ಹಜ್ ಯಾತ್ರೆಗೆ ತೆರಳಲು ಮುಂದಾಗಿರುವ ಭಾರತೀಯ ಮುಸ್ಲಮರಿಗೆ ಸೌದಿ ಅರೆಬಿಯಾ ಶಾಕ್ ನೀಡಿದೆ. ಇದೀಗ ಭಾರತದ ಮುಸ್ಲಿಮರಿಗೆ ಹಜ್ ವೀಸಾ ನಿಷೇಧಿಸಿದೆ. ದಿಢೀರ್ ಈ ನಿರ್ಧಾರ ಕೈಗೊಂಡಿದ್ದೇಕೆ?
ನವದೆಹಲಿ(ಏ.07) ಹಜ್ ಯಾತ್ರೆಗೆ ವಿವಿಧ ದೇಶಗಳಿಂಗ ಸೌದಿ ಅರೆಬಿಯಾ ತಲುಪುತ್ತಿದ್ದಾರೆ. ಇದೀಗ ಭಾರತದಿಂದ ಹಜ್ ಯಾತ್ರೆಗೆ ಮುಂದಾಗಿರುವ ಮುಸ್ಲಿಮರಿಗೆ ಸೌದಿ ಅರೆಬಿಯಾ ಶಾಕ್ ನೀಡಿದೆ. ಹೌದು, ಭಾರತದ ಮುಸ್ಲಿಮರಿಗೆ ಇದೀಗ ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕಾರಣ ಸೌದಿ ಅರೆಬಿಯಾ ಇದೀಗ ಭಾರತೀಯರಿಗೆ ವೀಸಾ ಬ್ಯಾನ್ ಮಾಡಿದೆ. ಕೇವಲ ಉಮ್ರ ವೀಸಾ ಮಾತ್ರವಲ್ಲ, ಬ್ಯೂಸಿನೆಸ್ ಹಾಗೂ ಫ್ಯಾಮಿಲಿಸಿ ವಿಸಿಟ್ ವೀಸಾ ನಿಷೇಧಿಸಿದೆ.
ಜೂನ್‌ವರೆಗೆ ವೀಸಾ
ವಿಶ್ವದ ಮೂಲೆ ಮೂಲೆಯಿಂದ ಮುಸ್ಲಿಮರು ಮೆಕ್ಕಾ ತಲುಪುತ್ತಾರೆ. ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಹಜ್ ಯಾತ್ರೆ ಜೂನ್ ತಿಂಗಳಿಗೆ ಅಂತ್ಯಗೊಳ್ಳಲಿದೆ. ಇದೀಗ ವೀಸಾ ನಿಷೇಧ ಜೂನ್ ತಿಂಗಳವರಗೆ ವಿಸ್ತರಿಸಿದೆ. ಇದರಿಂದ ಈಗ ಯಾರು ಹಜ್ ಯಾತ್ರೆಗೆ ತೆರಳಲು ಮುಂದಾಗಿರುವ ಮುಸ್ಲಿಮರಿಗೆ ವೀಸಾ ನಿರಾಕರಿಸಲಾಗಿದೆ.
ಸೌದಿಯಲ್ಲಿ ಹಜ್ ಯಾತ್ರೆ ನೋಂದಣಿ ಆರಂಭ, ಮಕ್ಕಳಿಗೆ ಈ ಬಾರಿ ನಿಷೇಧ
ಭಾರತ ಸೇರಿ 14 ದೇಶಗಳಿಗೆ ವೀಸಾ ಬ್ಯಾನ್
ಭಾರತ ಮಾತ್ರವಲ್ಲ ಬರೋಬ್ಬರಿ 13 ದೇಶಕ್ಕೆ ವೀಸಾ ಬ್ಯಾನ್ ಮಾಡಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷಿಯಾ, ಇರಾಕ್, ಜೋರ್ಡಾನ್, ಅಲ್ಜೀರಿಯಾ, ಸೂಡಾನ್, ಇಥೋಪಿಯಾ, ತುನಿಶಿಯಾ, ಯೆಮೆನ್ ಹಾಗೂ ಮೊರಕ್ಕೋ ದೇಶಗಳಿಗೆ ಸೌದಿ ಅರೆಬಿಯಾ ವೀಸಾ ಬ್ಯಾನ್ ಮಾಡಿದೆ. ಇದರಿಂದ ಈ 14 ದೇಶಗಳಿಂದ ಯಾರೂ ಉಮ್ರಗಾಗಿ ಮೆಕ್ಕಾ ತೆರಳಲು ಸಾಧ್ಯವಾಗುವುದಿಲ್ಲ.
ಸೌದಿ ಅರೆಬಿಯಾ ನಿಷೇಧ ಹೇರಿದ್ದೇಕೆ?
