ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷದ ನಾಯಕಿ ವಾಗ್ದಾಳಿ ಭಾರತ ನಿಮಗೆ ಅಷ್ಟು ಇಷ್ಟವಾಗಿದ್ದಲ್ಲಿ ಅಲ್ಲಿಗೆ ಹೋಗಿ ಭಾರತ ಹೊಗಳಿದ ಇಮ್ರಾನ್‌ಗೆ ಮರಿಯಮ್‌ ನವಾಜ್‌ ತಿರುಗೇಟು

ಇಸ್ಲಾಮಾಬಾದ್: ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ (Maryam Nawaz Sharif) ಅವರು ಭಾರತವನ್ನು ಹೊಗಳಿದ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದು, ಅವರು ಭಾರತವನ್ನು ಅಷ್ಟೊಂದು ಇಷ್ಟಪಡುವುದಾದರೆ ಅವರು ಅಲ್ಲಿಗೆ ಹೋಗಲಿ ಎಂದು ಹೇಳಿದ್ದಾರೆ. ಪದಚ್ಯುತ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರ ಪುತ್ರಿಯಾಗಿರುವ ಮರಿಯಮ್‌ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ( Pakistan Muslim League-Nawaz) ಪಕ್ಷದ ಉಪಾಧ್ಯಕ್ಷೆಯಾಗಿದ್ದಾರೆ. ಭಾರತ ಗೌರವ ಪ್ರಜ್ಞೆ ಹೊಂದಿರುವ ರಾಷ್ಟ್ರ ಎಂದು ಹೇಳಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮರಿಯಮ್‌ ಈ ಮೂಲಕ ತಿರುಗೇಟು ನೀಡಿದ್ದಾರೆ.

ಅವಿಶ್ವಾಸ ನಿರ್ಣಯಕ್ಕೂ ಮೊದಲು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಖಾನ್, ಯಾವುದಾದರೂ ಪವಾಡ ನಡೆಯದ ಹೊರತು ತಾನು ಉಳಿಯುವ ಸಾಧ್ಯತೆ ಕಡಿಮೆ, ತಾನು ಭಾರತದ ವಿರುದ್ಧವಾಗಿ ಇಲ್ಲ ಹಾಗೂ ಈ ನೆರೆಯ ದೇಶದಲ್ಲಿ ತಮಗೆ ಸಾಕಷ್ಟು ಅನುಯಾಯಿಗಳಿದ್ದಾರೆ ಎಂದು ಹೇಳಿದ್ದರು.

Pakistan ಬೀದಿಗೆ ಬಂದು ಪ್ರತಿಭಟಿಸಿ ಎಂದು ಕರೆಕೊಟ್ಟ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಯಾವುದೇ ಮಹಾಶಕ್ತಿಯು ಭಾರತವನ್ನು ಅದರ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಮಾಡಲು ಒತ್ತಾಯಿಸಲು ಸಾಧ್ಯವಿಲ್ಲ. ಅವರು (ಭಾರತ) ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ. ಯಾರೂ ಭಾರತವನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಯುರೋಪಿಯನ್ ಒಕ್ಕೂಟದ ರಾಯಭಾರಿಗಳು ಇಲ್ಲಿ ನಮಗೇನು ಹೇಳಿದ್ದಾರೆ, ಅದನ್ನು ಅವರು ಭಾರತಕ್ಕೂ ಹೇಳಬಹುದೇ? ಎಂದು ಅವರು ಕೇಳಿದರು ಅಲ್ಲದೇ ಭಾರತವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಅವರಿಗೆ ಅಲ್ಲಿ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದರು.

ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮೇರಿಯಮ್, ಇಮ್ರಾನ್‌ ಖಾನ್‌ಗೆ ಹುಚ್ಚು ಹಿಡಿದಿದೆ ಎಂದು ಹೇಳಿದರು. ಅಧಿಕಾರ ಹೋದದ್ದನ್ನು ನೋಡಿ ಆತನಿಗೆ ಹುಚ್ಚು ಹಿಡಿದಿದ್ದನ್ನು ಯಾರಾದರು ಒಬ್ಬರು ಹೇಳಬೇಕಿದೆ. ಅವರ ಪಕ್ಷದವರೇ ಅವರನ್ನು ಹೊರ ಹಾಕಲಿದ್ದಾರೆ. ನೀವು ಭಾರತವನ್ನು ತುಂಬಾ ಇಷ್ಟಪಟ್ಟರೆ ಅಲ್ಲಿಗೆ ತೆರಳಿ ಮತ್ತು ಪಾಕಿಸ್ತಾನದ ಜೀವನವನ್ನು ಬಿಟ್ಟುಬಿಡಿ ಎಂದು 48 ವರ್ಷದ ಪಿಎಂಎಲ್-ಎನ್ ನಾಯಕಿ ಮರಿಯಮ್‌ ಹೇಳಿದರು.

ಪ್ರಧಾನಿ ಖಾನ್ ಅವರು ವಿರೋಧ ಪಕ್ಷಗಳಿಗೆ ಆಶ್ಚರ್ಯವಾಗುವಂತೆ ಭಾರತವನ್ನು ಹೊಗಳಿದ್ದು ಇದೇ ಮೊದಲಲ್ಲ. ಕಳೆದ ವಾರ ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ್ದರು. ಭಾರತ ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ರಕ್ಷಿಸುತ್ತದೆ ಅದು ಅಲ್ಲಿನ ಜನರ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು.

342 ಸದಸ್ಯರನ್ನು ಹೊಂದಿರುವ ಪಾಕಿಸ್ತಾನ ಸಂಸತ್‌ನಲ್ಲಿ 69 ವರ್ಷದ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್‌ ಖಾನ್‌ ಬಹುಮತವನ್ನು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಯಾವುದೇ ಪ್ರಧಾನಿ ಈವರೆಗೂ ಪೂರ್ಣಾವಧಿಯನ್ನು ಪೂರ್ಣಗೊಳಿಸಿಲ್ಲ ಮತ್ತು 2018 ರಲ್ಲಿ ಚುನಾಯಿತರಾದ ನಂತರ ಇಮ್ರಾನ್ ಖಾನ್ ಅವರು ತಮ್ಮ ಆಡಳಿತದಲ್ಲಿ ಈವರೆಗಿನ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇಮ್ರಾನ್ ಖಾನ್ ಸರ್ಕಾರವನ್ನು ಆರ್ಥಿಕ ದುರುಪಯೋಗ ಮತ್ತು ವಿದೇಶಾಂಗ ನೀತಿಯಲ್ಲಿ ದೊಡ್ಡ ಮಟ್ಟದ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿಗೆ ಮಾಜಿ ಪತ್ನಿ ಏನಂದ್ಲು ನೋಡಿ!

ಪ್ರಧಾನಿ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಪ್ರತಿಪಕ್ಷಗಳು ಹೊಸ ಸರ್ಕಾರ ರಚನೆಯ ಆರಂಭಿಕ ಮಾತುಕತೆಗಳನ್ನು ಪೂರ್ಣಗೊಳಿಸಿವೆ. ಅಧ್ಯಕ್ಷ ಅಲ್ವಿ ಪದಚ್ಯುತಿಗೆ ಮತ್ತು ಬ್ರಿಟನ್‌ನಿಂದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ವಾಪಸಾತಿಗೆ ಯೋಜನೆಗಳು ನಡೆಯುತ್ತಿವೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಶುಕ್ರವಾರ ವರದಿ ಮಾಡಿತ್ತು.

ಖಾನ್ ಅವರು ದೇಶದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಮತ ಚಲಾಯಿಸಿದ ಮೊದಲ ಪ್ರಧಾನಿಯಾಗುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ.
ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ 70ರ ಹರೆಯದ ಶೆಹಬಾಜ್ ಅವರು ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಸಂಭಾವ್ಯ ಸರ್ಕಾರದ ಆದ್ಯತೆಗಳನ್ನು ಪ್ರಕಟಿಸಲಿದ್ದಾರೆ.