Asianet Suvarna News Asianet Suvarna News

ಲಾಡೆನ್‌ ಹತ್ಯೆ ರೀತಿ ಕಾರ್ಯಾಚರಣೆ: ISIS ಬಾಸ್‌ ಆತ್ಮಾಹುತಿ

ಸಿರಿ​ಯಾ​ದಲ್ಲಿ ಅಮೆ​ರಿಕ ಸೇನೆ ನಡೆಸಿದ ಭಾರೀ ಕಾರ್ಯಾಚರಣೆಗೆ ಬೆದರಿದ ಐಸಿಸ್‌ ಸಂಘಟನೆಯ ಮುಖ್ಯಸ್ಥ ಇಬ್ರಾಹಿಂ ಅಲ್‌ ಹಷಿಮಿ ಅಲ್‌ ಖುರಾಯ್ಷಿ ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ. 

Islamic State chief Abu Ibrahim al Hashimi al Qurayshi blows himself up amid US raid gvd
Author
Bangalore, First Published Feb 4, 2022, 4:36 AM IST

ಅಟ್ಮೆ​ಹ್‌​(​ಸಿರಿ​ಯಾ) (ಫೆ.04): ಸಿರಿ​ಯಾ​ದಲ್ಲಿ ಅಮೆ​ರಿಕ ಸೇನೆ ನಡೆಸಿದ ಭಾರೀ ಕಾರ್ಯಾಚರಣೆಗೆ ಬೆದರಿದ ಐಸಿಸ್‌ (ISIS) ಸಂಘಟನೆಯ ಮುಖ್ಯಸ್ಥ ಇಬ್ರಾಹಿಂ ಅಲ್‌ ಹಷಿಮಿ ಅಲ್‌ ಖುರಾಯ್ಷಿ (Abu Ibrahim al Hashimi al Qurayshi) ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ತನ್ನ ಜೊತೆಗೆ ತನ್ನ ಕುಟುಂಬ ಸದಸ್ಯರನ್ನೂ ಆತ ಇದೇ ರೀತಿಯಲ್ಲಿ ಸಾವಿನ ಮನೆಗೆ ಕಳುಹಿಸಿದ್ದಾನೆ.

ಈ ಹಿಂದೆ ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ಹತ್ಯೆಗೆ ಪಾಕಿಸ್ತಾನವನ್ನು ರಹಸ್ಯವಾಗಿ ಪ್ರವೇಶಿಸಿ ಅಮೆರಿಕ ಪಡೆಗಳು ನಡೆಸಿದ ಕಾರ್ಯಾಚರಣೆ ನಡೆಸಿದ ರೀತಿಯಲ್ಲೇ ಈ ಕಾರ್ಯಾಚರಣೆಯನ್ನೂ ನಡೆಸಲಾಗಿದೆ.

ತಡ ರಾತ್ರಿ ರಹಸ್ಯ ದಾಳಿ: ಹಾಜಿ ಅಬ್ದುಲ್ಲಾ ಎಂದೂ ಕರೆಯಲಾಗುವ ಐಸಿಸ್‌ ಮುಖ್ಯಸ್ಥ ಇಬ್ರಾಹಿಂ, ಸಿರಿಯಾದ ಇದ್ಲಿಬ್‌ ಪ್ರಾಂತ್ಯದ ಅಟ್ಮೇಹ್‌ ನಗರದ ಮನೆಯೊಂದರಲ್ಲಿ ಅಡಗಿರುವ ಅಮೆರಿಕ ಸೇನೆ ಎರಡು ದಿನಗಳ ಹಿಂದೆ ತಡರಾತ್ರಿ ವಿಶೇಷ ಪಡೆಗಳೊಂದಿಗೆ ರಹಸ್ಯವಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಖಾತೆ ಮೂಲಕ ದೀಪ್ತಿ ಐಸಿಸ್‌ ನೇಮಕಾತಿ: ಇಸ್ಲಾಮಿಕ್‌ ಸ್ಟೇಟ್ಸ್‌ಗೆ ಹಿಂದೂ ಯುವತಿ ಬಳಕೆ

