ಇರಾನ್‌ನಲ್ಲಿ ಹಿಜಾಬ್‌ ಕುರಿತಾದ ಪ್ರತಿಭಟನೆ ಇನ್ನೂ ತಣ್ಣಗಾಗಿಲ್ಲ. ಈ ನಡುವೆ ಇರಾನ್‌ ಸಂಸತ್ತು ಹೊಸ ಕಾನೂನು ಮಾಡಿದ್ದು, ಹಿಜಾಬ್‌ ಧರಿಸದೇ ಸಾರ್ವಜನಿಕವಾಗಿ ಬಂದಲ್ಲಿ 49 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಟೆಹ್ರಾನ್‌ (ಮಾ.28): ಮಹಿಳೆಯರ ವಸ್ತ್ರಸಂಹಿತೆ ವಿಚಾರವಾಗಿ ಇರಾನ್‌ ಹೊಸ ವಿವಾದಾತ್ಮಕ ಕಾನೂನು ಜಾರಿಗೆ ಮುಂದಾಗಿದೆ. ಇನ್ನು ಮುಂದೆ ಇರಾನ್‌ನಲ್ಲಿ ಮಹಿಳೆಯರು ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್‌ ಇಲ್ಲದೇ ಬಂದಲ್ಲಿ, ಅವರಿಗರ ಗರಿಷ್ಠ 49 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಇರಾನ್‌ನ ಸಂಸದ ಹೊಸೈನಿ ಜಲಾಲಿ ಇದನ್ನು ಖಚಿತಪಡಿಸಿದ್ದಾರೆ. ದಂಡದ ಹೊರತಾಗಿ, ಮಹಿಳೆಯರು ಹೊಸ ಡ್ರೆಸ್ ಕೋಡ್ ಅನ್ನು ಅನುಸರಿಸದಿದ್ದರೆ, ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಲಾಗುವುದು ಮತ್ತು ಇಂಟರ್ನೆಟ್ ಬಳಸುವುದನ್ನು ನಿಷೇಧಿಸಲಾಗುವುದು ಎಂದು ಜಲಾಲಿ ಹೇಳಿದ್ದಾರೆ. ಕಳೆದ 6 ತಿಂಗಳಿನಿಂದ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ಈ ಹೊಸ ಕಾನೂನು ಇನ್ನೊಂದು ತಲೆಬಿಸಿ ತಂದಿದೆ.

ಹಿಜಾಬ್‌ ಧರಿಸದವರು ಕೊರೋನಾವೈರಸ್‌ ಇದ್ದ ಹಾಗೆ: ಮತ್ತೊಂದೆಡೆ, ಇರಾನ್‌ನ ಧಾರ್ಮಿಕ ಮುಖಂಡ ಮೊಹ್ಸೆನ್ ಅರಾಕಿ ಅವರು ಹಿಜಾಬ್ ಧರಿಸದ ಮಹಿಳೆಯರನ್ನು ಕರೋನಾ ವೈರಸ್‌ಗೆ ಹೋಲಿಸಿದ್ದಾರೆ. ಹಿಜಾಬ್ ವಿರುದ್ಧ ಈಗ ಏಳುತ್ತಿರುವ ವಿರೋಧವನ್ನು ಕರೋನಾ ವೈರಸ್‌ನಂತೆ ಹರಡಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. 'ಇರಾನ್‌ನಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಕೊನೆಗೊಳಿಸುವುದು ನಮ್ಮ ಶತ್ರುಗಳ ಗುರಿಯಾಗಿದೆ. ಹಿಜಾಬ್ ಇಲ್ಲದೆ ಮಹಿಳೆ ಸ್ವತಂತ್ರಳಾಗಿ ಇರಲು ಸಾಧ್ಯವಿಲ್ಲ. ಹಿಜಾಬ್‌ ಧರಿಸಿದೇ ಇದ್ದರೆ, ಆಕೆ ಯಾವಾಗಲೂ ಇತರರ ಕಾಮಕ್ಕೆ ಗುರಿಯಾಗುತ್ತಾಳೆ' ಎಂದು ಹೇಳಿದ್ದಾರೆ.

