ಹಿಜಾಬ್ ಧರಿಸಿದರೆ ನಾ ನಾನಾಗಿರಲ್ಲ ಎಂದ ಇರಾನ್‌ನ ಚೆಸ್ ಆಟಗಾರ್ತಿ
ಅಂತಾರಾಷ್ಟ್ರೀಯ ಚೆಸ್ ಟೂರ್ನ್‌ಮೆಂಟ್‌ನಲ್ಲಿ ಹಿಜಾಬ್ ಧರಿಸದೇ ಭಾಗಿಯಾಗಿ ಇರಾನ್‌ನಿಂದ ಗಡಿಪಾರಾಗಿರುವ ಅಂತಾರಾಷ್ಟ್ರೀಯ ಚೆಸ್ ಪ್ಲೇಯರ್ ಸಾರಾ ಖದೀಮ್ ಹಿಜಾಬ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಿಜಾಬ್ ಧರಿಸಿದರೆ ನಾನು ನಾನಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಸ್ಪೇನ್: ಅಂತಾರಾಷ್ಟ್ರೀಯ ಚೆಸ್ ಟೂರ್ನ್‌ಮೆಂಟ್‌ನಲ್ಲಿ ಹಿಜಾಬ್ ಧರಿಸದೇ ಭಾಗಿಯಾಗಿ ಇರಾನ್‌ನಿಂದ ಗಡಿಪಾರಾಗಿರುವ ಅಂತಾರಾಷ್ಟ್ರೀಯ ಚೆಸ್ ಪ್ಲೇಯರ್ ಸಾರಾ ಖದೀಮ್ ಹಿಜಾಬ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಿಜಾಬ್ ಧರಿಸಿದರೆ ನಾನು ನಾನಾಗಿರುವುದಿಲ್ಲ ಎಂದು ಹೇಳಿದ್ದಾರೆ. ಇರಾನ್‌ನಿಂದ ಸ್ಪೇನ್‌ಗೆ ಓಡಿ ಹೋಗಿರುವ ಅವರು ಈಗ ಹಿಜಾಬ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಡಿಸೆಂಬರ್‌ನಲ್ಲಿ ಇರಾನ್‌ನ ಚೆಸ್ ಆಟಗಾರ್ತಿ 25 ವರ್ಷದ ಸಾರಾ ಖದೀಮ್(Sara Khadem), ಕಝಾಕಿಸ್ತಾನ್‌ನ (Kazakhstan) ಅಲ್ಮಾಟಿಯಲ್ಲಿ (Almaty)ನಡೆದ ಇಂಟರ್‌ನ್ಯಾಶನಲ್ ಚೆಸ್ ಫೆಡರೇಶನ್ (FIDE) ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿಹಿಜಾಬ್ ಧರಿಸದೇ ಭಾಗವಹಿಸಿದ್ದರು. ಇರಾನ್‌ನ ಸ್ಥಳೀಯ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಸಾರಾ ಅವರ ನಿರ್ಧಾರವನ್ನು ಹಿಜಾಬ್ ವಿರುದ್ಧದ ಹೋರಾಟಕ್ಕೆ ಬೆಂಬಲ ಎಂದು ಇರಾನ್‌ನ ಹಿಜಾಬ್ (hijab)ಹೋರಾಟಗಾರರು ಪರಿಗಣಿಸಿದ್ದರು.
ಕರ್ನಾಟಕ ಬಳಿಕ ಈಗ ಯುಪಿಯಲ್ಲಿ ಹಿಜಾಬ್ ಗಲಾಟೆ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ..!
ಆದರೆ ಅದನ್ನು ಧರಿಸುವುದರಿಂದ ನಾನು ನಾನಾಗಿರಲಾರೆ. ಅದನ್ನು ಧರಿಸಿ ನಾನು ಆರಾಮವಾಗಿ ಇರಲು ಸಾಧ್ಯವಿಲ್ಲ. ಹೀಗಾಗಿ ಆ ಪರಿಸ್ಥಿತಿಯನ್ನು ಕೊನೆಗಾಣಿಸಲು ನಾನು ಬಯಸುತ್ತೇನೆ. ಅಲ್ಲದೇ ನಾನು ಮುಂದೆಂದೂ ಹಿಜಾಬ್ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದು, ಸ್ಪೇನ್‌ಗೆ ಬಂದ ನಂತರ ಇದು ಅವರ ಮೊದಲ ಸಾರ್ವಜನಿಕ ಪ್ರತಿಕ್ರಿಯೆಯಾಗಿದೆ.
ತಮ್ಮ ಈ ಹೇಳಿಕೆಯಿಂದ ಇರಾನ್‌ನಲ್ಲಿರುವ ತನ್ನ ಸಂಬಂಧಿಕರ ಮೇಲೆ ಪ್ರತೀಕಾರ ತೀರಿಸಲಾರರು ಎಂಬ ಭರವಸೆ ನನಗಿದೆ. ಏಕೆಂದರೆ ನಾನ ಕೆಲಸಗಳಿಗೆ ನಾನೇ ಜವಾಬ್ದಾರಿ ಹೊರತು ಬೇರಾರೂ ಅಲ್ಲ. ಈ ನಿರ್ಧಾರ ನನ್ನ ಸ್ವಂತದ್ದಾಗಿದ್ದು, ಇದರ ಬಗ್ಗೆ ವಿವರಣೆ ನೀಡಬೇಕಾದವಳು ನಾನೇ ಆಗಿದ್ದೇನೆ ಎಂದು ಅವರು ಹೇಳಿದ್ದಾರೆ. ತನ್ನ ಮಗನ ಜನನದ ನಂತರ ತಾನು ವಿದೇಶಕ್ಕೆ ತೆರಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.
