ಅಮೆರಿಕದ ಎನ್‌ವಿಡಿಯಾ ಸಿಇಒ ಮತ್ತು ಸಹ-ಸ್ಥಾಪಕ ಜೇನ್ಸನ್‌ ಹುವಾಂಗ್ ಚೀನಾ ಗೂಢಾಚಾರಿಣಿ ಜೊತೆಗೆ ಸಂಬಂಧ ಹೊಂದಿರುವ ಸುದ್ದಿ ಹೊರಬರುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಂಪೆನಿಯ ಉತ್ತರದಾಯಿತ್ವಕ್ಕೆ ಈಗ ಭಾರತೀಯ ಮೂಲದ ಆರತಿ ಶಾ ಹೆಸರು ಮುನ್ನಲೆಗ ಬಂದಿದೆ.

ಜಗತ್ತಿನ ಅತ್ಯಂತ ಪ್ರಮುಖ ಮತ್ತು ಮುಂಚೂಣಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಗ್ರಾಫಿಕ್ಸ್ ಚಿಪ್ ಉತ್ಪಾದನಾ ಕಂಪನಿಯಾಗಿದ ಅಮೆರಿಕದ ಎನ್‌ವಿಡಿಯಾ ಸಿಇಒ ಮತ್ತು ಸಹ-ಸ್ಥಾಪಕ ಜೇನ್ಸನ್‌ ಹುವಾಂಗ್ ಅವರನ್ನು ಚೀನಾದ ಗೂಢಚಾರಿಣಿ ಎಂದು ಶಂಕಿಸಲಾಗಿರುವ ಸಿಂಗಾಪುರ ಮೂಲದ ಮೆಗಾಸ್ಪೀಡ್‌ ಕಂಪನಿಯ ಆಲಿಸ್ ಹುವಾಂಗ್ ಎಂಬಾಕೆ ಜತೆ ಅಕ್ರಮ ಸಂಬಂಧ ಬೆಳಕಿಗೆ ಬಂದ ಬೆನ್ನಲ್ಲೇ ಎನ್‌ವಿಡಿಯಾದದಲ್ಲಿನ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷೆ ಮತ್ತು ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ.

ಇದರ ಜೊತೆಗೆ ದೀರ್ಘಕಾಲದಿಂದ ಮಂಡಳಿಯ ಸದಸ್ಯ ಹಾರ್ವೆ ಸಿ. ಜೋನ್ಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜೇನ್ಸನ್ ರಾಜೀನಾಮೆ ಬಳಿಕ ಎನ್‌ವಿಡಿಯಾ ಕಾರ್ಪ್ ನಿರ್ದೇಶಕರ ಮಂಡಳಿ ಸಭೆ ಮಾಡಲಾಯಿತು. ಕಂಪನಿಯು ಈಗ ಶಾಶ್ವತ ಉತ್ತರಾಧಿಕಾರಿ ನೇಮಕಕ್ಕೆ ಸೂಕ್ತ ಯಾರೆಂಬ ಹುಡುಕಾಟದಲ್ಲಿದೆ. ಈ ನಡುವೆ ಈಗ 2020 ರಲ್ಲಿ ಎನ್ವಿಡಿಯಾ ಮಂಡಳಿಗೆ ಸೇರಿದ ಭಾರತೀಯ ಮೂಲದ ಕಾರ್ಯನಿರ್ವಾಹಕಿ ಆರತಿ ಶಾ ಕೂಡ ಇದ್ದಾರೆ. ಶಾ ಜೊತೆಗೆ ಇತರ ಮಂಡಳಿಯ ಸದಸ್ಯರೂ ಕೂಡ ಇದ್ದಾರೆ.

ಯಾರು ಈ ಆರತಿ ಶಾ?

ಆರತಿ ಶಾ US ಔಷಧ ಕಂಪನಿ ಎಲಿ ಲಿಲ್ಲಿ ಅಂಡ್ ಕಂಪನಿಯಲ್ಲಿ 27 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2021 ರವರೆಗೆ ಈ ಕಂಪೆನಿಯ ಭಾಗವಾಗಿದ್ದರು. ಇತ್ತೀಚೆಗೆ ಹಿರಿಯ ಉಪಾಧ್ಯಕ್ಷೆ, ಮುಖ್ಯ ಮಾಹಿತಿ ಮತ್ತು ಡಿಜಿಟಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆರತಿ ಅವರು ಇಷ್ಟು ಮಾತ್ರವಲ್ಲದೆ ಹಿರಿಯ ಸಂಖ್ಯಾಶಾಸ್ತ್ರಜ್ಞೆ ಮತ್ತು ಸಂಶೋಧನಾ ವಿಜ್ಞಾನಿಯೂ ಆಗಿದ್ದಾರೆ. ಬಯೋಮೆಟ್ರಿಕ್ಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಯೋ-ಮೆಡಿಸಿನ್ಸ್ ವ್ಯವಹಾರ ಘಟಕದಲ್ಲಿ ಜಾಗತಿಕ ಬ್ರಾಂಡ್ ಅಭಿವೃದ್ಧಿ ಲೀಡರ್ ಆಗಿದ್ದರು.

