್ಯಕ್ಷವಾಗಲಿವೆ ಎಂದೂ ಭವಿಷ್ಯ ನುಡಿಯಲಾಗಿತ್ತು.
ದಾಖಲೆ ಬಿಡುಗಡೆಗೆ ಆದೇಶ
ಇದೀಗ ಅದು ನಿಜವಾಗ್ತಿದೆಯೇ ಎನ್ನುವ ಸಂಶಯ ಕಾಡುತ್ತಿದೆ. ಅದಕ್ಕೆ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಡೊನಾಲ್ಡ್ ಟ್ರಂಪ್, ಯುಎಫ್‌ಒ (UFO-ಹಾರುವ ತಟ್ಟೆ), ಅನ್ಯಜೀವಗಳು ಸೇರಿದಂತೆ ಇವುಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ, ಸಾರ್ವಜನಿಕರ ಆಸಕ್ತಿಯನ್ನು ಪರಿಗಣಿಸಿ ಈ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇದರಿಂದಾಗಿ ಶತಮಾನಗಳ ಹಿಂದೆ ಹೇಳಿದ ಬಾಬಾ ವಾಂಗಾ ಮಾತೀಗ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಹೊಸ ಸಾಹಸಕ್ಕೆ ಟ್ರಂಪ್
ನವೆಂಬರ್ 2026 ರಲ್ಲಿ "ಬೃಹತ್ ಬಾಹ್ಯಾಕಾಶ ನೌಕೆ" ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರ ಕಮೆಂಟ್‌ಗಳನ್ನು ಅನುಸರಿಸಿ ಅಮೆರಿಕವು, ಏಲಿಯನ್ ಚರ್ಚೆಯನ್ನು ಮತ್ತೆ ತೆರೆಯುತ್ತಿದೆ. ಡೊನಾಲ್ಡ್ ಟ್ರಂಪ್ ಇವುಗಳ ಎಲ್ಲಾ ದಾಖಲೆಗಳನ್ನೂ ತೆಗೆಸುತ್ತಿದ್ದಾರೆ. ಅಷ್ಟಕ್ಕೂ ಈ ಚರ್ಚೆ 2024ರಿಂದ ನಡೆಯುತ್ತಿತ್ತು. ಆದರೆ ಆಗ ಟ್ರಂಪ್ ನನಗೆ ಈ ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳಲ್ಲಿ ಆಸಕ್ತಿ ಇಲ್ಲ. ಇದನ್ನು ನಾನು ನಂಬುವುದಿಲ್ಲ ಎಂದಿದ್ದರು. ಆದರೆ ಈಗ ಅದ್ಯಾಕೋ ಇದ್ದಕ್ಕಿಂತೆಯೇ ಇಂಟರೆಸ್ಟ್ ಬಂದು ಬಿಟ್ಟಿದ್ದು, ಈ ಸಾಹಸಕ್ಕೆ ಕೈಹಾಕಿದ್ದಾರೆ.
ದೊಡ್ಡ ಹೆಜ್ಜೆ
ಈ ಕ್ರಮವು ಅಮೆರಿಕದ ಸರ್ಕಾರಿ ಸಂಸ್ಥೆಗಳಲ್ಲಿನ ಸುದೀರ್ಘ-ವರ್ಗೀಕೃತ UFO ಫೈಲ್‌ಗಳನ್ನು ಸಾರ್ವಜನಿಕಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಅಷ್ಟಕ್ಕೂ ಈ ಹಿಂದೆ, ಏಲಿಯನ್ ರೀತಿಯ ನಿಗೂಢ ವಸ್ತುಗಳು ಕೆಲವರ ಕೈಸೇರಿರುವ ಬಗ್ಗೆ ವರದಿಯಾಗಿತ್ತು. ಕಳೆದ ವರ್ಷ ಏಲಿಯನ್ ರೀತಿಯ ಜೀವಂತ ಜೀವಿಯೊಂದು ಹೊಲದಲ್ಲಿ ಪತ್ತೆಯಾಗಿತ್ತು. ಹಾರುವ ತಟ್ಟೆಯ ರೂಪದಲ್ಲಿ ಬಿದ್ದಿರುವ ಜೀವಂತ ಏಲಿಯನ್ ಸಿಕ್ಕಿದ್ದು ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.