ನನ್ನ ಪುತ್ರ ಸ್ಯಾಮ್ ಬೀದಿಗಳಲ್ಲಿ ಆರಾಮವಾಗಿ ಓಡಾಡಬೇಕು ಹಾಗೂ ಆತ ಹೊರಗಿರುವ ಬಗ್ಗೆ ನಮಗೆ ಚಿಂತೆಗಳಿರಬಾರದು ಅಂತಹ ವಾತಾವರಣದಲ್ಲಿ ನನ್ನ ಪುತ್ರ ಬೆಳೆಯಬೇಕೆಂದು ನಾನು ಬಯಸಿದೆ. ಹೀಗೆ ಆತನ ಬಗ್ಗೆ ಯೋಚಿಸಿದಾಗ ಸ್ಪೇನ್ ನಮಗೆ ಒಳ್ಳೆಯ ಸ್ಥಳ ಎನಿಸಿತು ಎಂದು ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ನಾನು ಚೆಸ್ ಟೂರ್ನ್‌ಮೆಂಟ್‌ನಲ್ಲಿ (chess tournaments) ಇರಾನ್ (Iran) ಅನ್ನು ಪ್ರತಿನಿಧಿಸುವುದನ್ನು ಮುಂದುವರಿಸಲು ಬಯಸುತ್ತೇನೆ. ಅಲ್ಲದೇ ಚೆಸ್ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಆನ್‌ಲೈನ್ ಸ್ಟ್ರೀಮರ್ ಆಗಲು ಬಯಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ವರ್ಷಗಳಿಂದಲೂ ಈ ಕಲ್ಪನೆಯನ್ನು ಹೊಂದಿದ್ದೆ ಆದರೆ ಇರಾನ್‌ಗೆ ಹಬ್ಬಿದ ಹಿಜಾಬ್ ಮುಸುಕಿನಿಂದ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಖಾದಿಮ್ ಹೇಳಿಕೊಂಡಿದ್ದಾರೆ.
Vijayapura: ಹಿಜಾಬ್ ಧರಿಸಿಯೇ ಯೋಗ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು
ಸರಸದತ್ ಖಡೇಮಲಶರೀಃ ಎಂದು ಕೂಡ ಪರಿಚಿತರಾಗಿರುವ ಸಾರಾ ಖದೀಮ್, ಅವರು ಜನವರಿ ಆರಂಭದಲ್ಲಿ ತನ್ನ ಪತಿ ಹಾಗೂ ಸಿನಿಮಾ ನಿರ್ದೇಶಕ ಅರ್ದೇಶಿರ್ ಅಹ್ಮದಿ ಹಾಗೂ ತನ್ನ 10 ತಿಂಗಳ ಪುತ್ರ ಸ್ಯಾಮ್ ಜೊತೆ ದೇಶ ತೊರೆದಿದ್ದರು. ಇವರು ಸ್ಪೇನ್‌ನ ಸ್ಪ್ಯಾನಿಸ್ ದಿನಪತ್ರಿಕೆ ಇಐ ಪಾಯಿಸ್‌ಗೆ ನೀಡಿದ ಸಂದರ್ಶನ ಇಂದು ಪ್ರಸಾರವಾಗಿದೆ.
ಭದ್ರತಾ ಕಾರಣಕ್ಕೆ ಈ ಸಂದರ್ಶನವನ್ನು ಗೌಪ್ಯವಾದ ಸ್ಥಳದಲ್ಲಿ ಮಾಡಲಾಗಿದೆ ಎಂದು ಪತ್ರಿಕೆ ಹೇಳಿದೆ. ಇರಾನ್ ಕಾನೂನಿನ ಪ್ರಕಾರ, ಇರಾನಿನ ಮಹಿಳಾ ಅಥ್ಲೀಟ್‌ಗಳು, ಮುಖ್ಯವಾಗಿ ತಮ್ಮ ದೇಶವನ್ನು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರತಿನಿಧಿಸುವಾಗ ತಮ್ಮ ತಲೆಯನ್ನು ಮುಚ್ಚುವ ಮೂಲಕ, ಇಸ್ಲಾಮಿಕ್ ರಿಪಬ್ಲಿಕ್ ಮಹಿಳೆಯರಿಗೆ ರೂಪಿಸಿರುವ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗೆ ಬದ್ಧರಾಗಿರಬೇಕು.
ಇರಾನ್‌ನಲ್ಲಿ ಹಿಜಾಬ್ ಸರಿಯಾಗಿ ಧರಿಸಿಲ್ಲವೆಂದು ಬಂಧಿತರಾಗಿದ್ದ 22 ವರ್ಷದ ಮಹ್ಸಾ ಅಮಿನಿ ಅವರು ಪೊಲೀಸ್ ಕಸ್ಟಡಿಯಲ್ಲೇ (Police Custody) ಸಾವನ್ನಪ್ಪಿದ ನಂತರ ಅಲ್ಲಿ ಹಿಜಾಬ್ ಹೋರಾಟ ತೀವ್ರಗೊಂಡಿತ್ತು. ಅಮಿನಿಯನ್ನು ತೆಹ್ರಾನ್‌ನ ನೈತಿಕ ಪೊಲೀಸರು ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಿದ್ದರು.