ಆಲಿವ್‌ ಮರಗಳಿಂದ ಸುತ್ತುವರೆದ 2 ಅಂತಸ್ತಿನ ಮನೆಯ ಮೇಲೆ ಇಳಿದ ಅಮೆರಿಕ ಯೋಧರು, ಇಬ್ರಾಹಿಂಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ವೇಳೆ ಆತನ ಭದ್ರತಾ ಸಿಬ್ಬಂದಿ ಅಮೆರಿಕ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಮೆರಿಕ ಯೋಧರು ಕೂಡಾ ಪ್ರತಿದಾಳಿ ನಡೆಸಿದ್ದಾರೆ. ಸುಮಾರು 2 ಗಂಟೆ ಹೀಗೆ ಗುಂಡಿನ ಚಕಮಕಿ ನಡೆದಿದೆ. ಬಳಿಕ ತಾನು ಸಿಕ್ಕಿಬೀಳುವುದು ಖಚಿತ ಎನ್ನುವುದು ಖಾತರಿಯಾಗುತ್ತಲೇ ಇಬ್ರಾಹಿಂ ತನ್ನ ಕುಟುಂಬ ಸದಸ್ಯರೊಂದಿಗೆ ಬಾಂಬ್‌ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಅಮೆ​ರಿಕದ ಅಧಿ​ಕಾ​ರಿ​ಯೊ​ಬ್ಬರು ಮಾಹಿತಿ ನೀಡಿ​ದ್ದಾರೆ.

ಈ ದಾಳಿ​ಯಲ್ಲಿ ನಾಲ್ವರು ಮಹಿಳೆಯರು ಮತ್ತು 6 ಮಕ್ಕಳು ಸೇರಿ 13 ಮಂದಿ ಬಲಿ​ಯಾ​ಗಿದ್ದಾರೆ. ಅಲ್ಲದೆ ಐಸಿಸ್‌ ಮುಖ್ಯಸ್ಥ ಅಬು ಇಬ್ರಾ​ಹಿಂನನ್ನು ಕೊಂದು ಹಾಕಿ​ದ್ದೇವೆ. ಆದರೆ ನಮ್ಮ ಸೇನೆಯ ಒಬ್ಬ ಯೋಧ ಸಹ ಗಾಯ​ಗೊಂಡಿಲ್ಲ. ಈ ಕಾರ್ಯಾ​ಚ​ರ​ಣೆ​ಯಲ್ಲಿ ತೊಡ​ಗಿದ್ದ ಯೋಧ​ರೆ​ಲ್ಲರೂ ಸುರ​ಕ್ಷಿ​ತ​ವಾಗಿ ತಾಯ್ನಾ​ಡಿಗೆ ಬಂದಿ​ದ್ದಾರೆ ಎಂದು ಅಮೆ​ರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿ​ದ್ದಾರೆ.

Taliban In Afghanistan: ತಾಲಿಬಾನ್‌ ಸೇನೆಗೆ ಆತ್ಮಾಹುತಿ ಬಾಂಬರ್‌ ನೇಮಕ!

ಯಾರು ಈ ಇಬ್ರಾಹಿಂ?: 2019ರಲ್ಲಿ ಸಿರಿಯಾದ ಮೇಲೆ ದಾಳಿ ನಡೆಸಿದ್ದ ಅಮೆರಿಕ ಪಡೆಗಳು ಆಗ ಐಸಿಸ್‌ ಮುಖ್ಯಸ್ಥನಾಗಿದ್ದ ಅಬು​ಬ​ಕರ್‌ ಅಲ್‌-ಬಗ್ದಾ​ದಿ​ಯನ್ನು ಕೊಂದು ಹಾಕಿದ್ದವು. ನಂತರ ಇಬ್ರಾಹಿಂ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ.

Follow Us:
Download App:
  • android
  • ios