ಹಿಜಾಬ್ ಧರಿಸಿದರೆ ನಾ ನಾನಾಗಿರಲ್ಲ ಎಂದ ಇರಾನ್‌ನ ಚೆಸ್ ಆಟಗಾರ್ತಿ

ಇರಾನ್‌ನಲ್ಲಿ ಮಳೆ ಬರದೇ ಇರೋದಕ್ಕೂ ಹಿಜಾಬ್‌ ಕಾರಣ ಎಂದ ಇರಾನ್: ಕಳೆದ ತಿಂಗಳು, ಇರಾನ್ ಧರ್ಮಗುರು ಮುಹಮ್ಮದ್ ನಬಿ ಮೌಸವಿಫರಾದ್ ಅವರು ಬೇಸಿಗೆಯಲ್ಲಿ ಮಹಿಳೆಯರು ಹಿಜಾಬ್‌ ಇಲ್ಲದೆ ಹೊರಬರುವ ಮೊದಲು ಸರ್ಕಾರವು ಹಿಜಾಬ್ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಕಠಿಣ ಕಾನೂನುಗಳನ್ನು ರೂಪಿಸಬೇಕು. ಎಂದಿದ್ದರು. ಹಿಜಾಬ್ ಧರಿಸದವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗಬಾರದು ಎಂದೂ ಅವರು ಹೇಳಿದ್ದರು. ಇರಾನ್‌ನಲ್ಲಿ ಹಿಜಾಬ್ ಅನ್ನು ಬೆಂಬಲಿಸುವ ಇಂತಹ ವಿಚಿತ್ರ ಹೇಳಿಕೆಗಳ ಪಟ್ಟಿಯೂ ಸಾಕಷ್ಟು ದೊಡ್ಡದಾಗಿದೆ.

ಹಿಜಾಬ್‌ ವಿರೋಧಿ ಪ್ರತಿಭಟನೆ ಎಫೆಕ್ಟ್‌: 5000 ಮಕ್ಕಳ ಮೇಲೆ ವಿಷಾನಿಲ ದಾಳಿ, ಇಸ್ಲಾಮಿಕ್‌ ಸಂಘಟನೆ ಕೃತ್ಯ..!

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಆಪ್ತ ಸಹಾಯಕ ಮೊಹಮ್ಮದ್ ಮೆಹದಿ ಹೊಸೇನಿ, ಮಹಿಳೆಯರು ಹಿಜಾಬ್ ಧರಿಸದೇ ಇರೋದರಿಂದಲೇ ಮಳೆ ಕೊರತೆಗೆ ಕಾರಣವಾಗಿದೆ. ಹಿಜಾಬ್ ಧರಿಸದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.

ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಲ್ಲಿ ಸರ್ಕಾರ ಕೂಡ ಕೆಲ ಕಠಿಣ ಕ್ರಮಕೈಗೊಂಡಿದೆ. ಹಿಜಾಬ್‌ ಧರಿಸದ ಅಪ್ರಾಪ್ತರಿಗೂ ಕೂಡ ಮರಣದಂಡನೆ ಶಿಕ್ಷೆವಿಧಿಸಲಾಗುತ್ತದೆ. 'ದಿ ವಾಷಿಂಗ್ಟನ್ ಪೋಸ್ಟ್' ಪ್ರಕಾರ, ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ 3 ಅಪ್ರಾಪ್ತರನ್ನು ದಂಡಿಸಿದೆ. ಟೆಹ್ರಾನ್‌ನಲ್ಲಿ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದಕ್ಕಾಗಿ ಈ ಮೂವರು ಅಪ್ರಾಪ್ತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರು ಇರಾನ್‌ನ ಬಸಿಜ್ ಅರೆಸೇನಾ ಪಡೆಯ ಅಧಿಕಾರಿಯನ್ನು ಚೂರಿ, ಕಲ್ಲುಗಳು ಮತ್ತು ಬಾಕ್ಸಿಂಗ್ ಕೈಗವಸುಗಳಿಂದ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.