Transgender Rumors: ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ರ ಪತ್ನಿ ಬ್ರಿಗಿಟ್ಟೆ ಅವರು ಟ್ರಾನ್ಸ್ಜೆಂಡರ್ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಈ ಆರೋಪದಿಂದ ಬೇಸತ್ತ ಮ್ಯಾಕ್ರಾನ್ , ತಮ್ಮ ಪತ್ನಿ ಮಹಿಳೆಯೇ ಎಂಬುದನ್ನು ಸಾಬೀತುಪಡಿಸಲು  ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಹೊಸ ಸಂಕಷ್ಟದಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ದಂಪತಿ…

ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ ಅವರ ಪತ್ನಿ ಫ್ರಾನ್ಸ್‌ನ ಪ್ರಥಮ ಮಹಿಳೆ ಒಬ್ಬರು ಮಹಿಳೆಯೇ ಆಗಿದ್ದಾರೆ ಅವರು ಟ್ರಾನ್ಸ್ಜೆಂಡರ್ ಮಹಿಳೆ ಅಲ್ಲ ಎಂಬುದನ್ನು ಸಾಬೀತುಪಡಿಸಲು ಫೋಟೋ ಹಾಗೂ ವೈಜ್ಞಾನಿಕ ಪುರಾವೆಗಳನ್ನು ಕೋರ್ಟ್ ಮುಂದೆ ಸಲ್ಲಿಸಲು ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ ಹಾಗೂ ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರಾನ್ ನಿರ್ಧರಿಸಿದ್ದಾರೆ. ಇದನ್ನು ಕೋರ್ಟ್ ಮುಂದೆ ಸಾಬೀತುಪಡಿಸುವ ಅನಿವಾರ್ಯತೆ ಈ ದಂಪತಿಗೆ ಬಂದಿದ್ದೇಕೆ? ಈ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ...

ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ ಅವರ ವೈವಾಹಿಕ ಜೀವನವೇ ಒಂದು ಚರ್ಚೆಯ ವಿಚಾರ ತನ್ನ ಇಂಗ್ಲೀಷ್ ಶಿಕ್ಷಕಿಯನ್ನೇ ಮದುವೆಯಾಗಿದ್ದ ಫ್ರಾನ್ಸ್ ಅಧ್ಯಕ್ಷನಿಗೆ ತನ್ನ ವಯಸ್ಸಿಗಿಂತಲೂ ದೊಡ್ಡವರಾದ ಮಲ ಮಕ್ಕಳಿದ್ದಾರೆ. ಅಂದರೆ ಅಪ್ಪನಿಗಿಂತ ಮಕ್ಕಳೇ ಇಲ್ಲಿ ಹಿರಿಯರು.. ಹಾಗೆಯೇ ಇಮ್ಯಾನುವೆಲ್ ಮ್ಯಾಕ್ರಾನ್‌ ಅವರ ಪತ್ನಿ ಬ್ರಿಗಿಟ್ಟೆ ಅವರು ತಮ್ಮ ಪತಿಗಿಂತ ಸುಮಾರು 25 ವರ್ಷ ಹಿರಿಯರು. ಆದರೆ ಇದೆಲ್ಲಾ ಅವರ ವೈಯಕ್ತಿಕ ಈಗ ಈ ವಿಚಾರ ನಿಮಗ್ಯಾಕೆ ಅಂತೀರಾ? ಕೇವಲ ವೈಯಕ್ತಿಕವಾಗಿರಬೇಕಾದ ಇವರ ದಾಂಪತ್ಯ ಜೀವನ ಈಗ ಜಾಗತಿಕ ಮಟ್ಟದಲ್ಲಿ ಚರ್ಚಗೆ ಬಂದಿದೆ. ಇದಕ್ಕೆ ಕಾರಣವಾಗಿರುವುದು ಅಮೆರಿಕಾದ ಬಲಪಂಥೀಯ ಪ್ರಭಾವಿ ರಾಜಕೀಯ ನಿರೂಪಕಿ ಕ್ಯಾಂಡೇಸ್ ಓವೆನ್ಸ್ ಅವರು ಮಾಡಿರುವ ಆರೋಪ...

