ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ನಕಲಿ ಕಾನೂನು ಪದವಿ ಪ್ರಮಾಣಪತ್ರ ಬಳಸಿ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ಸಾಬೀತಾದ ನಂತರ, ಹೈಕೋರ್ಟ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ನಕಲಿ ದಾಖಲೆ ನೀಡಿ ಜಡ್ಜ್ ಆಗಿ ಕೆಲಸ ಮಾಡಿದ ವ್ಯಕ್ತಿಯ ಅಮಾನತು
ಪಾಕಿಸ್ತಾನದಲ್ಲಿ ಯಾವುದೇ ಡಿಗ್ರಿ ಪಡೆಯದೇ ವ್ಯಕ್ತಿಯೊಬ್ಬರು ನ್ಯಾಯಾಧೀಶರಾದ ಪ್ರಕರಣ ಬೆಳಕಿಗೆ ಬಂದಿದೆ ಅದು ಅಲ್ಲಿನ ಹೈಕೋರ್ಟ್ ನ್ಯಾಯಾಧೀಶರಾಗಿ ಅವರು ಹಲವು ವರ್ಷ ಕೆಲಸ ಮಾಡಿದ್ದಾರೆ. ಪಾಕಿಸ್ತಾನದ ನ್ಯಾಯಾಧೀಶರೊಬ್ಬರು ಯಾವುದೇ ಡಿಗ್ರಿ ಪಡೆಯದೇ ಇಸ್ಲಮಾಬಾದ್‌ನ ಹೈಕೋರ್ಟ್‌ನಲ್ಲಿ 5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿ ಒಬ್ಬರು ಕೆಲಸ ಗಿಟ್ಟಿಸಿಕೊಂಡಿದ್ದು, ಅವರು ನಕಲಿ ಪದವಿ ಹೊಂದಿದ್ದಾರೆ ಎಂಬ ಯಾವುದೇ ಅನುಮಾನ ಬರದಂತೆ 5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ದಾಖಲೆಗಳೆಲ್ಲವೂ ನಕಲಿ ಎಂದು ತಿಳಿದು ಬಂದ ನಂತರನ ಹೈಕೋರ್ಟ್ ನ್ಯಾಯಾಲಯವೂ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ , ಇಸ್ಲಾಮಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23ರ, ಸೋಮವಾರ 116 ಪುಟಗಳ ವಿವರವಾದ ತೀರ್ಪನ್ನು ನೀಡಿದೆ. ಹಾಗೂ ನಕಲಿ ಪದವಿಗಳ ಮೂಲಕ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ನಕಲಿ ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ ಅವರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗಿದೆ.. ಜಹಾಂಗಿರಿ ಅವರನ್ನು ಡಿಸೆಂಬರ್ 2020 ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ಅವರು ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಿಷೇಧಿಸಲಾಯಿತು.
ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮಾಹಿತಿಯಿಂದ ಪ್ರಕರಣ ಬೆಳಕಿಗೆ
ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮೂಲ ದಾಖಲೆಗಳನ್ನು ಆಧರಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ಜಹಾಂಗಿರಿ ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ನ್ಯಾಯಾಲಯ ಹೇಳಿದೆ, ಇದರ ಜೊತೆಗೆ ಪರೀಕ್ಷೆಯಲ್ಲಿ ನಕಲು ಹಾಗೂ ವಿದ್ಯಾರ್ಥಿಯ ಸೋಗು ಹಾಗೂ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಆರೋಪವೂ ಅವರ ವಿರುದ್ಧ ಕೇಳಿ ಬಂದಿದೆ.
ಇದನ್ನೂ ಓದಿ: ಮದುವೆ ಮಂಟಪದಲ್ಲೇ ಕ್ಯಾಮರಾ ಮುಂದೆಯೇ ವಧುವಿಗೆ ಗುಂಡೇಟು: ಮದ್ವೆ ವೀಡಿಯೋದಲ್ಲಿ ದೃಶ್ಯ ಸೆರೆ
ಜಹಾಂಗಿರಿ 1988 ರಲ್ಲಿ ನಕಲಿ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ಪರೀಕ್ಷೆಗೆ ಕುಳಿತಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದರು, 1989 ರಲ್ಲಿ ವಿಶ್ವವಿದ್ಯಾನಿಲಯವು ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿತು. ಶಿಕ್ಷೆಯನ್ನು ಸ್ವೀಕರಿಸುವ ಬದಲು ಜಹಾಂಗಿರಿ ಮೋಸದ ವಿಧಾನಗಳನ್ನು ಬಳಸಿದರು. ಮುಂದಿನ ವರ್ಷ, ಅವರು ಇಮ್ತಿಯಾಜ್ ಅಹ್ಮದ್ ಎಂಬ ಇನ್ನೊಬ್ಬ ವಿದ್ಯಾರ್ಥಿಗೆ ನಿಯೋಜಿಸಲಾದ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ತಾರಿಕ್ ಜಹಾಂಗಿರಿ ಎಂಬ ಹೆಸರಿನಲ್ಲಿ ಮತ್ತೆ ಪರೀಕ್ಷೆಗೆ ಕುಳಿತರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳು ಗಂಡು ಮಕ್ಕಳೆಂದು ತಾರತಮ್ಯ ಮಾಡುತ್ತಿದ್ದ ತಂದೆಯನ್ನು ಕತ್ತು ಸೀಳಿ ಕೊಂದ ಸೋದರಿಯರು
ಇದಲ್ಲದೆ, ಸರ್ಕಾರಿ ಇಸ್ಲಾಮಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರು, ಇವರು ತಮ್ಮ ಕಾಲೇಜಿಗೆ ಶಿಕ್ಷಖನಕ್ಕಾಗಿ ಎಂದಿಗೂ ಸೇರಿಲ್ಲ ಎಂದು ಹೇಳಿದರು. ಮೂಲ ದಾಖಲೆಗಳನ್ನು ಮತ್ತು ಲಿಖಿತ ಉತ್ತರವನ್ನು ಸಲ್ಲಿಸಲು ಜಹಾಂಗಿರಿ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದ್ದರೂ, ಅವರು ಹಾಗೆ ಮಾಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.


