ಸೌದಿ ಪ್ರಜೆಗಳು ಮತ್ತು ವಿದೇಶಿ ನಿವಾಸಿಗಳಿಗೆ ದೇಶೀಯ ಹಜ್ ನೋಂದಣಿ ಆರಂಭವಾಗಿದೆ. ‘ನುಸ್ಕ್’ ಆ್ಯಪ್/ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಬಹುದು. ಹಜ್ ಮಾಡದವರಿಗೆ ಆದ್ಯತೆ. ೨೦೨೫ರ ಹಜ್‌ನಲ್ಲಿ ಮಕ್ಕಳಿಗೆ ನಿಷೇಧ. ಜನದಟ್ಟಣೆ, ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವುದು ಇದರ ಉದ್ದೇಶ.
ರಿಯಾದ್: ಈ ವರ್ಷದ ದೇಶೀಯ ಹಜ್ ನೋಂದಣಿ ಆರಂಭವಾಗಿದೆ. ಸೌದಿ ಪ್ರಜೆಗಳು ಮತ್ತು ಅಲ್ಲಿಯ ವಿದೇಶಿ ನಿವಾಸಿಗಳಿಗೆ ನೋಂದಣಿ ಆರಂಭವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ‘ನುಸ್ಕ್’ ಆ್ಯಪ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.
ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ಕೊಡಲ್ಲ, ₹90 ಸಾವಿರ ಫುಲ್ ಪೇಮೆಂಟ್ ಮಾಡ್ತೇವೆ: ಸಚಿವ ಜಮೀರ್ ಅಹಮದ್ ಖಾನ್
ಹಜ್‌ಗೆ ಹೋಗಲು ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಯಲ್ಲಿ ಹೋಗುವವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅರ್ಜಿ ಸ್ವೀಕರಿಸಿದ ನಂತರ, ಪ್ಯಾಕೇಜ್‌ಗಳು ಲಭ್ಯವಾದಾಗ ಬುಕ್ ಮಾಡಲು ಬಯಸುವವರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆ ಹಜ್ ಮಾಡದವರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. 2025ರ ಹಜ್ ಋತುವಿನಲ್ಲಿ ಮಕ್ಕಳು ಯಾತ್ರಿಕರೊಂದಿಗೆ ಹೋಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ.
ಮಾರಾಟವಾಯ್ತು 56 ಲಕ್ಷಕ್ಕೆ 100 ರೂ. ನೋಟ್, 12 ಲಕ್ಷಕ್ಕೆ 10 ರೂ. ನೋಟ್ : ಯಾಕಿಷ್ಟು ಬೆಲೆ?
ಪ್ರತಿ ವರ್ಷ ಸಂಭವಿಸುವ ತೀವ್ರ ಜನದಟ್ಟಣೆಯಿಂದ ಉಂಟಾಗುವ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ಗುರಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. "ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ತೀರ್ಥಯಾತ್ರೆಯ ಸಮಯದಲ್ಲಿ ಯಾತ್ರಿಕರಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಸಚಿವಾಲಯ ತಿಳಿಸಿದೆ. ಈ ವರ್ಷವೂ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಮೊದಲ ಆದ್ಯತೆ ಪ್ರಪ್ರಥಮ ಬಾರಿ ಯಾತ್ರೆ ಮಾಡುತ್ತಿರುವವರಿಗೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
