Mojtaba Khamenei health update: ಅಮೆರಿಕ-ಇಸ್ರೇಲ್ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿ

ಟೆಹ್ರಾನ್: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅವರಿಗೆ ಕೋಂ ನಗರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಯಾವುದೇ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕ ಹಾಗೂ ಇಸ್ರೇಲ್ ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಫೆ.28ರಂದು ನಡೆದ ದಾಳಿಯಲ್ಲಿ ಮೊಜ್ತಬಾ ಖಮೇನಿ ತಂದೆ ಖಮೇನಿ ಸೇರಿದಂತೆ ಹಲವು ಉನ್ನತ ನಾಯಕರು ಸಾವನ್ನಪ್ಪಿದ್ದರು. ಅದೇ ದಾಳಿಯಲ್ಲೇ ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರು ಸರ್ವೋಚ್ಚ ನಾಯಕನ ಪದವಿ ಅಲಂಕರಿಸಿದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿ, ಅವರು ದಕ್ಷಿಣ ಟೆಹ್ರಾನ್‌ನಿಂದ 140 ಕಿ.ಮೀ. ದೂರದ ಕೋಂ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಖಮೇನಿ ಕುಟುಂಬ ಸದಸ್ಯರ ಅಂತ್ಯಕ್ರಿಯೆಗೆ ಸಿದ್ಧತೆ:

ಫೆ.28ರಂದು ಮೃತಪಟ್ಟಿರುವ ಖಮೇನಿ ಹಾಗೂ ಇತರ ಕುಟುಂಬ ಸದಸ್ಯರ ಅಂತ್ಯಕ್ರಿಯೆಯನ್ನು ಇದುವರೆಗೂ ನೆರವೇರಿಸಲಾಗಿಲ್ಲ. ಇದೀಗ ಪವಿತ್ರ ಕೋಂ ನಗರದಲ್ಲಿ ಬೃಹತ್ ಸಮಾಧಿ ನಿರ್ಮಿಸಲು ಸಿದ್ದತೆಗಳು ನಡೆದಿವೆ. ಖಮೇನಿ ಪಕ್ಕದಲ್ಲೇ ಇತರ ಕುಟುಂಬಸ್ಥರನ್ನೂ ಹೂಳಲಾಗುತ್ತದೆ ಎಂದು ಅಮೆರಿಕ-ಇಸ್ರೇಲಿ ಗುಪ್ತಚರ ಏಜೆನ್ಸಿಗಳು ಪತ್ತೆ ಮಾಡಿವೆ.

ಪನಾಮಾ ಕಾಲುವೆ ಬಳಿ ತೈಲ ಘಟಕ ಸ್ಫೋಟ

ಪನಾಮಾ: ಅಮೆರಿಕ-ಇರಾನ್ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಮಧ್ಯೆ, ಪನಾಮಾ ನಗರದಲ್ಲಿನ 'ಅಮೆರಿಕ ಸೇತುವೆ'ಯ ಸಮೀಪ ಬಾಲೋವಾ ತೈಲ ಸಂಗ್ರಹಣಾ ಘಟಕದಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವಿಗೀಡಾಗಿದ್ದು, ಇಬ್ಬರು ಸಿಬ್ಬಂದಿ ಗಾಯಗೊಂ ಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ. 1,654 ಮೀ. ಉದ್ದದ ಸೇತುವೆಗೆ ಸ್ಫೋಟದ ಉಷ್ಣತೆಯಿಂದ ಹಾನಿಯಾಗಿರಬಹುದು ಎಂದು ಶಂಕಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ ಆದರೆ ಪನಾಮಾ ಕಾಲುವೆಯ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಅಧಿಕಾರಿಗಳು ಸಹ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹೋರ್ಮುಜ್ ಜಲಸಂಧಿ ತೆರೆಯಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ರಷ್ಯಾ, ಚೀನಾ ಬ್ರೇಕ್

ಏಷ್ಯಾದಿಂದ ಅಮೆರಿಕಕ್ಕೆ ಸರಕು ಸಾಗಣೆ ಮಾಡುವಲ್ಲಿ ಮಹತ್ವದ್ದಾಗಿರುವ ಪನಾಮಾ ಕಾಲುವೆ, ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದು. ಇರಾನ್ ಸಂಘರ್ಷದಿಂದಾಗಿ ಹೋರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ, ಇತ್ತೀಚೆಗೆ ಪನಾಮಾ ಕಾಲುವೆಯ ಮೂಲಕ ಟ್ಯಾಂಕರ್‌ಗಳ ಸಂಚಾರ ಗಣನೀಯವಾಗಿ ಹೆಚ್ಚಿದೆ. ಅದರ ನಡುವೆಯೇ ಸ್ಫೋಟ ಸಂಭವಿಸಿದ್ದು ಕುತೂಹಲ ಕೆರಳಿಸಿದೆ.

