Asianet Suvarna News Asianet Suvarna News

ಟಿವಿ ನೇರ ಪ್ರಸಾರದ ನಡುವೆ ನುಗ್ಗಿದ ಉಗ್ರರ ಗುಂಪು, ಇಕ್ವೇಡಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ!

ನೇರಪ್ರಸಾರ ನಡುವೆ ನೇರವಾಗಿ ಗನ್ , ಬಾಂಬ್ ಹಿಡಿದ ಉಗ್ರರು ಸ್ಟುಡಿಯೋಗೆ ನುಗಿ ಸಿಬ್ಬಂದಿಗಳು, ನಿರೂಪಕ ಸೇರಿದಂತೆ ಎಲ್ಲರನ್ನೂ ಒತ್ತೆಯಾಳಾಗಿ ಅಪಹರಿಸದ ಘಟನೆ ಈಕ್ವೇಡಾರ್‌ನಲ್ಲಿ ನಡೆದಿದೆ. ಶೂಟ್ ಮಾಡಬೇಡಿ ಪ್ಲೀಸ್ ಎಂದು ನೇರಪ್ರಸಾರದಲ್ಲೇ ನಿರೂಪಕ ಮನವಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಇದೀಗ ಈಕ್ವೇಡಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
 

Gunman terror Group entered Live broadcast studio taking people as hostages in Ecuador ckm
Author
First Published Jan 10, 2024, 1:14 PM IST

ಈಕ್ವೇಡಾರ್(ಜ.10) ಟಿವಿ ಸ್ಟುಡಿಯೋದಲ್ಲಿ ನೇರಪ್ರಸಾರ ನಡೆಯುತ್ತಿರುವ ನಡುವೆ ಉಗ್ರರ ಗುಂಪು ಗನ್, ಬಾಂಬ್ ಹಿಡಿದು ನುಗ್ಗಿದೆ. ಫೈರಿಂಗ್ ಮಾಡುತ್ತಾ ನುಗ್ಗಿದ ಗುಂಪು, ನಿರೂಪಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗನ್ನು ಒತ್ತೆಯಾಳಾಗಿ ಅಪರಿಸಿದ ಘಟನೆ ಈಕ್ವೇಡಾರ್‌ನಲ್ಲಿ ನಡದಿದೆ. ಈಕ್ವೇಡಾರ್ ಸರ್ಕಾರ ಮಿಲಿಟರಿ ಆಪರೇಶನ್ ಘೋಷಿಸಿದೆ. ಇಷ್ಟೇ ಅಲ್ಲ ಈಕ್ಪೇಡಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಈಕ್ವೇರಾಡ್‌ನಲ್ಲಿ ಆಂತರಿಕ ಶಸ್ತ್ರಾಸ್ತ್ರ ಸಂಘರ್ಷ ಆರಂಭಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಗನ್ ಹಾಗೂ ಬಾಂಬ್ ಹಿಡಿದು ಟಿವಿ ಸ್ಟುಡಿಯೋಗೆ ನುಗ್ಗಿದ ಉಗ್ರರ ಗುಂಪು, ಫೈರಿಂಗ್ ಆರಂಭಿಸಿದೆ. ಈ ವೇಳೆ ನಿರೂಪಕ ಶೂಟ್ ಮಾಡಬೇಕಿ ಪ್ಲೀಸ್ ಎಂದು ಅಂಗಲಾಚುತ್ತಿರುವ ದೃಶ್ಯ ವೈರಲ್ ಆಗಿದೆ. ಎಲ್ಲಾ ಸಿಬ್ಬಂದಿಗಳ ಕೈ ಕಾಲುಗಳನ್ನು ಸ್ಟುಡಿಯೋದಲ್ಲಿದ್ದ ಕೇಬಲ್ ವೈಯರ್ ಮೂಲಕ ಕಟ್ಟಿ ಅಪಹರಿಸಿದ್ದಾರೆ. ಗಯಾಕ್ವಿಲ್ ನಗರದಲ್ಲಿನ ಟಿಸಿ ಟೆಲಿವಿಶನ್ ಕಚೇರಿಯತ್ತ ಆಗಮಿಸಿದ ಉಗ್ರರ ಗುಂಪು ಗುಂಡಿನ ಸುರಿಮಳೆಗೈಯುತ್ತಾ ನೇರವಾಗಿ ಸ್ಟುಡಿಯೋಗೆ ನುಗ್ಗಿದೆ. 

