ರೈಲ್ವೇ ಟಾಯ್ಲೆಟ್ ಸೀಟ್ ನೆಕ್ಕಿ, ಮೈತುಂಬಾ ಮಲ ಹಚ್ಚಿಕೊಂಡು  ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಜಕಾರಣಿ

ಜರ್ಮನಿಯ ನಾಯಕನೊಬ್ಬ ರೈಲ್ವೆ ಶೌಚಾಲಯದಲ್ಲಿ ಕೊಳಕು ಕೆಲಸ ಮಾಡಿದ್ದಾನೆ. ಈ ಕೆಲಸದ ವಿಡಿಯೋ  ವೈರಲ್ ಆದ  ಬಳಿಕ ಆತನನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಈ ಸಂಬಂಧ ತನಿಖೆಯೂ ಆರಂಭವಾಗಿದೆ.

German politician Martin Neumaier lick railway public toilet mrq

ಜರ್ಮನಿ: ರಾಜಕೀಯ ಮುಖಂಡನೋರ್ವ ರೈಲ್ವೆಯ  ಶೌಚಾಲಯದಲ್ಲಿ ಮಾಡಿದ ಕೊಳಕು ಕೆಲಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖದ್ದು ಆ ರಾಜಕೀಯ ಮುಖಂಡನೇ ಈ ವಿಡಿಯೋ  ಮತ್ತು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.

ಜರ್ಮನಿಯ ಮಾರ್ಟಿನ್ ನ್ಯೂಮೇಯರ್ ಶೌಚಾಲಯದಲ್ಲಿನ ವಿಡಿಯೋ ವೈರಲ್ ಆಗಿದೆ ಮಾರ್ಟಿನ್ ನ್ಯೂಮೇಯರ್ ಫ್ರೀ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ  ಮಾರ್ಟಿನ್ ನ್ಯೂಮೇಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇವರ ನಾಮನಿರ್ದೇಶನವನ್ನು ಸಹ ರದ್ದುಗೊಳಿಸಲಾಗಿದೆ. 

ವೈರಲ್ ವಿಡಿಯೋದಲ್ಲಿ ಏನಿದೆ? 

ಮಾರ್ಟಿನ್ ನ್ಯೂಮೇಯರ್ ರೈಲ್ವೆಯ ಟಾಯ್ಲೆಟ್‌ ಕಮೋಡ್‌ನ್ನು ನಾಲಿಗೆಯಿಂದ ನೇರವಾಗಿ ನೆಕ್ಕುತ್ತಾರೆ. ನಂತರ  ಶೌಚಾಲಯ ಸ್ವಚ್ಛಗೊಳಿಸುವ ಬ್ರಶ್‌ ಸಹ ನೆಕ್ಕಿದ್ದಾರೆ. ಮತ್ತೊಂದು ಫೋಟೋದಲ್ಲಿ ಬೆತ್ತಲಾಗಿರುವ ಮಾರ್ಟಿನ್ ಮೈತುಂಬಾ ಮಲ  ಹಂಚಿಕೊಂಡಿದ್ದಾರೆ. ಆ ಮಲ ಮಾರ್ಟಿನ್ ಮುಖಕ್ಕೂ ಅಂಟಿರೋದನ್ನು ಕಾಣಬಹುದು. 

ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ 90 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಒಂಬತ್ತು ಸಾವಿರಕ್ಕೂ ಅಧಿಕ ಬಾರಿ  ರೀಟ್ವೀಟ್ ಆಗಿದ್ದು,  ಐದು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.

ಮಾರ್ಟಿನ್ ನ್ಯೂಮೇಯರ್ ಸ್ಪಷ್ಟನೆ

ಮಾರ್ಟಿನ್ ಈ ವಿಡಿಯೋಗಳನ್ನು ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಅಡಾಲ್ಫ್ ಹಿಟ್ಲರ್ ಪಾತ್ರದ ಪ್ರ್ಯಾಕ್ಟಿಸ್ ಮಾಡುತ್ತಿದ್ದೆ ಎಂದು ಮಾರ್ಟಿನ್ ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲು ಮಾರ್ಟಿನ್ ನಿರಾಕರಿಸಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. 

