ತೀವ್ರ ನಿಗಾ ಘಟಕದಲ್ಲಿ ಏಳು ದಿನಗಳನ್ನು ಕಳೆದ ನಂತರ ಬೆಲ್ಲಾ ಮೊಂಟೊಯಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಈಕ್ವೆಡಾರ್‌ (ಜೂನ್ 19, 2023) : ಸತ್ತಿದ್ದಾರೆಂದು ಘೋಷಿಸಲಾದ ಉತ್ತರ ಅಮೆರಿಕದ ವೃದ್ಧ ಮಹಿಳೆಯೊಬ್ಬರು ಅಂತ್ಯಕ್ರಿಯೆ ವೇಳೆ ಎದ್ದು ಬಂದ ಘಟನೆ ಒಂದು ವಾರದ ಹಿಂದೆ ನಡೆದಿತ್ತು. 76 ವರ್ಷದ ಬೆಲ್ಲಾ ಮೊಂಟೊಯಾ ಅವರು ಸತ್ತಿದ್ದಾರೆ ಎಂದು ತಪ್ಪಾಗಿ ಘೋಷಿಸಲಾಗಿತ್ತು. ಆದರೆ, ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅವರನ್ನು ಮಲಗಿಸಿದ್ದ ಶವಪೆಟ್ಟಿಗೆಯನ್ನು ಬಡಿದು ಕುಟುಂಬ ಸದಸ್ಯರನ್ನು ಆಶ್ಚರ್ಯಗೊಳಿಸಿದ್ದರು. ಅದರ ನಂತರ ಇವರು ತೀವ್ರ ನಿಗಾ ಘಟಕದಲ್ಲಿದ್ದರು.

ಆದರೆ, ಆಸ್ಪತ್ರೆಯಲ್ಲಿದ್ದರೂ ಒಂದು ವಾರದ ನಂತರ ಇವರು ಮೃತಪಟ್ಟಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ. ತೀವ್ರ ನಿಗಾ ಘಟಕದಲ್ಲಿ ಏಳು ದಿನಗಳನ್ನು ಕಳೆದ ನಂತರ ಬೆಲ್ಲಾ ಮೊಂಟೊಯಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಆಸ್ಪತ್ರೆಯಲ್ಲಿದ್ದಾಗ ಅವರು "ಶಾಶ್ವತ ಕಣ್ಗಾವಲು" ನಲ್ಲಿ ಇದ್ದರು ಎಂದೂ ಹೇಳಿಕೆಯಲ್ಲಿ ಸೇರಿಸಲಾಗಿದೆ. ಇನ್ನು, ಈ ಸಂಬಂಧ ಸ್ಥಳೀಯ ಪತ್ರಿಕೆಯೊಂದಿಗೆ ಮಾತನಾಡಿದ ಅವರ ಮಗ ಗಿಲ್ಬರ್ಟ್ ಬಾರ್ಬೆರಾ, "ಈ ಬಾರಿ ನನ್ನ ತಾಯಿ ಸತ್ತರು, ನನ್ನ ಜೀವನವು ಮೊದಲಿನಂತೆ ಒಂದೇ ರೀತಿ ಇರುವುದಿಲ್ಲ’’ ಎಂದು ಹೇಳಿದರು. 

ಇದನ್ನು ಓದಿ: ಶವಪೆಟ್ಟಿಗೆಯಿಂದ ಎದ್ದು ಕುಳಿತ ಮೃತ ಮಹಿಳೆ : ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸ್ತಿದ್ದವರು ಶಾಕ್

ಬೆಲ್ಲಾ ಮೊಂಟೊಯಾ ಅವರು ಜೂನ್ 16 ರಂದು ನಿಧನರಾದರು ಮತ್ತು ಅವರನ್ನು ಈ ಹಿಂದೆ ಕರೆದೊಯ್ಯಲಾಗಿದ್ದ ಅದೇ ಅಂತ್ಯಕ್ರಿಯೆಯ ಮನೆಗೆ ತೆಗೆದುಕೊಂಡು ಹೋಗಲಾಯಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇನ್ನು, ಈಕೆ ಕ್ಯಾಟಲೆಪ್ಸಿ ಎಂಬ ಸ್ಥಿತಿಯಿಂದ ಬಳಲುತ್ತಿದ್ದರು. ಈ ಸ್ಥಿತಿಯಲ್ಲಿ ವ್ಯಕ್ತಿಯು ಸೀಜರ್‌ ಅನುಭವಿಸುತ್ತಾರೆ, ಪ್ರಜ್ಞೆ ಕಳೆದುಕೊಳ್ಳುತ್ತಾರೆ ಮತ್ತು ಅವರ ದೇಹವು ಗಟ್ಟಿಯಾಗುತ್ತದೆ ಎಂದೂ ತಿಳಿದುಬಂದಿದೆ. 