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತು ಅಚ್ಚರಿ ಮೂಡಿಸಿದ್ದ ವೃದ್ಧೆ ಸಾವು: ನನ್ನ ತಾಯಿ ಈ ಬಾರಿ ನಿಜಕ್ಕೂ ಸತ್ತರು ಎಂದ ಮಗ

ಮಹಿಳಾ ಸಿಬ್ಬಂದಿಗಳು ಶೂಟ್ ಮಾಡಬೇಡಿ ಎಂದು ಕಿರುಚಾಡುತ್ತಿರುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೇರ ಪ್ರಸಾರದ ನಡುವೆ ಉಗ್ರರ ಗುಂಪು ಗುಂಡಿನ ದಾಳಿ ನಡೆಸಿ ಸ್ಟುಡಿಯೋಗೆ ನುಗ್ಗಿರುವುದು, ಶೂಟ್ ಮಾಡಬೇಡಿ ಬಿಟ್ಟು ಬಿಡಿ ಎಂದು ಸಿಬ್ಬಂದಿಗಳು, ನಿರೂಪಕ ಅಂಗಲಾಚುತ್ತಿರುವುದು ಈಕ್ವೇಡಾರ್‌ನಲ್ಲಿ ಪ್ರಸಾರವಾಗಿದೆ.

 

 

ಈಕ್ವೇಡಾರ್ ಸರ್ಕಾರ ಮಾದಕ ವಸ್ತುಗಳ ಕಳ್ಳಸಾಗಾಣೆ ಮೇಲೆ ಅತೀ ದೊಡ್ಡ ದಾಳಿ ನಡೆಸಿದೆ. ಇದು 22ಕ್ಕೂ ಹೆಚ್ಚು ಉಗ್ರ ಗುಂಪುಗಳ ಆರ್ಥಿಕತೆ ಮೇಲೆ ತೀವ್ರ ಹೊಡೆತ ನೀಡಿದೆ. ಇದರಿಂದ ಕೆರಳಿರುವ ಉಗ್ರ ಗುಂಪುಗಳು ತಮ್ಮ ಪ್ರಮುಖ ನಾಯಕನನ್ನು ಜೈಲಿನಿಂದ ತಪ್ಪಿಸಿಕೊಳ್ಳಲು ನೆರವಾಗಿದೆ. ಇದೀಗ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. ಮಂಗಳಾವರ ಪೊಲೀಸ್ ಅಧಿಕಾರಿಯನ್ನೇ ಅಪಹರಿಸಲಾಗಿತ್ತು. 

ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!

ಈಕ್ವೇಡಾರ್‌ನಲ್ಲಿ ಶಸ್ತ್ರಾಸ್ತ್ರ ಸಂಘರ್ಷ ಶುರುವಾಗಿದೆ. ಡ್ರಗ್ಸ್ ಗ್ಯಾಂಗ್, ಉಗ್ರರ ಗುಂಪು ಸೇರಿದಂತೆ ಕೆಲ ಉದ್ರಿಕ್ತ ಗುಂಪುಗಳು ಗನ್ ಫೈರಿಂಗ್ ಆರಂಭಿಸಿದೆ. ಇತ್ತ ಸರ್ಕಾರ ಸಂಘರ್ಷ ಹತ್ತಿಕ್ಕಲು ಸೇನೆಗೆ ಆದೇಶ ನೀಡಿದೆ. 
 

Latest Videos
Follow Us:
Download App:
  • android
  • ios