ಫ್ರೆಂಚ್ ಅಧ್ಯಕ್ಷರ ಪತ್ನಿ ಮಹಿಳೆ ಅಲ್ಲ ಟ್ರಾನ್ಸ್‌ಜಂಡರ್ ಎಂದ ಅಮೆರಿಕಾದ ಬಲಪಂಥೀಯ ನಾಯಕಿ

ಹೌದು ಅಮೆರಿಕಾದ ಬಲಪಂಥೀಯ ನಾಯಕಿ ಕ್ಯಾಂಡೇಸ್ ಓವೆನ್ಸ್ ಅವರು ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಅವರ ಪತ್ನಿ ಬ್ರಿಗಿಟ್ಟೆ ಇಮ್ಯಾನುವೆಲ್ ಮಹಿಳೆ ಆಕೆಯೊಬ್ಬಳು ಟ್ರಾನ್ಸ್‌ಜಂಡರ್ ಮಹಿಳೆ ಎಂಬ ಆರೋಪವನ್ನು ಮೊದಲಿನಿಂದಲೂ ಮಾಡಿಕೊಂಡೆ ಬಂದಿದ್ದರು. ಈಕೆಯ ಈ ಬಹಿರಂಗ ಆರೋಪವನ್ನು ಖಂಡಿಸಿ ಕಳೆದ ಜುಲೈನಲ್ಲಿಯೇ ಫ್ರೆಂಚ್ ಅಧ್ಯಕ್ಷರು ಹಾಗೂ ಪತ್ನಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದರು. ಹಾಗಂತ ಈ ರೀತಿಯ ಆರೋಪಗಳನ್ನು ಮಾಡುತ್ತಿರುವವರಲ್ಲಿ ಬಲಪಂಥೀಯ ನಾಯಕಿ ಕ್ಯಾಂಡೇಸ್ ಓವೆನ್ಸ್ ಮೊದಲಿಗರೇನು ಅಲ್ಲ, ಹಲವು ವರ್ಷಗಳ ಹಿಂದೆಯೇ ಅಂದರೆ 2021ರಲ್ಲಿಯೇ ಫ್ರೆಂಚ್ ಬ್ಲಾಗರ್‌ಗಳಾದ ಅಮಂಡಿನ್ ರಾಯ್ ಮತ್ತು ನಟಾಚಾ ರೇ ಅವರು ಫ್ರೆಂಚ್ ಅಧ್ಯಕ್ಷರ ಪತ್ನಿ ವಿರುದ್ಧ ಇದೇ ಆರೋಪವನ್ನು ಮಾಡಿದ್ದರು. ಯೂಟ್ಯೂಬ್ ವೀಡಿಯೊದ ಮೂಲಕ ಅವರು ಇದೇ ರೀತೀಯ ಆರೋಪ ಮಾಡಿದ್ದು ಅದು ತೀವ್ರ ಸಂಚಲನ ಸೃಷ್ಟಿಸಿತ್ತು.

