Imran Khan: ನವಾಜ್ ರೀತಿ ಓಡಿಹೋಗಲ್ಲ, ಐಎಸ್‌ಐ ಜಾತಕ ಬಯಲು ಮಾಡ್ತೀನಿ ಎಂದ ಪಾಕ್ ಮಾಜಿ ಪ್ರಧಾನಿ!
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಮ್ರಾನ್ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದು, ಐಎಸ್‌ಐಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಲಾಹೋರ್ (ಅ. 28): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿಯನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದು, ಐಎಸ್‌ಐಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ನಾನು ಐಎಸ್ಐ ಜಾತಕ ಬಯಲಿಗೆಳೆಯುತ್ತೇನೆ ಎಂದು ಇಮ್ರಾನ್ ಹೇಳಿದ್ದಾರೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸುತ್ತಿಲ್ಲ. ಇಮ್ರಾನ್ ಸೇನಾ ಮುಖ್ಯಸ್ಥ ಬಜ್ವಾ ಅವರನ್ನು ಮೀರ್ ಜಾಫರ್ ಹಾಗೂ ದೇಶದ್ರೋಹಿ ಎಂದು ಸಂಬೋಧಿಸಿದ್ದಾರೆ. ನಾನು ನವಾಜ್ ಷರೀಫ್ ರೀತಿ ಓಡಿಹೋಗಿಲ್ಲ. ಓಡಿಹೋಗೋದು ಇಲ್ಲ ಎಂದು ಇಮ್ರಾನ್ ಹೇಳಿದ್ದಾರೆ. ನಾನು ದೇಶದಲ್ಲಿದ್ದೇನೆ ಮತ್ತು ಈ ನೆಲದ ಕಾನೂನನ್ನು ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಪಕ್ಷದ ಕಾರ್ಯಕರ್ತರು ಲಾಹೋರ್‌ನ ಲಿಬರ್ಟಿ ಚೌಕ್‌ನಿಂದ ಇಸ್ಲಾಮಾಬಾದ್‌ಗೆ 'ಹಕ್ ಕೀ ಆಜಾದಿ ಲಾಂಗ್ ಮಾರ್ಚ್' ಆರಂಭಿಸಿದ್ದು, ಈ ಕಾರ್ಯಕ್ರಮದ ವೇಳೆ ಇಮ್ರಾನ್ ಖಾನ್ ಈ ಮಾತು ಹೆಳಿದ್ದಾರೆ.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಡಿಜಿ ಐಎಸ್ಐ, ನಿಮ್ಮ ಕಿವಿಗಳನ್ನು ತೆರೆಯಿರಿ ಮತ್ತು ಆಲಿಸಿ, ನನಗೆ ಬಹಳಷ್ಟು ತಿಳಿದಿದೆ ಆದರೆ ನಾನು ನನ್ನ ದೇಶಕ್ಕೆ ಹಾನಿ ಮಾಡಲು ಬಯಸುವುದಿಲ್ಲ ಎಂಬ ಕಾರಣದಿಂದ ಮೌನವಾಗಿದ್ದೇನೆ. ನಾನು ಉತ್ತಮವಾದ ರಚನಾತ್ಮಕ ಟೀಕೆಗಳನ್ನು ಮಾಡುತ್ತೇನೆ, ಇಲ್ಲದಿದ್ದರೆ ನಾನು ತುಂಬಾ ವಿಚಾರಗಳನ್ನು ಹೇಳಬಲ್ಲೆ. ಆ ಶಕ್ತಿ ನನಗಿದೆ ಎಂದು ಎಚ್ಚರಿಸಿದ್ದಾರೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಐಎಸ್‌ಐ ಮುಖ್ಯಸ್ಥ ನದೀಮ್ ಅಂಜುಮ್ ನಡುವೆ ಬಹಿರಂಗ ವಿವಾದವಿದೆ. ಇಮ್ರಾನ್ ಬಾಜ್ವಾ ಅವರನ್ನು ಮೀರ್ ಜಾಫರ್ ಮತ್ತು ದೇಶದ್ರೋಹಿ ಎಂದು ನಿರಂತರವಾಗಿ ಕರೆಯುತ್ತಿದ್ದಾರೆ. ಇಮ್ರಾನ್ ಖಾನ್ ದಾಳಿಗೆ ಪ್ರತಿಕ್ರಿಯಿಸಲು ಐಎಸ್‌ಐ ಲೆಫ್ಟಿನೆಂಟ್ ನದೀಮ್ ಅಂಜುಮ್ ಅವರು ಮಾಧ್ಯಮದ ಮುಂದೆ ಹಾಜರಾಗಬೇಕಾಯಿತು. ಇಮ್ರಾನ್ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಐಎಸ್‌ಐ ಮುಖ್ಯಸ್ಥನೊಬ್ಬ ಮುನ್ನೆಲೆಗೆ ಬಂದಿದ್ದಾನೆ. ಐಎಸ್‌ಐ ಮುಖ್ಯಸ್ಥರು ಇಲ್ಲಿಯವರೆಗೂ ಕ್ಯಾಮೆರಾದಿಂದ ದೂರವೇ ಉಳಿಯುತ್ತಿದ್ದರು.
