ಪಾಕಿಸ್ತಾನದ ಯುವಕನೊಬ್ಬ ಭಾರತದ ಕ್ಷಿಪಣಿ ದಾಳಿಯನ್ನು ವಿಡಿಯೋದಲ್ಲಿ ದೃಢಪಡಿಸಿದ್ದಾನೆ. ಬಹವಾಲ್‌ಪುರದ ಉಗ್ರರ ಶಿಬಿರದ ಮೇಲೆ ನಡೆದ ದಾಳಿಯ ಬಗ್ಗೆ ಪ್ರಶ್ನಿಸಿದ್ದಾನೆ. ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ವರದಿಯಾಗಿದೆ.
ಇಸ್ಲಾಮಾಬಾದ್: ಭಾರತ ಕ್ಷಿಪಣಿ ದಾಳಿಯನ್ನು ಪಾಕಿಸ್ತಾನದ ಪ್ರಜೆಗಳು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ. ಭಾರತ ಕ್ಷಿಪಣಿ ದಾಳಿ ನಡೆಸುತ್ತಿದ್ರೂ ನಮ್ಮ ಪಾಕಿಸ್ತಾನದ ಸೈನಿಕರು ಎಲ್ಲಿ ಮಲಗಿದ್ದಾರೆ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ. ಈ ಪಾಕ್ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹವಾಲ್‌ಪುರದ ಉಗ್ರರ ಶಿಬಿರದ ಮೇಲೆ ನಾಲ್ಕು ಕ್ಷಿಪಣಿ ದಾಳಿ ನಡೆದಿರೋದನ್ನು ಈ ಯುವಕ ದೃಢಪಡಿಸಿದ್ದಾನೆ. ಮಸೂದ್ ಎಂಬಾತ ಬಹವಾಲ್‌ಪುರದಲ್ಲಿ ಮದರಸಾ ಮಾಡಿಕೊಂಡಿದ್ದು, ಇಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು. ಹಾಗಾಗಿ ಈ ಮದರಸಾವನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದೆ.
ಒಟ್ಟು 9 ಉಗ್ರರ ತಾಣಗಳ ಮೇಲೆ ಭಾರತದ ಮೂರು ಸೇನೆಗಳು ಜೊತೆಯಾಗಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಮಾರು 80ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಉಗ್ರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮತ್ತು ವಿಡಿಯೋ ಹೊರ ಬಂದಿದೆ. ಭಾರತದ ದಾಳಿಯನ್ನು ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ದೃಢಪಡಿಸಿದ್ದು, ಸಾವಿನ ಸಂಖ್ಯೆ ಎರಡಂಕ ದಾಟಿಲ್ಲ ಎಂದು ಸುಳ್ಳು ಹೇಳಿದ್ದಾರೆ.
ಬಹವಾಲ್‌ಪುರದಲ್ಲಿ ಸುಮಾರು 18 ಎಕರೆ ಪ್ರದೇಶದಲ್ಲಿ ಮಸೀದಿ ಮತ್ತು ಮದರಾಸ ಮಾಡಿಕೊಂಡು ಉಗ್ರರಿಗೆ ತರಬೇತಿ ಮಾಡಲಾಗುತ್ತಿತ್ತು. ಈ ಬಹವಾಲ್‌ಪುರದಲ್ಲಿಯೇ ಸುಮಾರು 50 ಉಗ್ರರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಪಾಕಿಸ್ತಾನದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿಕೊಂಡಿದೆ. ಮತ್ತೊಂದೆಡೆ ಭಾರತ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗದುಕೊಂಡಿದ್ದಾರೆ. ಜಮ್ಮು, ಶ್ರೀನಗರ ಸೇರಿದಂತೆ 9 ವಿಮಾನ ನಿಲ್ದಾಣಗಳಿಂದ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಹೇಳಿಕೊಂಡಿದೆ.