ಪದೇ ಪದೇ ಬರುತ್ತಿರುವ ಆರೋಪಗಳಿಂದ ಬೇಸತ್ತ ದಂಪತಿ

ಇವರ ಈ ಆರೋಪದ ವಿರುದ್ಧವೂ ಮ್ಯಾಕ್ರಾನ್ ದಂಪತಿ ಮಾನನಷ್ಟ ಮೊಕದ್ದಮೆ ಹೂಡಿ ಗೆದ್ದಿದ್ದರು. 2024 ರಲ್ಲಿ ರಾಯ್ ಮತ್ತು ರೇ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಿದ್ದ ಮ್ಯಾಕ್ರಾನ್ ದಂಪತಿ ಆರಂಭದಲ್ಲಿ ಇದರಲ್ಲಿ ಗೆದ್ದಿದ್ದರು. ಆದರೆ ಆ ತೀರ್ಪನ್ನು ಪ್ರಶ್ನಿಸಿ 2025 ರಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದ ಮೇಲೆ ರದ್ದುಗೊಳಿಸಲಾಯಿತು. ಆದರೆ ಈಗ ಅಮೆರಿಕನ್ ಬಲಪಂಥೀಯ ನಾಯಕಿ ಓವೆನ್ಸ್ ನೀಡಿದ ಹೇಳಿಕೆಯಿಂದ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅವರು ಕೂಡ ಫ್ರಾನ್ಸ್‌ನ ಪ್ರಥಮ ಮಹಿಳೆ, ಮಹಿಳೆ ಅಲ್ಲ, ಅವರೊಬ್ಬರು ಟ್ರಾನ್ಸ್‌ಜಂಡರ್ ಮಹಿಳೆ ಎಂಬ ಆರೋಪ ಮಾಡಿದ್ದಾರೆ...

ಕ್ಯಾಂಡೇಸ್ ಓವೆನ್ಸ್ ಆರೋಪವೇನು?

ಹೀಗಾಗಿ ಫ್ರಾನ್ಸ್ ಅಧ್ಯಕ್ಷರು ಪದೇ ಪದೇ ಕೇಳಿ ಬರುತ್ತಿರುವ ಈ ಆರೋಪದಿಂದ ರೋಸಿ ಹೋಗಿದ್ದು, ಕೋರ್ಟ್‌ನಲ್ಲಿ ವೈಜ್ಞಾನಿಕ ಸಾಕ್ಷಿ ಹಾಗೂ ಫೋಟೋ ಸೇರಿದಂತೆ ದಾಖಲೆಗಳನ್ನು ನೀಡುವುದಕ್ಕೆ ಮುಂದಾಗಿದ್ದು, ಇದು ಫ್ರಾನ್ಸ್‌, ಅಮೆರಿಕಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಅಮೆರಿಕಾದ ಬಲಪಂಥೀಯ ಪ್ರಭಾವಿ ರಾಜಕೀಯ ನಿರೂಪಕಿ ಕ್ಯಾಂಡೇಸ್ ಓವೆನ್ಸ್ ಅವರ ಪ್ರಕಾರ, ಫ್ರಾನ್ಸ್ ಅಧ್ಯಕ್ಷರ ಪತ್ನಿಗೆ ಹುಟ್ಟಿನಿಂದಲೇ ಪುರುಷ ಜನನಾಂಗವನ್ನು ಹೊಂದಿದ್ದರು. ಜೀನ್-ಮೈಕೆಲ್ ಟ್ರೋಗ್ನಿಯಕ್ಸ್ ಎಂಬುದು ಆಕೆಯ ಮೂಲ ಹೆಸರಾಗಿತ್ತು ಎಂದು ಆರೋಪಿಸಿದ್ದಾರೆ.

ಆದರೆ ಮ್ಯಾಕ್ರನ್‌ರ ವಕೀಲರಾದ, ಕ್ಲೇರ್ ಲಾಕ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಟಾಮ್ ಕ್ಲೇರ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಆರೋಪಗಳು ಮ್ಯಾಕ್ರಾನ್ ಅವರ ಪತ್ನಿಯನ್ನು ಬಹಳ ತೀವ್ರವಾಗಿ ಬೇಸರಿಸುವಂತೆ ಮಾಡಿದೆ. ದಂಪತಿ ತಮ್ಮ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಎಂಬುದನ್ನು ಸಾಬೀತುಪಡಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ

ಇದನ್ನೂ ಓದಿ: ಜೇಸಿಬಿ ಬಳಸಿ ತಯಾರಿಸಿದ್ರು ಉತ್ತರ ಭಾರತದ ಸ್ವಾದಿಷ್ಟ ಆಹಾರ: ವೀಡಿಯೋ ಭಾರಿ ವೈರಲ್