ಟೆಹ್ರಾನ್ /ಇಸ್ತಾಂಬುಲ್: ಹೋರ್ಮುಜ್ ಮೇಲಿನ ನಿರ್ಬಂಧ ತೆರವುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವು ಮಂಗಳವಾರ ಅಂತ್ಯವಾಗುವ ಮುನ್ನವೇ, ನಿನ್ನೆ ಭಾರಿ ದಾಳಿ-ಪ್ರತಿದಾಳಿ ನಡೆದಿತ್ತು. 

ಇದನ್ನೂ ಓದಿ: ಹೋರ್ಮುಜ್‌ನಿಂದ ಇರಾನ್‌ಗೆ ಪ್ರತಿ ತಿಂಗಳು ₹42,000 ಕೋಟಿ ಆದಾಯ: 15 ದಿನದಲ್ಲಿ 2ನೇ ಸಲ ಇಂಧನ ದರ ಏರಿಸಿದ ಚೀನಾ

ಖಾರ್ಗ್ ಮೇಲೆ ದಾಳಿ: ಇರಾನ್‌ನ ಒಟ್ಟು ತೈಲ ರಪ್ತಿನ ಸುಮಾರು ಶೇ.90 ಖಾರ್ಗ್ ದ್ವೀಪದಲ್ಲಿ ನಿರ್ವಹಿಸಲ್ಪಡುತ್ತದೆ. ಜೊತೆಗೆ, ಇದು ಹೋರ್ಮುಜ್ ಜಲಸಂಧಿಗೆ ಸಮೀಪದಲ್ಲಿದೆ. ಹೋರ್ಮುಜ್ ಮುಕ್ತಗೊಳಿಸದಿದ್ದರೆ ಖಾರ್ಗ್ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಹಲವು ಬಾರಿ ಎಚ್ಚರಿಸಿದ್ದರು. ಇದೀಗ ದ್ವೀಪದಲ್ಲಿ ಹಲವು ಬೃಹತ್ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಮೆಹ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇಲ್ಲಿನ ಸೈನಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದಾಗಿ ಆ್ಯಕ್ಸಿಯೋಸ್ ವರದಿ ಮಾಡಿದೆ.

ಟೆಹ್ರಾನ್ ಸೇತುವೆ ನಾಶ: ಏಪ್ರಿಲ್ ಆರಂಭದಲ್ಲಿ ಕೊಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿ ಟೆಹ್ರಾನ್ ಮತ್ತು ಕರಾಜ್ ನಡುವಿನ ಪ್ರಮುಖ 'ಬಿ1' ಸೇತುವೆಯನ್ನು ಧ್ವಂಸಗೊಳಿಸಿದ್ದವು. ಈ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದರು. ಇದೀಗ ಇರಾನ್‌ನ ಮಧ್ಯಭಾಗದಲ್ಲಿರುವ ಮತ್ತೊಂದು ಸೇತುವೆಯ ಮೇಲೆ ದಾಳಿ ನಡೆಸಿವೆ.

ಇಸ್ರೇಲ್ ರಾಯಭಾರ ಕಚೇರಿ ಮುಂದೆ ದಾಳಿ:

ಇಸ್ತಾಂಬುಲ್‌ನ ಇಸ್ರೇಲ್ ರಾಯಭಾರ ಕಚೇರಿ ಹೊರಗೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಮೂವರು ದಾಳಿಕೋರರು ರೈಫಲ್‌ ಗಳೊಂದಿಗೆ ಬಂದು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರ ಪ್ರತಿದಾಳಿಗೆ, ಒಬ್ಬ ದಾಳಿಕೋರ ಸಾವಿಗೀಡಾಗಿದ್ದಾನೆ. ಗಾಯಗೊಂಡ ಇನ್ನಿಬ್ಬರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.ಆಸಮಯದಲ್ಲಿ ಕಚೇರಿಯಲ್ಲಿ ಇಸ್ರೇಲ್ ಸಿಬ್ಬಂದಿ ಇರಲಿಲ್ಲ.