ಚೀನಾ ಗೂಢಚಾರಿಣಿ ಜೊತೆ ಅಕ್ರಮ ಸಂಬಂಧಕ್ಕೆ ತಲೆದಂಡವಾಗಿದೆ. Nvidia ಸಿಇಒ ಜೆನ್ಸನ್ ಹುವಾಂಗ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪರಿಣಾಮ ಷೇರುಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ.

ವಾಶಿಂಗ್ಟನ್ (ನ.12) ವಿಶ್ವದ ಅತೀ ದೊಡ್ಡ ಎಐ ಚಿಪ್ ಕಂಪನಿ ಎನ್ವಿಡಿಯಾ (Nvidia)ದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಚೀನಾ ಗೂಢಚಾರಣಿ ಜೊತೆ ಅಕ್ರಮ ಸಂಬಂಧ ಹೊಂದಿದ ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಳೆದ 22 ವರ್ಷಗಳಿಂದ ಎನ್ವಿಡಿಯಾ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಜೆನ್ಸನ್ ಹುವಾಂಗ್ ಮೇಲೆ ಚೀನಾ ಗೂಢಚಾರಣಿ ಜೊತೆ ಅಕ್ರಮ ಸಂಬಂಧದ ಗಂಭೀರ ಆರೋಪ ಕೇಳಿಬಂದಿತ್ತು. ಅಕ್ರಮ ಸಂಬಂಧವನ್ನು ಹುವಾಂಗ್ ಒಪ್ಪಿಕೊಂಡಿದ್ದಾರೆ. ಇದು ಕಂಪನಿಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಇಒ ಸ್ಥಾನಕ್ಕೆ ಹುವಾಂಗ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಎನ್ವಿಡಿಯಾ ಷೇರುಗಳು ಶೇಕಡಾ 12ರಷ್ಟು ಕುಸಿತ ಕಂಡಿದೆ.

ಟೆಕ್ ಲೋಕಕ್ಕೆ ಆಘಾತ

ಅಕ್ರಮ ಸಂಬಂಧ, ಚೀನಾ ಗೂಢಚಾರಣಿ ಸೇರಿದಂತೆ ಗಂಭೀರ ಆರೋಪಗಳು ಎನ್ವಿಡಿಯಾ ಕಂಪನಿಗೆ ತೀವ್ರ ಆಘಾತ ನೀಡಿತ್ತು. ಇದೀಗ ಎನ್ವಿಡಿಯಾ ಆಡಳಿತ ಮಂಡಳಿ ತುರ್ತು ಪ್ರಕಟಣೆ ಹೊರಡಿಸಿದೆ. ಜೆನ್ಸನ್ ಹುವಾಂಗ್ ಅವರು ಕಂಪನಿಯ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ಆಡಳಿತ ಮಂಡಳಿಯ ಸದಸ್ಯ ಸ್ಥಾನಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದೆ. 1993ರಲ್ಲಿ ಎನ್ವಿಡಿಯಾ ಸ್ಥಾಪನೆಯಾದಾಗಿನಿಂದ ಸತತ 33 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದ ಹುವಾಂಗ್ ನಿರ್ಗಮನ ಟೆಕ್ ಲೋಕಕ್ಕೆ ದೊಡ್ಡ ಆಘಾತ ನೀಡಿದೆ.

ಕೊಲೆಟ್ ಕ್ರೆಸ್ ನೇಮಕ

ಜೆನ್ಸನ್ ಹುವಾಂಗ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎನ್ವಿಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮತ್ತು ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ (Colette Kress)‌ಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕೊಲೆಟ್ ಕ್ರೇಸ್‌ ಅವರನ್ನು ಮಧ್ಯಂತರ ಸಿಇಒ (Interim CEO) ಆಗಿ ನೇಮಿಸಲಾಗಿದೆ. ಕಂಪನಿಗೆ ಕಾಯಂ ಸಿಇಒ ನೇಮಕವಾಗುವವರೆಗೂ ಕೊಲೆಟ್ ಕ್ರೆಸ್ ಅವರು ಸಿಇಒ ಮತ್ತು ಸಿಎಫ್‌ಒ ಎರಡೂ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.

ಎನ್ವಿಡಿಯಾ ಕಂಪನಿಯ ಸಿಇಒ ಹುದ್ದೆಗೆ ಹುಡುಕಾಟ

ಕಂಪನಿಯು ಈಗಾಗಲೇ ನೂತನ ಕಾಯಂ ಸಿಇಒ ಆಯ್ಕೆಗಾಗಿ ಹುಡುಕಾಟ ಆರಂಭಿಸಿದ್ದು, ಸಂಸ್ಥೆಯ ಒಳಗಿನ ಹಾಗೂ ಹೊರಗಿನ ಅಭ್ಯರ್ಥಿಗಳನ್ನು ಪರಿಗಣಿಸುವುದಾಗಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದೇ ವೇಳೆ, ಹಾರ್ವೆ ಸಿ. ಜೋನ್ಸ್ (Harvey C. Jones) ಕಂಪನಿಯ ಆಡಳಿತ ಮಂಡಳಿಯ ಮೊಟ್ಟಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಂಬರುವ ನವೆಂಬರ್ 17ರಂದು ಕಂಪನಿಯ ಮೂರನೇ ತ್ರೈಮಾಸಿಕ ಫಲಿತಾಂಶ (Q3 Results) ಪ್ರಕಟವಾಗಲಿದೆ.

ಅಕ್ರಮ ಸಂಬಂಧ ವಿವಾದ

ಚೀನಾ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದಾಳೆಂದು ಅಮೆರಿಕದ ಅಧಿಕಾರಿಗಳು ಶಂಕಿಸಿರುವ ಚೀನಾದ ಮಹಿಳಾ ಉದ್ಯಮಿಯೊಬ್ಬರ ಜೊತೆ ತಮಗೆ ಸಂಬಂಧವಿತ್ತು ಎಂದು ಹುವಾಂಗ್ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಮಂಡಳಿಯಿಂದ ಒತ್ತಡ ಹೆಚ್ಚಾಗಿತ್ತು. ಜಾಗತಿಕವಾಗಿ ತೀವ್ರ ಎನ್ವಿಡಿಯಾ ತೀವ್ರ ಹಿನ್ನಡೆ ಅನುಭವಿಸಿತ್ತು. ಷೇರುಗಳು ಕುಸಿತ ಕಂಡಿತ್ತು. ಕಂಪನಿ ಲಾಭ ಕುಸಿತವಾಗಿತ್ತು. ಇದರ ಬೆನ್ನಲ್ಲೇ ಹುವಾಂಗ್ ರಾಜೀನಾಮೆ ಹಲವು ಆರೋಪಗಳು ಸತ್ಯಕ್ಕೆ ಹತ್ತಿರವಾಗಿದೆ ಅನ್ನೋ ಮಾತುಗಳಿಗೆ ಕಾರಣವಾಗಿದೆ.