ಜೂನ್ 9 ರಂದು, ಮೊಂಟೊಯಾ ಅವರು ಮೃತಪಟ್ಟರು ಎಂದು ಘೋಷಿಸಿದ ನಂತರ ಅವರನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಮತ್ತು ಅವರನ್ನು ಅಂತ್ಯಕ್ರಿಯೆಗೆ ಕರೆದೊಯ್ಯಲಾಯಿತು. ಸುಮಾರು 5 ಗಂಟೆಗಳ ಕಾಲ ಶವ ಪೆಟ್ಟಿಗೆಯ ಒಳಗೆ ಇದ್ದ ವೃದ್ಧ ಮಹಿಳೆ, ತನ್ನ ಶವಪೆಟ್ಟಿಗೆಯನ್ನು ಬಡಿದು ತನ್ನ ಸಂಬಂಧಿಕರನ್ನು ದಿಗ್ಭ್ರಮೆಗೊಳಿಸಿದ್ದರು. ಆ ಸಮಯದಲ್ಲಿ ಅವರು ಪ್ರಜ್ಞೆಯನ್ನು ಮರಳಿ ಪಡೆದಿದ್ದರು, ನಂತರ ಏದುಸಿರು ಬಿಡುತ್ತಿರುವುದನ್ನು ಸಂಬಂಧಿಕರು ಕಂಡುಕೊಂಡರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ‘ಕುರ್ಚಿ’ಗಾಗಿ ಕುರ್ಚಿಯಲ್ಲೇ ಕಿತ್ತಾಡಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು: ವಿಡಿಯೋ ವೈರಲ್‌

ಈ ಸಂಬಂಧ ಹೇಳಿಕೆ ನೀಡಿದ ಸಚಿವಾಲಯ, ಮಹಿಳೆ ಕಾರ್ಡಿಯೋಸ್ಪಿರೇಟರಿ ಸ್ತಂಭನಕ್ಕೊಳಗಾಗಿದ್ದರು. ಇದರಿಂದ ಉಸಿರಾಟ ಮತ್ತು ಹೃದಯದ ಕಾರ್ಯದ ನಷ್ಟ, ಹಾಗೂ ಪುನರುಜ್ಜೀವನದ ಪ್ರಯತ್ನಗಳಿಗೆ ಪ್ರತಿಕ್ರಿಯಿಸಲಿಲ್ಲ. ನಂತರ, ಕರ್ತವ್ಯದಲ್ಲಿದ್ದ ವೈದ್ಯರು ಆಕೆಯ ಸಾವನ್ನು ಖಚಿತಪಡಿಸಿದ್ದರು ಎಂದು ಮಾಹಿತಿ ನೀಡಿದೆ. 

ಇನ್ನು, ತಮ್ಮ ತಾಯಿಯನ್ನು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಮಧ್ಯಾಹ್ನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ವೃದ್ಧ ಮಹಿಳೆಯ ಪುತ್ರ ಗಿಲ್ಬರ್ಟ್‌ ರೊಡೋಲ್ಫೋ ಬಾಲ್ಬೆರನ್‌ ಮೊಂಟೊಯಾ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದರು.

ಇದನ್ನೂ ಓದಿ: 400 ಕಾರಿನ ಬೆಂಗಾವಲು ಪಡೆ ಜತೆ 300 ಕಿ.ಮೀ. ಪ್ರಯಾಣ ಮಾಡಿ ಬಿಜೆಪಿಯಿಂದ ಮರಳಿ ಕಾಂಗ್ರೆಸ್‌ ಸೇರಿದ ನಾಯಕ

ನಂತರ, ಆಕೆಯನ್ನು ಹಲವು ಗಂಟೆಗಳ ಕಾಲ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಇನ್ನೊಂದೆಡೆ, ವೃದ್ಧ ಮಹಿಳೆ ತೆರೆದ ಕ್ಯಾಸ್ಕೆಟ್‌ನಲ್ಲಿ ಮಲಗಿ ಜೋರಾಗಿ ಉಸಿರಾಡುತ್ತಿರುವುದನ್ನು ತೋರಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅಲ್ಲದೆ, ಅವರನ್ನು ಸ್ಟ್ರೆಚರ್‌ಗೆ ಮತ್ತು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸುವ ಮೊದಲು ಅರೆವೈದ್ಯರು ಆಗಮಿಸಿ ಅವರನ್ನು ಪರೀಕ್ಷೆ ಮಾಡುತ್ತಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿತ್ತು.

ಆದರೆ, ಒಂದು ವಾರದ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ಅಂತಿಮ ಬಾರಿಗೆ ಘೋಷಿಸಲಾಗಿದೆ. 

ಇದನ್ನೂ ಓದಿ: "ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