ಹೋರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿರುವ ಇರಾನ್, ಹಡಗುಗಳಿಂದ ಶುಲ್ಕ ವಸೂಲಿ ಮಾಡಿ ತಿಂಗಳಿಗೆ ₹42,000 ಕೋಟಿ ಆದಾಯ ಗಳಿಸುತ್ತಿದೆ. ಇದೇ ವೇಳೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚೀನಾವು 15 ದಿನಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ.

ಹೋರ್ಮುಜ್‌ನಿಂದ ಇರಾನ್‌ಗೆ ಪ್ರತಿ ತಿಂಗಳು ₹42,000 ಕೋಟಿ ಆದಾಯ: 

ಟಿಮ್ರಾನ್: ಯಾರ ಬೆದರಿಕೆಗೂ ಜಗ್ಗದೆ ಇರಾನ್, ಹೋರ್ಮುಜ್ ಜಲಸಂಧಿ ಮೇಲಿನ ನಿರ್ಬಂಧ ಮುಂದುವರಿಸಿದೆ. ಹೋರ್ಮುಜ್‌ನಿಂದ ಇರಾನ್‌ಗೆ ಮಾಸಿಕ 42,000 ಕೋಟಿ ರು. ಬೃಹತ್ ಮೊತ್ತ ಬರುವುದೇ ಇದಕ್ಕೆ ಕಾರಣ. ಹೀಗಾಗಿ ಅದು ಯಾರ ಒತ್ತಡಕ್ಕೂ ಮಣಿಯದೆ ನಿಯಂತ್ರಣವನ್ನು ಮುಂದುವರಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಯುದ್ಧಪೂರ್ವದಲ್ಲಿ ಹೋರ್ಮುಜ್ ಮೂಲಕ ಪ್ರತಿನಿತ್ಯ 2-2.3 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಹೊತ್ತ 100-135 ಹಡಗು ಸಂಚರಿಸುತ್ತಿದ್ದವು. ಯುದ್ಧ ಆರಂಭವಾದ ಬಳಿಕ ಈ ಮಾರ್ಗದ ಮೇಲೆ ಇರಾನ್ ನಿರ್ಬಂಧ ವಿಧಿಸಿತು. ಇದೀಗ ಪ್ರತಿ ಹಡಗಿಗೆ 18 ಕೋಟಿ ರು.ಗಳಷ್ಟು ಶುಲ್ಕ ವಿಧಿಸುತ್ತಿದೆ ಎನ್ನಲಾಗುತ್ತಿದೆ. ಇದರಿಂದ ತಿಂಗಳಿಗೆ ಸುಮಾರು 42,000 ಕೋಟಿ ರು. ಗಳಷ್ಟು ಆದಾಯ ಹರಿದುಬರಲಿದೆ. ಇದು ಇರಾನ್‌ನ ಆರ್ಥಿಕತೆಗೆ ಬಹುದೊಡ್ಡ ಶಕ್ತಿ ತುಂಬಲಿದೆ ಎಂದು ವಿಶ್ಲೇಷಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾ: 15 ದಿನದಲ್ಲಿ 2ನೇ ಸಲ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಬೀಜಿಂಗ್: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಚೀನಾದಲ್ಲಿ ತೈಲ ಬೆಲೆಯ ಮೇಲೂ ತಟ್ಟಿದೆ. 15 ದಿನದಲ್ಲಿ ದೇಶದಲ್ಲಿ ಎರಡನೇ ಬಾರಿ ಪೆಟ್ರೋಲ್) ಮತ್ತು ಡೀಸೆಲ್ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ. ಬುಧವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ. ಇದರ ಅನ್ವಯ ಪ್ರತಿ ಟನ್ ಗ್ಯಾಸೋಲಿನ್ ಬೆಲೆ 5673 ರು.ಪ್ರತಿಟನ್ ໕ ໖໖ 5394 .