2020 ರಲ್ಲಿ ಎನ್‌ವಿಡಿಯಾ ಮಂಡಳಿಗೆ ಸೇರ್ಪಡೆಯಾದರು. ಅದೇ ವರ್ಷ ಯುಎಸ್ ಹಣಕಾಸು ಸೇವೆಗಳ ಕಂಪನಿಯಾದ ನಾರ್ತ್‌ವೆಸ್ಟರ್ನ್ ಮ್ಯೂಚುಯಲ್‌ನ ಮಂಡಳಿಯ ಸದಸ್ಯರೂ ಆದರು, ನಂತರ ಸೇಂಟ್ ಜೂಡ್ ಚಿಲ್ಡ್ರನ್ಸ್ ರಿಸರ್ಚ್ ಹಾಸ್ಪಿಟಲ್ ಮತ್ತು ಅಮೇರಿಕನ್ ಲೆಬನೀಸ್ ಸಿರಿಯನ್ ಅಸೋಸಿಯೇಟೆಡ್ ಚಾರಿಟೀಸ್ ಮಂಡಳಿಯಲ್ಲಿ ಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶ್ರೀಮದ್ ರಾಜ್‌ಚಂದ್ರ ಮಿಷನ್ ಧರಂಪುರ USA ಯ ಕಾರ್ಯದರ್ಶಿ ಮತ್ತು ಟ್ರಸ್ಟಿಯೂ ಹೌದು. ಪ್ರಸ್ತುತ ಎನ್‌ವಿಡಿಯಾದಲ್ಲಿ ಆಡಿಟ್ ಮತ್ತು ಪರಿಹಾರ ಸಮಿತಿಗಳ ಸದಸ್ಯೆಯಾಗಿದ್ದಾರೆ.

ಭಾರತದಲ್ಲಿ ಹುಟ್ಟಿರುವ ಶಾ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹಾಗೂ ಸಂಖ್ಯಾಶಾಸ್ತ್ರದಲ್ಲಿ ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಅಧ್ಯಯನ ಕೂಡ ಮಾಡಿದ್ದಾರೆ.

ಈಗ ಜೆನ್ಸನ್‌ ಬಳಿಕ ಕಂಪನಿಯನ್ನು ನೋಡಿಕೊಳ್ಳುವ ರೇಸ್ ನಲ್ಲಿ ಆರತಿ ಶಾ ಜೊತೆಗೆ ಇರುವ ಇತರ ನಿರ್ದೇಶಕರೆಂದರೆ ಹಾರ್ವೆ ಸಿ. ಜೋನ್ಸ್, ಸ್ಟೀಫನ್ ಸಿ. ನೀಲ್, ಟೆಂಚ್ ಕಾಕ್ಸ್, ಜಾನ್ ಒ. ಡಬಿರಿ, ಡಾನ್ ಹಡ್ಸನ್ ,ಮೆಲಿಸ್ಸಾ ಬಿ. ಲೋರಾ, ಎ. ಬ್ರೂಕ್ ಸೀವೆಲ್, ಮಾರ್ಕ್ ಎ. ಸ್ಟೀವನ್ಸ್, ಸುಜೇನ್ ನೋರಾ ಜಾನ್ಸನ್. ಆರತಿ ಶಾ ಎನ್‌ವಿಡಿಯಾ ಸಂಸ್ಥೆ ಸಿಇಒ ಆಗುತ್ತಾರೋ ಇಲ್ಲವೂ ಕಾದು ನೋಡಬೇಕಿದೆ.

ಕರಗಿದ ಜೆನ್ಸನ್‌ ಆಸ್ತಿ ಮೌಲ್ಯ

33 ವರ್ಷಗಳ ಹಿಂದೆ ತಾವೇ ಸ್ಥಾಪಿಸಿದ್ದ ಕಂಪನಿಗೆ ಜೆನ್ಸನ್‌ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಚಿಪ್‌ ತಯಾರಿಕಾ ಕಂಪನಿಯಾದ ಎನ್‌ವಿಡಿಯಾದ ಷೇರು ಅಮೆರಿಕದ ಷೇರುಪೇಟೆಯಲ್ಲಿ ಶೇ.14ರಷ್ಟು ಭಾರೀ ಕುಸಿತ ಕಂಡಿದೆ. ಜೆನ್ಸನ್‌ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ ಕಂಪನಿ ಷೇರುಮಾರುಕಟ್ಟೆ ಮೌಲ್ಯ 50 ಲಕ್ಷ ಕೋಟಿಗೂ ಹೆಚ್ಚಿನ ಪ್ರಮಾಣದಲ್ಲಿ ಕರಗಿದೆ.

ಎನ್‌ವಿಡಿಯಾ ಮಹತ್ವ:

ಎನ್‌ವಿಡಿಯಾ ಕಂಪನಿಯು, ಎಐ ಮತ್ತು ಡೇಟಾ ಸೆಂಟರ್‌ಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಚಿಪ್‌ಗಳ ವಿಶ್ವದ ಅತಿದೊಡ್ಡ ಪೂರೈಕೆದಾರನಾಗಿದ್ದು ಮಾರುಕಟ್ಟೆಯಲ್ಲಿ ಶೇ.80ಕ್ಕೂ ಹೆಚ್ಚಿನ ಏಕಸ್ವಾಮ್ಯ ಹೊಂದಿದೆ. ಓಪನ್‌ ಎಐ, ಆ್ಯಂಥ್ರೋಪಿಕ್‌ನಂತಹ ಪ್ರಮುಖ ಎಐ ಸಂಸ್ಥೆಗಳಿಂದ ಹಿಡಿದು ಭಾರತದ ರಿಲಯನ್ಸ್ ಮತ್ತು ಸರ್ವಂನಂತಹ ಕಂಪನಿಗಳ ಎಐ ಮೂಲಸೌಕರ್ಯಗಳವರೆಗೆ ಇಡೀ ಜಾಗತಿಕ ಎಐ ವ್ಯವಸ್ಥೆಯೇ ಎನ್‌ವಿಡಿಯಾ ಚಿಪ್‌ಗಳ ಮೇಲೆ ಅವಲಂಬಿತವಾಗಿದೆ.