ಬೆಂಗಳೂರು: ಕಲಾಗ್ರಾಮದಲ್ಲಿ ಪಾಕ್ ಮಾಜಿ ಪ್ರಧಾನಿ 'ಇಮ್ರಾನ್ ಖಾನ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ: ಹಿಂದೂ ಸಂಘಟನೆ ಆಕ್ರೋಶ
Book on Pakistan former PM Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ.
ಬೆಂಗಳೂರು (ಅ. 27): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಕುರಿತ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇಂದು (ಅ. 27) ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ (Kalagrama) ನಡೆಯಲಿದ್ದು ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಾಹಾಕಿವೆ. ಸುಧಾಕರ ಎಸ್ ಬಿ ಬರೆದಿರುವ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕವನ್ನು ಪ್ರಮಥ ಪ್ರಕಾಶನ ಪ್ರಕಟಿಸುತ್ತಿದೆ. ಕಾರ್ಯಕ್ರಮಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹಿಂದೂಪರ ಸಂಘಟನೆಯ ಮೋಹನ್ ಗೌಡ ಪೊಲೀಸರಿಗೆ ದೂರು ನೀಡಲಿದ್ದಾರೆ.
ಶತ್ರು ದೇಶ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪುಲ್ವಾಮ ದಾಳಿಯ ಮೂಲಕ 40 ಸೈನಿಕರ ಹತ್ಯೆ ಮಾಡಿದ್ದಾರೆ, ಅಂತಹ ಶತ್ರು ದೇಶದ ಮಾಜಿ ಪ್ರಧಾನಿಗಳ ವೈಭವೀಕರಣ ಸಹಿಸಲ್ಲ, ಹೀಗಾಗಿ ಕಾರ್ಯಕ್ರಮಕ್ಕೆ ಕೊಟ್ಟಿರುವ ಅನುಮತಿ ರದ್ದು ಮಾಡಬೇಕೆಂದು ಹಿಂದೂ ಪರ ಸಂಘಟನೆಳು ಆಗ್ರಹಿಸಿವೆ. ಈ ಬೆನ್ನಲ್ಲೇ ಮಧ್ಯಾಹ್ನ 12 ಗಂಟೆಗೆ ಪೊಲೀಸ್ ಠಾಣೆ ಮತ್ತು ಆಡಿಟೋರಿಯಂ ಮುಖ್ಯಸ್ಥರಿಗೆ ಹಿಂದೂ ಸಂಘಟನೆಗಳು ದೂರು ನೀಡಲಿವೆ.
ಕಲಾಗ್ರಾಮದಲ್ಲಿ ಕಾರ್ಯಕ್ರಮ: ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಸಂಜೆ 5:30ಕ್ಕೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Imran Khanಗೆ ರಿಲೀಫ್: ಚುನಾವಣೆ ಸ್ಪರ್ಧೆಗೆ ನಿಷೇಧ ಇಲ್ಲ ಎಂದ ಪಾಕಿಸ್ತಾನ ಕೋರ್ಟ್
ಪುಸ್ತಕ ಬಿಡುಗಡೆಗೆ ವಿರೋಧ: ಪುಸ್ತಕ ಬಿಡುಗಡೆಗೆ ಭಜರಂಗದಳ ಹಾಗೂ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿವೆ. ನಮ್ಮ ದೇಶದಲ್ಲಿ ಸಾಕಷ್ಟು ಪರಿಸರವಾದಿಗಳು, ಜೀವಂತ ದಂತಕತೆಗಳಿವೆ. ಅದರ ಬಗ್ಗೆ ಬರೆಯೋದು ಬಿಟ್ಟು ಪಾಕ್ ದಿವಾಳಿಯನ್ನಾಗಿ ಮಾಡಿದ ಇಮ್ರಾನ್ ಪುಸ್ತಕ ಬರೆಯೋದು ಎಷ್ಟರ ಮಟ್ಟಿಗೆ ಸರಿ? ಇಂತಹ ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸ್ಬೇಕು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಹೀಗಾಗಿ ಇಂದು ಮಲ್ಲತ್ತಹಳ್ಳಿಯ ಕಾರ್ಯಕ್ರಮಕ್ಕೆ ವಿರೋಧಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ. ಪುಸ್ತಕ ಬಹಿಷ್ಕರಿಸುವಂತೆ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ಹಾಗೂ ಭಜರಂಗದಳ ಮನವಿ ಮಾಡವೆ.