ರಾಜಕೀಯ ನಾಯಕರ ಮೊಬೈಲ್‌ಗೆ ರವಾನೆಯಾದ ಸಂದೇಶದಿಂದ ತಲ್ಲಣ: ಏನಿದು ಆಪಲ್ ಹೈ ಅಲರ್ಟ್ ವಿವಾದ

ಸುರಕ್ಷತೆಗೆ ಅತ್ಯಂತ ಹೆಸರಾದ ಅಮೆರಿಕದ ಆ್ಯಪಲ್ ಕಂಪನಿಯ ಐಫೋನ್‌ಗಳ ಮೇಲೆ ಸರ್ಕಾರಿ ಪೋಷಿತ ದಾಳಿಕೋರರು ಒಳನುಸುಳುವ ಯತ್ನ ಮಾಡಿರಬಹುದು ಎಂದು ಕಂಪನಿ ರವಾನಿಸಿದ ಸಂದೇಶವೊಂದು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂದೇಶದಲ್ಲಿ ಏನಿದೆ? ಸಂದೇಶ ರವಾನೆಯಾಗಲು ಏನು ಕಾರಣ ಎಂಬಿತ್ಯಾದಿ ವಿವರ ಇಲ್ಲಿದೆ.

Panic over messages which sent to political leaders iphone mobiles by Appale Company What is the Apple High Alert controversy akb

ನ್ಯೂಯಾರ್ಕ್‌/ದೆಹಲಿ: ಸುರಕ್ಷತೆಗೆ ಅತ್ಯಂತ ಹೆಸರಾದ ಅಮೆರಿಕದ ಆ್ಯಪಲ್ ಕಂಪನಿಯ ಐಫೋನ್‌ಗಳ ಮೇಲೆ ಸರ್ಕಾರಿ ಪೋಷಿತ ದಾಳಿಕೋರರು ಒಳನುಸುಳುವ ಯತ್ನ ಮಾಡಿರಬಹುದು ಎಂದು ಕಂಪನಿ ರವಾನಿಸಿದ ಸಂದೇಶವೊಂದು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂದೇಶದಲ್ಲಿ ಏನಿದೆ? ಸಂದೇಶ ರವಾನೆಯಾಗಲು ಏನು ಕಾರಣ ಎಂಬಿತ್ಯಾದಿ ವಿವರ ಇಲ್ಲಿದೆ.

ಅಲರ್ಟ್‌ನಲ್ಲಿ ಏನಿದೆ?
ಎಚ್ಚರ: ಸರ್ಕಾರಿ ಪೋಷಿತ ದಾಳಿಕೋರರು ನಿಮ್ಮ ಐಫೋನ್ (Iphone) ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿರಬಹುದು. ನಿಮ್ಮ ಆ್ಯಪಲ್ ಐಡಿಯೊಂದಿಗೆ ನೋಂದಣಿ ಆಗಿರುವ ಐಫೋನ್ ಅನ್ನು ದೂರದಿಂದಲೇ ನಿಯಂತ್ರಿಸುವ ಪ್ರಯತ್ನವನ್ನು ಸರ್ಕಾರಿ ಪೋಷಿತ ದಾಳಿಕೋರರು (Government-sponsored attackers) ಮಾಡುತ್ತಿರಬಹುದು ಎಂದು ನಾವು ನಂಬಿದ್ದೇವೆ. ನೀವು ಏನಾಗಿದ್ದೀರೋ ಮತ್ತು ನೀವು ಏನು ಮಾಡುತ್ತಿದ್ದಿರೋ ಆ ಕಾರಣಕ್ಕೆ ಅವರು ನಿಮ್ಮ ಮೇಲೆ ದಾಳಿ ನಡೆಸುತ್ತಿರಬಹುದು. ಒಂದು ವೇಳೆ ಅವರು ನಿಮ್ಮ ಮೊಬೈಲ್ ಅನ್ನು ದೂರದಿ೦ದಲೇ ನಿಯಂತ್ರಿಸಲು ಸಫಲವಾದಲ್ಲಿ ಅವರು ನಿಮ್ಮ ಸೂಕ್ಷ್ಮ ದಾಖಲೆಗಳನ್ನು, ಸಂವಹನ, ಕ್ಯಾಮರಾ ಮತ್ತು ಮೈಕ್ರೋಫೋನ್ ಮಾಹಿತಿಯನ್ನೂ ಕದಿಯಬಹುದು. ಆದರೆ ಇದು ಸುಳ್ಳು ಎಚ್ಚರಿಕೆ ಸಂದೇಶವೂ ಆಗಿರಬಹುದು. ಆದರೂ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಅಪಾಯವನ್ನು ತಪ್ಪಿಸಲು ಲಾಕೌನ್ ಮೋಡ್ ಆನ್ ಮಾಡಿ. ಇದು ಆಪಲ್ ಫೋನ್ (Appale Phone) ಗಣ್ಯ ಗ್ರಾಹಕರಿಗೆ ಬಂದ ಸಂದೇಶ. 