ಸೌದಿ ಅರೆಬಿಯಾ ಹಜ್ ಯಾತ್ರೆಗೆ ವೀಸಾ ನಿರಾಕರಿಸಲು ಕೆಲ ಪ್ರಮುಖ ಕಾರಣಗಳಿವೆ. ಈ ದೇಶಗಳಿಂದ ಬರುವ ಬಹುತೇಕರು ಸರಿಯಾದ ನೋಂದಣಿ ಮಾಡದೇ ಆಗಮಿಸುತ್ತಿದ್ದಾರೆ. ಯಾವುದೇ ನೋಂದಣಿ ಇಲ್ಲದೆ, ಸೂಕ್ತ ಮಾರ್ಗದರ್ಶನ ಪಡೆಯದೆ ಉಮ್ರ ಮಾಡಲು ಮೆಕ್ಕಾಗಿ ಆಗಮಿಸುತ್ತಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದೆ ಆಗಮಿಸುತ್ತಿದ್ದಾರೆ. ಇದರಿಂದ ಸಮಸ್ಯೆ ಎದುರಾಗುತ್ತಿದೆ. ಅಕ್ರಮವಾಗಿ ನಡೆದುಕೊಳ್ಳತ್ತಿದ್ದಾರೆ. ವೀಸಾ ನಿಷೇಧಿಸಿದ 14 ದೇಶದ ಹಲವರು ಉಮ್ರ ವೀಸಾ, ಫ್ಯಾಮಿಲಿ ವಿಸಿಟ್ ವೀಸಾ, ಬ್ಯೂಸಿನೆಸ್ ವೀಸಾಗೆ ಆಗಮಿಸುತ್ತಾರೆ. ಹಜ್ ಯಾತ್ರೆ ಸಮಯದಲ್ಲಿ ಆಗಮಿಸಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಕಾಲ ಇಲ್ಲೇ ಉಳಿದುಕೊಂಡಿದ್ದಾರೆ. ಅಕ್ರಮವಾಗಿ ಸೌದಿ ಅರೆಬಿಯಾದಲ್ಲಿ ಉಳಿದುಕೊಂಡು ನಿಮಯ ಉಲ್ಲಂಘಿಸಿದ್ದಾರೆ.
ಏಪ್ರಿಲ್ 13ರ ವರೆಗೆ ಕೊನೆಯ ಅವಕಾಶ
ಈಗಾಗಲೇ ಉಮ್ರಾ ವೀಸಾ ಹೊಂದಿರುವ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಬಹುದು. ವೀಸಾ ನಿಷೇಧಿಸಿದ ಭಾರತ ಸೇರಿದಂತೆ 14 ರಾಷ್ಟ್ರಗಳ ಮುಸ್ಲಿಮರು ಈಗಾಗಲೇ ಉಮ್ರಾ ವೀಸಾ ಹೊಂದಿದ್ದರೆ ಏಪ್ರಿಲ್ 13ರ ಒಳಗೆ ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ಸೌದಿ ಅರೆಬಿಯಾ ಹೇಳಿದೆ.
ಪ್ರತಿ ದೇಶದಿಂದ ಇಂತಿಷ್ಟೇ ಯಾತ್ರಿಕರು ಆಗಮಿಸಬೇಕು
ಹಜ್ ಯಾತ್ರೆಗೆ ಪ್ರತಿ ದೇಶದಿಂದ ಇಂತಿಷ್ಟೇ ಮಂದಿ ಆಗಮಿಸಬೇಕು. ಇದು ನಿಯಮ. ಆಯಾ ದೇಶ ಸಂಖ್ಯೆ ನಿಯಂತ್ರಿಸಬೇಕು. ಅವಕಾಶ ಸಿಗದವರು ಅಕ್ರಮವಾಗಿ ಪ್ರವೇಶಿಸುತ್ತಾರೆ. ಇದೇ ಕಾರಣದಿಂದ ಭಾರತ ಸೇರಿದಂೆ 14 ದೇಶಗಳಿಗೆ ವೀಸಾ ನಿರಾಕರಿಸಲಾಗಿದೆ ಎಂದು ಸೌದಿ ಅರೆಬಿಯಾ ಹೇಳಿದೆ.
ಉಮ್ರಾ ವೀಸಾ ಮೂಲಕ ಸೌದಿ ಅರಬಿಯಾಗೆ ಆಗಮಿಸುವ ಹಲವರು ಬಳಿಕ ಇಲ್ಲೇ ವ್ಯವಹಾರ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಕ್ರಮವಾಗಿ ಉಳಿದುಕೊಂಡು ಅಕ್ರಮವಾಗಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ದೇಶದ ವೀಸಾ ನಿಯಮ ಮಾತ್ರವಲ್ಲ ಕಾರ್ಮಿಕ ನಿಯಮವನ್ನೂ ಉಲ್ಲಂಘಿಸುತ್ತಿದೆ. ಹೀಗಾಗಿ ಈ ಬಾರಿ ಸಂಪೂರ್ಣ ನಿಗಾ ವಹಿಸಲು ಹಾಗೂ ನಿಯಂತ್ರಣ ಹೇರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೆಬಿಯಾ ಸ್ಪಷ್ಟಪಡಿಸಿದೆ. ಇದು ಹಲವು ದೇಶಗಳ ಹಜ್ ಯಾತ್ರಿಗಳಿಗೆ ಶಾಕ್ ನೀಡಿದೆ.
ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ಕೊಡಲ್ಲ, ₹90 ಸಾವಿರ ಫುಲ್ ಪೇಮೆಂಟ್ ಮಾಡ್ತೇವೆ: ಸಚಿವ ಜಮೀರ್ ಅಹಮದ್ ಖಾನ್
