Asianet Suvarna News Asianet Suvarna News

ಮನೆಗಳಲ್ಲ, ಮಾರಾಟಕ್ಕಿದೆ ಇಡೀ ನಗರ; ಇಷ್ಟು ಹಣ ನಿಮ್ಮ ಬಳಿಯಲ್ಲಿದ್ರೆ ನೀವು  ಖರೀದಿಸಬಹುದು

ಮಾರಾಟಕ್ಕೆ ಇರಿಸಲಾಗಿರುವ ಕಾಂಪೋ ಪಟ್ಟಣದಲ್ಲಿ ಪ್ರಮುಖವಾಗಿ 20 ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಸಿಂಗಲ್ ಫ್ಯಾಮಿಲಿ ಮನೆಗಳು ಮತ್ತು ಕಮರ್ಷಿಯಲ್ ಆಸ್ತಿಗಳಿವೆ.

town of Campo in California is for sale mrq
Author
First Published May 17, 2024, 4:27 PM IST

ಕ್ಯಾಲಿಪೋರ್ನಿಯಾ: ಸಾಮಾನ್ಯವಾಗಿ ಮನೆ, ಜಮೀನು, ಕೃಷಿಭೂಮಿ, ವಾಹನಗಳನ್ನು ಮಾರಾಟಕ್ಕೆ ಇರಿಸಲಾಗುತ್ತದೆ. ಆದರೆ ಈ ದೇಶದಲ್ಲಿ ಒಂದು ಪಟ್ಟಣವನ್ನು ಮಾರಾಟಕ್ಕೆ ಇರಿಸಲಾಗಿದೆ. ನಿಮ್ಮ ಬಳಿ ಇಷ್ಟು ಹಣವಿದ್ರೆ ನೀವು ಈ ಪಟ್ಟಣವನ್ನು ಖರೀದಿಸಬಹುದಾಗಿದೆ.

ಕ್ಯಾಲಿಫೋರ್ನಿಯಾದ  ಕಾಂಪೋ ಪಟ್ಟಣವನ್ನು 6.6 ಮಿಲಿಯನ್ ಡಾಲರ್‌ಗೆ ಮಾರಾಟಕ್ಕೆ ಇರಿಸಲಾಗಿದೆ. ಈ ಪಟ್ಟಣವ ಮೆಕ್ಸಿಕನ್ ಗಡಿಯಿಂದ  ಒಂದು  ಮೈಲಿ ದೂರದಲ್ಲಿದೆ. ನೈಋತ್ಯ ಸ್ಯಾನ್ ದಿಯೋಗ್‌ನಿಂದ 50 ಮೈಲು ದೂರದಲ್ಲಿದೆ. 

ಕಾಂಪೋ ಪಟ್ಟಣದಲ್ಲಿ ಏನಿದೆ?

ಮಾರಾಟಕ್ಕೆ ಇರಿಸಲಾಗಿರುವ ಕಾಂಪೋ ಪಟ್ಟಣದಲ್ಲಿ ಪ್ರಮುಖವಾಗಿ 20 ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಸಿಂಗಲ್ ಫ್ಯಾಮಿಲಿ ಮನೆಗಳು ಮತ್ತು ಕಮರ್ಷಿಯಲ್ ಆಸ್ತಿಗಳಿವೆ. ಇದರ ಜೊತೆಯಲ್ಲಿ ಬ್ಯಾಪ್ಟಿಸ್ಟ್ ಚರ್ಚ್, ಯುಎಸ್ ಪೋಸ್ಟ್ ಆಫೀಸ್, ವೆಟರನ್ಸ್ ಆಫ್ ಫಾರಿನ್ ವಾರ್ಸ್ ಚಾಪ್ಟರ್, ಲೋಹದ ಅಂಗಡಿ, ಕ್ಯಾಬಿನೆಟ್ ಅಂಗಡಿ, ಮರದ ಅಂಗಡಿ ಮತ್ತು ಗಡಿ ಗಸ್ತು ಹೊರಠಾಣೆ ಸೇರಿವೆ. 

ಎರಡನೇ ವಿಶ್ವಯುದ್ಧದಲ್ಲಿ ಮಿಲಟಿರಿ ನೆಲೆ

ಕಾಂಪೋ ಪಟ್ಟಣ ಮೊದಲು ಮಿಲಟಿರಿ ಸಿಬ್ಬಂದಿಯ ನೆಲೆಯಾಗಿಯತ್ತು. 19ನೇ ಶತಮಾನದಲ್ಲಿ ಅಂದ್ರೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಕಾಂಪೋ ಮಿಲಟರಿ ಸಿಬ್ಬಂದಿಯ ವಸಹಾತು ಆಗಿತ್ತು. ಸದ್ಯ ಈ ಪಟ್ಠಣದಲ್ಲಿ ಸುಮಾರು 100 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈಗಿನ ವಾಸಿಗಳೆಲ್ಲರೂ ಬಾಡಿಗೆದಾರರು. ಲಾಸ್ ವೆಗಾಸ್‌ನ ರಿಯಲ್ ಎಸ್ಟೇಟ್ ಹೂಡಿಕೆದಾರ ಜಾನ್ ರಾಯ್ ಇದರ ಮಾಲೀಕರಾಗಿದ್ದಾರೆ. 

