Asianet Suvarna News Asianet Suvarna News

ಫ್ರಾನ್ಸ್ ಅಧ್ಯಕ್ಷರ ಸೆಲ್ಫಿಗೆ ಮೋದಿ ಜೊತೆ ಪೋಸ್ ನೀಡಿದ ಆರ್ ಮಾಧವನ್: 'ಮ್ಯಾಡಿ ವಿತ್ ಮೋದಿ' ಎಂದ ಫ್ಯಾನ್ಸ್

ಭಾರತದ ಖ್ಯಾತ ನಟ ಆರ್ ಮಾಧವನ್ ಸದ್ಯ ಫ್ರಾನ್ಸ್‌ನಲ್ಲಿ ಇದ್ದಾರೆ. ಈ ವೇಳೆ ಫ್ರೆಂಚ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಜೊತೆಯಲ್ಲಿದ್ದರು. 

R Madhavan poses with PM Modi as French President clicks selfie sgk
Author
First Published Jul 16, 2023, 1:27 PM IST

ಭಾರತದ ಖ್ಯಾತ ನಟ ಆರ್ ಮಾಧವನ್ ಸದ್ಯ ಫ್ರಾನ್ಸ್‌ನಲ್ಲಿ ಇದ್ದಾರೆ. ಈ ವೇಳೆ ಫ್ರೆಂಚ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಜೊತೆಯಲ್ಲಿದ್ದರು. ಮಾಧವನ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ವತಃ ಮಾಧವನ್ ಸುಂದರ ಫೋಟೋಗಳನ್ನು ಶೇರ್ ಮಾಡಿ ದೀರ್ಘವಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಶನಿವಾರ (ಜುಲೈ 15) ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಪ್ರಧಾನಿ ಮೋದಿಯವರ ಗೌರವಾರ್ಥ ಫ್ರೆಂಚ್ ಅಧ್ಯಕ್ಷರು ಆಯೋಜಿಸಿದ್ದ ಔತಣಕೂಟದಲ್ಲಿ ಮಾಧವನ್ ಹಾಗೂ ಮೂರು ಬಾರಿ ಗ್ರ್ಯಾಮಿ ವಿಜೇತ, ಸಂಗೀತಗಾರ ರಿಕಿ ಕೇಜ್  ಭಾಗವಹಿಸಿದ್ದರು.

ಔತಣಕೂಟದಲ್ಲಿ ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಫೋಟೋಗಳನ್ನು ಶೇರ್ ಮಾಡಿ ಮಾಧವನ್, ದೀರ್ಘವಾದ ಸಾಲು ಹಂಚಿಕೊಂಡಿದ್ದಾರೆ. 'ಜುಲೈ 14, 2023 ರಂದು ಪ್ಯಾರಿಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಇಂಡೋ-ಫ್ರೆಂಚ್ ಬಾಂಧವ್ಯಕ್ಕೆ ಮತ್ತು ಎರಡೂ ದೇಶಗಳ ಜನರಿಗೆ ಒಳ್ಳೆಯದನ್ನು ಮಾಡುವ ಉತ್ಸಾಹ ಮತ್ತು ಸಮರ್ಪಣೆ ಸ್ಪಷ್ಟವಾಗಿತ್ತು ಮತ್ತು ತೀವ್ರವಾಗಿತ್ತು. ಈ ಎರಡೂ ವಿಶ್ವ ನಾಯಕರ ಲೌವ್ರೆಯಲ್ಲಿ ನಮ್ಮ ಗೌರವಾನ್ವಿತ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಈ ಎರಡು ಮಹಾನ್ ಸ್ನೇಹಪರ ರಾಷ್ಟ್ರಗಳ ಭವಿಷ್ಯಕ್ಕಾಗಿ ಅವರು ತಮ್ಮ ದೃಷ್ಟಿಕೋನವನ್ನು ಉತ್ಸಾಹದಿಂದ ವಿವರಿಸಿದರು."