ಸರ್ಕಾರಿ ಪ್ರಾಯೋಜಿತ ದಾಳಿ ಎಂದರೇನು

ಸೈಬರ್‌ ಕಳ್ಳರು ಸಾಮೂಹಿಕವಾಗಿ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಕದಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಸರ್ಕಾರಿ ಪ್ರಾಯೋಜಿತ ಕಳ್ಳರು ನಿರ್ದಿಷ್ಟ ವ್ಯಕ್ತಿಗಳನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತಾರೆ. ಇಂಥ ದಾಳಿಕೋರರಿಗೆ ಆಡಳಿತ ವ್ಯವಸ್ಥೆಯ ಬೆಂಬಲ ಇರುತ್ತದೆ. ಆದರೆ ಇಂಥ ಪ್ರಯತ್ನಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬೇಕು. ಇದರ ಅಭಿವೃದ್ಧಿಯೂ ಅತ್ಯಂತ ಕ್ಲಿಷ್ಟ. ಆದರೂ ಇಂಥ ವ್ಯವಸ್ಥೆ ಅಭಿವೃದ್ಧಿಪಡಿಸಿ ಅದನ್ನು ಆಯ್ದ ವ್ಯಕ್ತಿಗಳ ಖಾಸಗಿ ಮಾಹಿತಿ ಸಂಗ್ರಹಕ್ಕೆ ಬಳಸಲಾಗುತ್ತದೆ. ಜನ ಸಾಮಾನ್ಯರಿಗೆ ಗೊತ್ತಿಲ್ಲದೇ ಇರುವ ಮಾರ್ಗಗಳನ್ನು ಬಳಸಿ ಇಂಥ ಮಾಹಿತಿ ಕದಿಯುವ ಯತ್ನ ಮಾಡಲಾಗುತ್ತದೆ. ಇಲ್ಲಿ ಹ್ಯಾಕರ್‌ಗಳ ಉದ್ದೇಶ ಆರ್ಥಿಕವಾಗಿ ಹಾನಿ ಮಾಡುವುದಾಗಿರುವುದಿಲ್ಲ. ಬದಲಾಗಿ ಮೊಬೈಲ್‌ಗಳಲ್ಲಿ ಇರುವ ದತ್ತಾಂಶಗಳನ್ನು ಸಂಗ್ರಹಿಸುವುದಷ್ಟೇ ಇವರ ಗುರಿಯಾಗಿರುತ್ತದೆ.

8 ದಶಕಗಳ ಸುಧೀರ್ಘ ಸೇವೆಯ ಬಳಿಕ ವಾಯುಪಡೆಗೆ ಮಿಗ್‌ 21 ಗುಡ್‌ಬೈ

ಅಲರ್ಟ್‌ ಹೇಗೆ ಸೃಷ್ಟಿಯಾಗುತ್ತದೆ?

