ಮಸ್ಕ್ ಖರೀದಿಸಿದ 1 ವರ್ಷದಲ್ಲಿ ಟ್ವೀಟರ್ ಮೌಲ್ಯ ಅರ್ಧ ಕುಸಿತ: ಐಟಿ ಉದ್ಯಮ ನೇಮಕಾತಿಯಲ್ಲಿ ಭಾರೀ ಕುಂಠಿತ
ವಿಶ್ವದ ಅತ್ಯಂತ ಬೃಹತ್ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್ (ಟ್ವೀಟರ್)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
ನವದೆಹಲಿ: ವಿಶ್ವದ ಅತ್ಯಂತ ಬೃಹತ್ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್ (ಟ್ವೀಟರ್)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ. ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಕಳೆದ ವರ್ಷ 3.60 ಲಕ್ಷ ಕೋಟಿ ರು.ಗೆ ಟ್ವೀಟರ್ ಖರೀದಿ ಮಾಡಿದ್ದರು. ಖರೀದಿ ಬಳಿಕ ಅದರಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದರು. ಈ ಪೈಕಿ ಬಹುತೇಕ ನಿರ್ಧಾರಗಳು ಬಳಕೆದಾರರ ಟೀಕೆಗೆ, ವಿವಾದಕ್ಕೆ ಗುರಿಯಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಬಹುತೇಕ ಜಾಹೀರಾತುದಾರರು ಕಂಪನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿದೆ.
25 ವರ್ಷಗಳಲ್ಲಿ ಮೊದಲ ಬಾರಿ ಐಟಿ ಉದ್ಯಮದಲ್ಲಿ ನೇಮಕಾತಿ ಕುಂಠಿತ
ನವದೆಹಲಿ: ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಐಟಿ ಉದ್ಯಮದಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೇಮಕಾತಿ ಕುಂಠಿತಗೊಂಡಿದೆ. ದೇಶದ ಪ್ರಮುಖ 10 ಐಟಿ ಕಂಪನಿಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ 20 ಲಕ್ಷದಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.
8 ದಶಕಗಳ ಸುಧೀರ್ಘ ಸೇವೆಯ ಬಳಿಕ ವಾಯುಪಡೆಗೆ ಮಿಗ್ 21 ಗುಡ್ಬೈ
ಮಾಧ್ಯಮ ಸಂಸ್ಥೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ, ವೆಚ್ಚ ಉಳಿತಾಯಕ್ಕಾಗಿ ಕೈಗೊಂಡ ಕ್ರಮಗಳು, ಭೌಗೋಳಿಕ ಅಪಾಯಗಳಿಂದಾಗಿ ದೇಶದ 10 ಪ್ರಮುಖ ಕಂಪನಿಗಳಲ್ಲಿ 9 ಕಂಪನಿಗಳಲ್ಲಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ ಕಂಡಿದೆ. 2024ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಆರ್ಥಿಕ ವರ್ಷದ ಆರಂಭದಲ್ಲಿ ಹೊಂದಿದ್ದ ಉದ್ಯೋಗಿಗಳ ಪ್ರಮಾಣಕ್ಕಿಂತ ಈ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿರಲಿದೆ ಎಂದು ವರದಿ ತಿಳಿಸಿದೆ. ಆರ್ಥಿಕ ವರ್ಷದ ಆರಂಭದಲ್ಲಿ ಈ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ 21 ಲಕ್ಷದಷ್ಟಿತ್ತು.
ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ: ಹೆಲ್ಮೆಟ್ ಧರಿಸದೇ 50029 ಜನರ ಸಾವು
ಆದರೆ ‘ಎಲ್ ಅಂಡ್ ಟಿ’ ಕಂಪನಿ ಮಾತ್ರ ಈ ತ್ರೈಮಾಸಿಕದಲ್ಲಿ 32 ಮಂದಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದು, ಕಂಪನಿಯಲ್ಲಿನ ಉದ್ಯೋಗಿಗಳ ಸಂಖ್ಯೆ ಸಾರ್ವಕಾಲಿಕ ಗರಿಷ್ಠವಾದ 22,265ಕ್ಕೆ ಏರಿಕೆಯಾಗಿದೆ. ಉಳಿದ ಕಂಪನಿಗಳಲ್ಲಿ ಈ ತ್ರೈಮಾಸಿಕದಲ್ಲಿ 51,744 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
2022ರಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಗಳು
- ಟಿಸಿಎಸ್- 6.16 ಲಕ್ಷ
- ವಿಪ್ರೋ - 2.62 ಲಕ್ಷ
- ಟೆಕ್ ಮಹೀಂದ್ರಾ - 1.63 ಲಕ್ಷ
- ಎಲ್‌ಟಿಐ - 86 ಸಾವಿರ
ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ: ಹೆಲ್ಮೆಟ್ ಧರಿಸದೇ 50029 ಜನರ ಸಾವು