'ಅವರ ದೃಷ್ಟಿಕೋನ ಮತ್ತು ಕನಸುಗಳು ನಮಗೆಲ್ಲರಿಗೂ ಅಪೇಕ್ಷಿತ ಮತ್ತು ಸೂಕ್ತ ಸಮಯದಲ್ಲಿ ಫಲ ನೀಡಲಿ ಎಂದು ನಾನು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಬಹಳ ದಯೆಯಿಂದ ಅದರ ಭಾಗವಾಗಲು ಎದ್ದುನಿಂತರು ಆಗ ಅಧ್ಯಕ್ಷ ಮ್ಯಾಕ್ರನ್ ಉತ್ಸಾಹದಿಂದ ಸೆಲ್ಫಿ ತೆಗೆದುಕೊಂಡರು. ಆ ಚಿತ್ರದ ಅನನ್ಯತೆ ಮತ್ತು ಪ್ರಭಾವ ಎರಡಕ್ಕೂ ಇದು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.

 

 

ಫ್ರಾನ್ಸ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಂಡ ಮೋದಿ, ಗಮನಸೆಳೆದ ವೈಮಾನಿಕ ಪ್ರದರ್ಶನ !

ಅನುಗ್ರಹ ಮತ್ತು ನಮ್ರತೆಯ ಬಗ್ಗೆ ನಂಬಲಾಗದ ಪಾಠಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಮತ್ತು ಮೋದಿ ಜಿ ಅವರಿಗೆ ಧನ್ಯವಾದಗಳು. ಫ್ರಾನ್ಸ್ ಮತ್ತು ಭಾರತ ಯಾವಾಗಲೂ ಒಟ್ಟಿಗೆ ಏಳಿಗೆಯಾಗಲಿ. ಅಲ್ಲದೆ, 14ನೇ ಜುಲೈ 2023 ರಂದು, ಶ್ರೀ ನಂಬಿ ನಾರಾಯಣನ್ ಅವರು ಎಸ್‌ಇಪಿ ಫ್ರಾನ್ಸ್‌ನ ಸಹಾಯದಿಂದ ನಿರ್ಮಿಸಿದ ಯಶಸ್ವಿ ವಿಕಾಸ್ ಎಂಜಿನ್‌ನೊಂದಿಗೆ ಚಂದ್ರಯಾನ 3 ರ ಮತ್ತೊಂದು ಅದ್ಭುತ ಮತ್ತು ಯಶಸ್ವಿ ಉಡಾವಣೆಯನ್ನೂ ಗುರುತಿಸಿದೆ. ಅವರ ಪ್ರಮುಖ ಮತ್ತು ನಂಬಲಾಗದ ಮಿಷನ್‌ನ ಯಶಸ್ಸಿಗಾಗಿ ಸಹ ಪ್ರಾರ್ಥಿಸುವುದು' ಎಂದು ಬರೆದುಕೊಂಡಿದ್ದಾರೆ. 

ಭಾರತಕ್ಕೆ 5 ಚಿನ್ನದ ಪದಕ ತಂದುಕೊಟ್ಟ ಮಾಧವನ್ ಪುತ್ರ; ಸೂರ್ಯ, ಅನುಷ್ಕಾ ಸೇರಿದಂತೆ ಅನೇಕರಿಂದ ಅಭಿನಂದನೆಯ ಮಹಾಪೂರ

ಮಾಧವನ್ ಫೋಟೋಗಳಿಗೆ ಮೆಚ್ಚುಗೆಯ ಕಾಮೆಂಟ್ ಹರಿದುಬಂದಿವೆ. ಅಭಿಮಾನಿಗಳು ಪಾತ್ರವಲ್ಲದೇ ಅನೇಕ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮ್ಯಾಡಿ ವಿತ್ ಮೋದಿ ಎಂದು ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.  

Follow Us:
Download App:
  • android
  • ios