ಫ್ರೀ ಡೆಮಾಕ್ರಟಿಕ್ ಪಕ್ಷದ ಪ್ರತಿಕ್ರಿಯೆ

ಫ್ರೀ ಡೆಮಾಕ್ರಟಿಕ್ ಪಕ್ಷದ ವಕ್ತಾರರೊಬ್ಬರು ಈ  ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಹೇಗೆ ಹೊರ ಬಂತು ಎಂಬುವುದು ಗೊತ್ತಾಗುತ್ತಿಲ್ಲ. ಆದ್ರೆ ಇದೊಂದು ಅತ್ಯಂಕ ಕೊಳಕು ಕೆಲಸವಾಗಿದೆ ಎಂದು ಹೇಳಿದ್ದಾರೆ.

ಮಾರ್ಟಿನ್ ನ್ಯೂಮೇಯರ್ ಜರ್ಮನಿಯ ಓಸ್ಟಾಲ್ಬ್ ಜಿಲ್ಲೆಯ ಫ್ರೀ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದರು. ಈ ವಿಡಿಯೋ ಹೊರ ಬಂದ ಕಾರಣ ಮಾರ್ಟಿನ್ ಅವರಿಗೆ ನೀಡಿದ ಬೆಂಬಲವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಕೂಡಲೇ ಬೇರೆಯೊಬ್ಬರ ನಾಮನಿರ್ದೇಶನ ಮಾಡಲಾಗುವುದು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. 

ನಾನು ಮಾಡಿದ ತಪ್ಪನ್ನ ಮಾಡಬೇಡಿ? ಮನೆಯೊಳಗೆ ಸಿಕ್ಕ 27 ವರ್ಷದ ಹಳೆಯ ಪತ್ರದಲ್ಲಿತ್ತು ಎಚ್ಚರಿಕೆ ಸಂದೇಶ?

ಪಕ್ಷದಿಂದ  ವಜಾಗೊಳಿಸುವ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗುತ್ತಿದೆ.  ಈ ಸಂಬಂಧ ಆಂತರಿಕ ತನಿಖೆಯನ್ನು ಆರಂಭಿಸಲಾಗುತ್ತದೆ. ಪಾರದರ್ಶಕ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಫ್ರೀ ಡೆಮಾಕ್ರಟಿಕ್ ಪಕ್ಷ ಹೇಳಿದೆ. 

ನೆಟ್ಟಿಗರ ಅಭಿಪ್ರಾಯ 

ನಾನು ಈ ವಿಡಿಯೋವನ್ನು ನೋಡಲಾರೆ ಎಂದು ಓರ್ವ ನೆಟ್ಟಿಗರು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ. ರೈಲ್ವೇ ಶೌಚಾಲಯದ ನೆಕ್ಕುವುದು ಅಂದ್ರೆ ಏನರ್ಥ? ಇಂತಹ ವಿಡಿಯೋಗಳನ್ನು ನಾನೆಂದಿಗೂ ನೋಡಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ ಈ ವಿಡಿಯೋ ನೋಡಿದ ನಂತರ ನನಗೆ  ವಾಂತಿ ಆಯ್ತು ಎಂದು ಬರೆದುಕೊಂಡಿದ್ದಾರೆ.

ಜೀವ ತೆಗೆದ ಚಾಲೆಂಜ್; ಖಾರವಾದ ಚಿಪ್ಸ್ ತಿಂದ  14ರ ಬಾಲಕನಿಗೆ ಹೃದಯ ಸ್ತಂಭನ

ಈ ಹಿಂದೆ ಇದೊಂದು ಚಾಲೆಂಜ್ ಆಗಿತ್ತು!

ಕೆಲ ವರ್ಷಗಳ ಹಿಂದೆ ಮನೆಯ ಟಾಯ್ಲೆಟ್ ಕಮೋಡ್ ನೆಕ್ಕುವ ಚಾಲೆಂಜ್ ಶುರುವಾಗಿತ್ತು. ಈ ಚಾಲೆಂಜ್ ಸ್ವೀಕರಿಸಿದವರು  ವಿಡಿಯೋ ಮಾಡಿ ಅದನ್ನು ಮತ್ತೊಬ್ಬರಿಗೆ ಟ್ಯಾಗ್ ಮಾಡುತ್ತಿದ್ದರು. ಅವರು ಈ ಚಾಲೆಂಜ್ ಪೂರ್ಣ ಮಾಡಬೇಕಿತ್ತು. ಬಹುತೇಕ ಯುವತಿಯರೇ ಈ ಚಾಲೆಂಜ್ ಸ್ವೀಕರಿಸುತ್ತಿದ್ದರು.

Latest Videos
Follow Us:
Download App:
  • android
  • ios