ಅಚ್ಚರಿ ಏನೆಂದರೆ, ಇಲ್ಲಿಯವರೆಗೂ ಯಾವುದೇ ಐಎಸ್‌ಐ ಚೀಫ್‌ನ ಮುಖವನ್ನು ಸಾರ್ವಜನಿಕರು ಈವರೆಗೀ ಕಂಡಿರಲಿಲ್ಲ.ಯಾವುದೇ ಐಎಸ್‌ಐ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿಲ್ಲ. ಕ್ಯಾಮರಾ ಕಣ್ಣಿಗೆ ಕಂಡಿದ್ದೇ ಇಲ್ಲ. ಆದರೆ ನದೀಮ್ ಅಂಜುಮ್ ಮುಂದೆ ಬಂದಿದ್ದಲ್ಲದೆ, ಇಮ್ರಾನ್ ಖಾನ್ ದೊಡ್ಡ ಸುಳ್ಳುಗಾರ ಎಂದು ಕರೆದರು. ಐಎಸ್‌ಐನ ಡಿಜಿ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಲ್ಲರ ಅಚ್ಚರಿಗೆ ಕಾರಣವಾಯಿತು. ಅಲ್ಲಿನ ಮಾಧ್ಯಮಗಳೂ ಕೂಡ ಅಚ್ಚರಿಗೊಂಡಿವೆ.
ಬೆಂಗಳೂರು: ಕಲಾಗ್ರಾಮದಲ್ಲಿ ಪಾಕ್ ಮಾಜಿ ಪ್ರಧಾನಿ 'ಇಮ್ರಾನ್ ಖಾನ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ: ಹಿಂದೂ ಸಂಘಟನೆ ಆಕ್ರೋಶ
ಪಾಕಿಸ್ತಾನದ ರಾಜಕೀಯ ರಂಗ ಇನ್ನಷ್ಟು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗುವುದರಲ್ಲಿ. ಒಂದು ಕಾಲದಲ್ಲಿ ಖಮರ್ ಬಾಜ್ವಾಗೆ ಆಪ್ತರಾಗಿದ್ದ ಇಮ್ರಾನ್ ಖಾನ್, ಈಗ ಅವರನ್ನು ಕಂಡಕಂಡಲ್ಲಿ ಕಿಡಿಕಾರುತ್ತಿದ್ದಾರೆ. ಇನ್ನು ಶಹಬಾಜ್ ಸೇನಾ ಮುಖ್ಯಸ್ಥರ ಪರವಾಗಿ ನಿಂತಿದ್ದಾರೆ. ಶಹಬಾಜ್ ಸರ್ಕಾರದ ಗೃಹ ಮತ್ತು ರಕ್ಷಣಾ ಸಚಿವ, ಇಮ್ರಾನ್ ಖಾನ್ ಮೇಲೆ ಕೋಪಗೊಂಡಿದ್ದಾರೆ. ಮೊದಲ ಬಾರಿಗೆ ಪಾಕಿಸ್ತಾನ ಸೇನೆಯು ರಾಜಕೀಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಕುತೂಹಲಕಾರಿಯಾಗಿದೆ.
Imran Khan Disqualified: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 5 ವರ್ಷ ನಿಷೇಧ!
70 ವರ್ಷದ ಇಮ್ರಾನ್ ಖಾನ್ ಅವರು ನವೆಂಬರ್ 4 ರಂದು ಇಸ್ಲಾಮಾಬಾದ್ ತಲುಪಲು ಯೋಜಿಸಿದ್ದಾರೆ. ಅವರು ತಮ್ಮ ಪಕ್ಷಕ್ಕೆ ಪ್ರತಿಭಟನಾ ಸಮಾವೇಶ ನಡೆಸಲು ಅನುಮತಿ ನೀಡಲು ಸರ್ಕಾರದಿಂದ ಔಪಚಾರಿಕ ಅನುಮತಿಯನ್ನು ಕೋರಿದ್ದಾರೆ. ಅವರ ಪಕ್ಷ ಪ್ರತಿಭಟನೆಗೆ 'ಹಕ್ ಕೀ ಆಜಾದಿ ಮಾರ್ಚ್' ಎಂದು ಹೆಸರಿಸಿದೆ. ಆದರೆ, ಇಮ್ರಾನ್ ಅವರು ಇಸ್ಲಾಮಾಬಾದ್‌ನಲ್ಲಿ ಸಮಾವೇಶವನ್ನು ಕೊನೆಗೊಳಿಸುತ್ತಾರೆಯೇ ಅಥವಾ ಅವರ 2014 ರ ಪ್ರತಿಭಟನೆಯ ರೀತಿಯಲ್ಲಿ ಅದನ್ನು ಧರಣಿಯಾಗಿ ಪರಿವರ್ತಿಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆಗ ಅವರ ಬೆಂಬಲಿಗರು ಸಂಸತ್ ಭವನದ ಮುಂದೆ 126 ದಿನಗಳ ಕಾಲ ಧರಣಿ ನಡೆಸಿದ್ದರು.