ಜಾನ್ ರಾಯ್‌ 2000ದಿಂದ ಕಾಂಪೋ ಪಟ್ಟಣದ ಬಹುಪಾಲು ಒಡೆತನವನ್ನು ಹೊಂದಿದ್ದಾರೆ. ಕಾಂಪೋ ಪಟ್ಟಣವನ್ನು ಪುನರುಜ್ಜೀವನಗೊಳಿಸುವ ಆಸಕ್ತಿ ಹೊಂದಿರುವರು ಖರೀದಿಸಬೇಕು ಎಂದು ರಾಯ್ ಹೇಳುತ್ತಾರೆ. ಈ ಪಟ್ಟಣವನ್ನು ಖರೀದಿಸುವವರು, ಸದ್ಯ ಇಲ್ಲಿ ವಾಸವಾಗಿರು ಜನರ ಅಗತ್ಯತೆಗಳನ್ನು ಗೌರವಿಸಬೇಕು ಎಂದು ರಾಯ್  ಹೇಳಿದ್ದಾರೆ.

4 ಕೈ, 3 ಕಾಲಿನ ಜೊತೆ ಹುಟ್ಟಿದ್ದ ಸಯಾಮಿ ಅವಳಿಗಳಿಗೆ ನಡೀತು ಶಸ್ತ್ರಚಿಕಿತ್ಸೆ; ಈಗ ಹೇಗಿದ್ದಾರೆ?

ನಿವ್ವಳ ಕಾರ್ಯಾಚರಣಾ ಆದಾಯದಲ್ಲಿ ಇದು ದೊಡ್ಡ ಬದಲಾವಣೆ ಆಗಲಿದೆ. ಈ  ಪಟ್ಟಣ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ ಎಂದು ಟಾಪ್ ಗನ್ CRE ನ ಪಟ್ಟಿ ಮಾಡುವ ಏಜೆಂಟ್ ನಿಕ್ ಹೆರ್ನಾಂಡೆಜ್ ಹೇಳುತ್ತಾರೆ.

ಖರೀದಿದಾರರ ಪಟ್ಟಿ ಸಿದ್ದ

ಮಿಷನ್ ವ್ಯಾಲಿ-ಆಧಾರಿತ ಸಂಸ್ಥೆಯೊಂದು ಮೂರು ವಾರಗಳ ಹಿಂದೆ ಕಾಂಪೋ ಪಟ್ಟಣ ಖರೀದಿಯ ಆಸಕ್ತಿಯುಳ್ಳರ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಆಸಕ್ತರನ್ನು ಸಂಪರ್ಕಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಕಾಂಪೋ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರೋಮೋ ವಿಡಿಯೋ ಸಹ ಮಾಡಲಾಗಿದೆ ಎಂದು ಏಜೆಂಟ್‌ಗಳು ಹೇಳಿದ್ದಾರೆ.

ಅಬ್ಬಬ್ಬಾ..ಮೆಟ್‌ಗಾಲಾದಲ್ಲಿ ಈ ನಟನ ಕೈಯಲ್ಲಿದ್ದ ಚಿಪ್ಸ್ ಪ್ಯಾಕೆಟ್ ಬೆಲೆ ಬರೋಬ್ಬರಿ 1.5 ಲಕ್ಷ ರೂ.!

ಮಾರಾಟ ಮಾಡುತ್ತಿರೋದು ಏಕೆ?

ಜಾನ್ ರಾಯ್ ಒಬ್ಬರು ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಗಳು. ಅದ್ದರಿಂದ ಎಲ್ಲವನ್ನು ಮೇಲ್ವಿಚಾರಣೆ ಮಾಡಲ ಸಾಧ್ಯವಾಗದ ಹಿನ್ನೆಲೆ ಕಾಂಪೋ ಮಾರಾಟಕ್ಕೆ ಮುಂದಾಗಿದ್ದಾರೆ. ಕಾಂಪೋ ಜೊತೆಯಲ್ಲಿ ಜಕುಂಬಾದಿಂದ ವಾಯುವ್ಯಕ್ಕೆ ಸುಮಾರು 3.5 ಮೈಲುಗಳಷ್ಟು ದೂರದಲ್ಲಿರುವ ಬ್ಯಾಂಕ್‌ಹೆಡ್ ಸ್ಪ್ರಿಂಗ್ಸ್‌ನ ಪಟ್ಟಣವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬ್ಯಾಂಕ್‌ಹೆಡ್ ಸ್ಪ್ರಿಂಗ್ಸ್‌ನ ಪಟ್ಟಣವನ್ನು ದೆವ್ವದ ಊರು ಎಂದು ಕರೆಯಲಾಗುತ್ತದೆ. 

2000ರಲ್ಲಿ ಖರೀದಿಸಿದ್ದ ಸಣ್ಣ ಕುಗ್ರಾಮವನ್ನು ಸಹ ಮಾರಾಟಕ್ಕೆ ಮುಂದಾಗಿರುವ ಜಾನ್ ರಾಯ್, ಈ ಹಳ್ಳಿಗೆ 2 ಮಿಲಿಯನ್ ಡಾಲರ್ ನಿಗದಿ ಮಾಡಿದ್ದಾರೆ. ಎಲ್ ಸೆಂಟ್ರೊ, ಯುಮಾ, ಲೋಗನ್ ಹೈಟ್ಸ್ ಮತ್ತು ಶೆರ್ಮನ್ ಹೈಟ್ಸ್‌ನಲ್ಲಿ ಜಾನ್ ರಾಯ್ ಆಸ್ತಿ ಖರೀದಿ ಮಾಡಿದ್ದರು, ಇದೀಗ ಎಲ್ಲವನ್ನು ರಾಯ್  ಹಂತ ಹಂತವಾಗಿ ಮಾರಾಟ ಮಾಡುತ್ತಿದ್ದಾರೆ.
 

Latest Videos
Follow Us:
Download App:
  • android
  • ios