ನದಿಯಲ್ಲಿ ಈಜುವೆ ಎಂದ ಫ್ರಾನ್ಸ್ ಅಧ್ಯಕ್ಷ: ಅಂದು ನದಿಯಲ್ಲೇ P* ಮಾಡೋದಾಗಿ ಫ್ರಾನ್ಸ್ ಜನರ ಬೆದರಿಕೆ
ಫ್ರಾನ್ಸ್ ದೇಶ 2024 ಒಲಿಂಪಿಕ್‌ಗೆ ಸಜ್ಜುಗೊಳ್ಳುತ್ತಿದೆ. ಹೀಗಿರುವಾಗ ಅಲ್ಲಿನ ಪ್ಯಾರಿಸ್ ನಗರದಲ್ಲಿ ಹರಿಯುವ ಸೀನೆ ನದಿಯಲ್ಲಿ ಮಲ ವಿಸರ್ಜನೆ ಮಾಡುವುದಾಗಿ ಬೆದರಿಕೆಯೊಡುತ್ತಿದ್ದಾರೆ.
ಪ್ಯಾರಿಸ್: ಫ್ರಾನ್ಸ್ ದೇಶ 2024 ಒಲಿಂಪಿಕ್‌ಗೆ ಸಜ್ಜುಗೊಳ್ಳುತ್ತಿದೆ. ಹೀಗಿರುವಾಗ ಅಲ್ಲಿನ ಪ್ಯಾರಿಸ್ ನಗರದಲ್ಲಿ ಹರಿಯುವ ಸೀನೆ ನದಿಯಲ್ಲಿ ಮಲ ವಿಸರ್ಜನೆ ಮಾಡುವುದಾಗಿ ಬೆದರಿಕೆಯೊಡುತ್ತಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್ ಟ್ಯಾಗ್ ಮೂಲಕ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಆದರೆ ಮುಂದುವರಿದ ದೇಶವಾಗಿರುವ ಪ್ಯಾರಿಸ್‌ನಲ್ಲಿ ಜನ ನದಿಯಲ್ಲಿ ಮಲ ವಿಸರ್ಜನೆ ಮಾಡುವುದಾಗಿ ಹೇಳ್ತಿರೋದೇಕೆ ಅಲ್ಲಿ ಮಲ ವಿಸರ್ಜನೆಗೆ ಸರಿಯಾದ ಸೌಲಭ್ಯ ಇಲ್ವಾ ಏನಿದು ಕತೆ ಇಲ್ಲಿದೆ ಡಿಟೇಲ್ ಸ್ಟೋರಿ...
2024ರ ಒಲಿಂಪಿಕ್ ಉತ್ಸವದ ಅತಿಥ್ಯವನ್ನು ವಹಿಸಿಕೊಂಡಿರುವ ಫ್ರಾನ್ಸ್ ಈಗ ಅದಕ್ಕಾಗಿ ಸಜ್ಜುಗೊಳ್ಳುತ್ತಿದೆ. ಆದರೆ ಅಲ್ಲಿನ ಸ್ಥಳೀಯ ಜನ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಫ್ರಾನ್ಸ್ ಸರ್ಕಾರಕ್ಕೆ ಮುಜುಗರ ತರುತ್ತಿವೆ. ಒಲಿಂಪಿಕ್ಸ್ ದಿನಗಳಲ್ಲಿ ಫ್ರಾನ್ಸ್ ನಗರದ ಮಧ್ಯೆ ಹರಿಯುವ ಸೀನೆ ನದಿಯಲ್ಲಿ ಟೂ ಮಾಡುವುದಾಗಿ ಜನ ಬೆದರಿಕೆಯೊಡುತ್ತಿದ್ದಾರೆ. ಸೀನೆ ನದಿಯ ನೀರಿನ ಗುಣಮಟ್ಟ ತೀವ್ರವಾಗಿ ಕುಲಗೆಟ್ಟಿದ್ದು, ಇದನ್ನು ಸ್ವಚ್ಛ ಮಾಡುವಂತೆ ಬಹಳ ದಿನಗಳಿಂದ ಅಲ್ಲಿನ ಜನ ಸರ್ಕಾರವನ್ನು ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕುಳಿತಿದ್ದು, ಇದರಿಂದ ಸಿಟ್ಟಿಗೆದ್ದ ಜನ ಈಗ ನದಿಯಲ್ಲಿ ಈ ರೀತಿ ಟೂ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ನದಿಯಲ್ಲಿ ಈಜಲು ಮುಂದಾಗಿದ್ದ ಫ್ರಾನ್ಸ್ ಅಧ್ಯಕ್ಷ