ಇಂಥ ಹಿಂದಿನ ದಾಳಿಗಳ ಮಾದರಿಯನ್ನು ಆಧರಿಸಿ ಆ್ಯಪಲ್‌ ಕಂಪನಿ ತನ್ನದೇ ಆದ ಜಾಗೃತ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ. ಹೀಗಾಗಿ ತನ್ನ ಸಂಗ್ರಹದಲ್ಲಿರುವ ಯಾವುದೇ ಮಾದರಿ ಅಥವಾ ಅದಕ್ಕೆ ಹೋಲುವ ಮಾದರಿಯಲ್ಲಿ ತನ್ನ ಬಳಕೆದಾರರ ಮೊಬೈಲ್‌ನಲ್ಲಿ ಯಾವುದೇ ಅಕ್ರಮ ಪ್ರವೇಶ ಕಂಡುಬಂದಲ್ಲಿ ಆಗ ಈ ವ್ಯವಸ್ಥೆ ಜಾಗೃತಗೊಂಡು ಬಳಕೆದಾರನ ಇ - ಮೇಲ್‌ಗೆ ಮತ್ತು ಮೊಬೆಲ್‌ಗೆ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಜೊತೆಗೆ ಇಂಥ ದಾಳಿಯಿಂದ ತಪ್ಪಿಸಿಕೊಳ್ಳಲು ಲಾಕ್ಡೌನ್‌ ಮೋಡ್‌ ಸೇರಿದಂತೆ ಕೆಲವೊಂದು ಮುಂಜಾಗ್ರತಾ ಕ್ರಮಗಳಿಗೆ ಸೂಚಿಸುತ್ತದೆ.

ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ: ಹೆಲ್ಮೆಟ್‌ ಧರಿಸದೇ 50029 ಜನರ ಸಾವು

ವ್ಯವಸ್ಥೆ ಪರಿಪೂರ್ಣವೇನೂ ಅಲ್ಲ.

ಆ್ಯಪಲ್‌ ಇಂಥ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದರೂ ಅದು ಪರಿಪೂರ್ಣವೇನೂ ಅಲ್ಲ ಎಂಬುದನ್ನು ಸ್ವತಃ ಆ್ಯಪಲ್‌ ಒಪ್ಪಿಕೊಳ್ಳುತ್ತದೆ. ಪ್ರತಿ ಬಾರಿಯೂ ಇಂಥ ಸಂದೇಶ ಖಚಿತವಾಗಿಯೇ ಇರುತ್ತದೆ ಎಂಬುದೇನು ಖಾತ್ರಿಯಲ್ಲ. ಕೆಲವೊಮ್ಮೆ ತಪ್ಪು ಮಾಹಿತಿಗಳು ಕೂಡಾ ಇಂಥ ಎಚ್ಚರಿಕೆಗೆ ಕಾರಣವಾಗಬಲ್ಲದು ಎಂಬುದು ಕಂಪನಿಯ ಸ್ಪಷ್ಟನೆ

ಲಾಕ್‌ಡೌನ್ ಮೋಡ್‌ ಎಂದರೇನು?

ಕೋವಿಡ್‌ ನಂತರ 2021ರಲ್ಲಿ ಆ್ಯಪಲ್‌ ಐಫೋನ್‌ ಈ ಹೊಸ ಫೀಚರ್‌ನ್ನು ಅಳವಡಿಸಿದ್ದು, ಇದನ್ನು ಸಕ್ರಿಯಗೊಳಿಸಿದರೆ ಬೃಹತ್‌ ಪ್ರಮಾಣದ ಅಟ್ಯಾಚ್‌ಮೆಂಟ್‌ಗಳನ್ನು ಪ್ರಸರಣ ಮಾಡಲು ಸಾಧ್ಯವಿರುವುದಿಲ್ಲ. ಅಲ್ಲದೆ ಹಲವು ಕಾರ್ಯಗಳನ್ನು ನಿಯಂತ್ರಿಸಿ ಮಾಲ್‌ವೇರ್‌ಗಳು ಮೊಬೈಲ್‌ನಲ್ಲಿರುವ ಮಾಹಿತಿ ಕದಿಯದಂತೆ ತಡೆಯುತ್ತವೆ. ಆದರೆ ಇವು ಐಒಎಸ್‌ 16, ವಾಚ್‌ಒಎಸ್‌ 10, ಮ್ಯಾಕ್‌ಒಎಸ್‌ ವೆಂಚುರಾ ಹಾಗೂ ಅದರ ಮುಂದಿನ ಸುಧಾರಿತ ವರ್ಷನ್‌ಗಳಲ್ಲಿ ಮಾತ್ರ ಲಾಕ್‌ಡೌನ್‌ ಫೀಚರ್‌ ಲಭ್ಯವಿರುತ್ತದೆ.

Latest Videos
Follow Us:
Download App:
  • android
  • ios