ಇತ್ತ ಜನರು ಹೀಗೆ ನದಿಯಲ್ಲಿ ಮಲ ವಿಸರ್ಜನೆ ಮಾಡುತ್ತೇವೆ ಎಂದು ಹೇಳುವುದಕ್ಕೂ ಒಂದು ಮಹತ್ವದ ಕಾರಣವಿದೆ. ಕಳೆದ ಜೂನ್ 23 ರಂದು ಒಲಿಂಪಿಕ್ಸ್‌ಗೂ ಮೊದಲು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಹಾಗೂ ಪ್ಯಾರಿಸ್ ಮೇಯರ್ ಆನ್ನೆ ಹಿಡಲ್ಗೊ ಅವರು ಈ ನದಿಯಲ್ಲಿ ಈಜುವುದಾಗಿ ಘೋಷಣೆ ಮಾಡಿದ್ದರು. ನದಿ ನೀರು ಬಹಳ ಚೆನ್ನಾಗಿದೆ ಎಂದು ಸಮರ್ಥಿಸಿಕೊಳ್ಳುವುದಕ್ಕಾಗಿ ಅವರು ಈ ಹೇಳಿಕೆ ನೀಡಿದ್ದರು. ಈ ವಿಚಾರ ತಿಳಿದು ಜನ ಸಾಮಾಜಿಕ ಜಾಲತಾಣಗಳಲ್ಲಿ #JeChieDansLaSeineLe23Juin (I s**t in the Siene on June 23) ಎಂದು ಹ್ಯಾಶ್ ಟ್ಯಾಗ್ ಶುರು ಮಾಡಿದರು. ಅದರ ಅರ್ಥ ನಾನು ಜೂನ್ 23 ರಂದು ಸೀನೆ ನದಿಯಲ್ಲಿ ಮಲವಿಸರ್ಜನೆ ಮಾಡುತ್ತೇನೆ ಎಂದು ಹ್ಯಾಶ್‌ಟ್ಯಾಗ್. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವಾಗುತ್ತಿದ್ದಂತೆ ಫ್ರೆಂಚ್ ಅಧ್ಯಕ್ಷರು ನದಿಯಲ್ಲಿ ಈಜುವ ತಮ್ಮ ನಿರ್ಧಾರವನ್ನು ಪೋಸ್ಟ್ ಫೋನ್ ಮಾಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡ ಪ್ರಕಟ; ಹರ್ಮನ್ ನಾಯಕ
ಇತ್ತ ಜುಲೈ 30 ಹಾಗೂ 31 ರಂದು ಟ್ರಿಥ್ಲಾನ್ ಆಯೋಜನೆಗೊಂಡಿದ್ದು, ಈ ಸಂಧರ್ಭದಲ್ಲಿ ಅಥ್ಲೀಟ್‌ಗಳು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಸೀನೆ ನದಿಯಲ್ಲಿ ಈಜಲಿದ್ದಾರೆ. ಆದರೆ ಅಷ್ಟರೊಳಗೆ ಸರ್ಕಾರ ನದಿಯನ್ನು ಸ್ವಚ್ಛಗೊಳಿಸುತ್ತಾ ಕಾದು ನೋಡಬೇಕು.