Breaking: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಗುಡುಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಬಂಧಿಸಲಾಗಿದೆ. ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ರೇಂಜರ್ಸ್ ಅವರನ್ನು ಬಂಧಿಸಿದೆ.
ಇಸ್ಲಾಮಾಬಾದ್ (ಮೇ.9): ಭಷ್ಟಾಚಾರ ಹಾಗೂ ಇತರ ಪ್ರಕರಣಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಬಂಧನಕ್ಕೆ ಒಳಗಾಗಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ರೇಂಜರ್ಸ್ ಇಮ್ರಾನ್ ಖಾನ್‌ರನ್ನು ವಶಕ್ಕೆ ಪಡೆದುಕೊಂಡಿದೆ. ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಇಮ್ರಾನ್ ಖಾನ್‌ರನ್ನು ಬಂಧಿಸಲಾಗಿದೆ. ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಎದುರು ಇಮ್ರಾನ್ ಖಾನ್‌ರನ್ನು ರೇಂಜರ್ಸ್ ವಶಕ್ಕೆ ಪಡೆದುಕೊಳ್ಳುವ ವೇಳೆ ಇಮ್ರಾನ್ ಪರ ವಕೀಲರಿಗೆ ಗಂಭೀರ ಗಾಯವಾಗಿದೆ. ತಮ್ಮ ವಿರುದ್ಧ ಸರ್ಕಾರ ಹಾಕಿರುವ ಹಲವು ಕೇಸ್‌ಗಳ ವಿರುದ್ಧ ಜಾಮೀನು ಪಡೆದುಕೊಳ್ಳುವ ಸಲುವಾಗಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್‌ಗ ತೆರಳಿದ್ದರು. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ದಿನದಿಂದಲೂ ಅವರು ಪಾಕಿಸ್ತಾನದ ಸೇನೆಯ ಅಗ್ರ ಅಧಿಕಾರಿಗಳು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರು ಹೈಕೋರ್ಟ್‌ನ ಹೊರ ಆವರಣಕ್ಕೆ ಬರುತ್ತಿದ್ದಂತೆ ಪಾಕಿಸ್ತಾನಿ ರೇಂಜರ್ಸ್ ಬಂಧನ ಮಾಡಿದ್ದಾರೆ. ಇಮ್ರಾನ್ ಪರ ವಕೀಲ ಫೈಸಲ್ ಚೌಧರಿ ಕೂಡ ಇಮ್ರಾನ್ ಖಾನ್ ಬಂಧನವನ್ನು ಖಚಿತಪಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐನ ಮುಖ್ಯಸ್ಥ ಮಸರತ್ ಚೌಧರಿ ಮಾತನಾಡಿದ್ದು, 'ನನ್ನ ಎದುರಿಗೇ ದೊಡ್ಡ ಪ್ರಮಾಣದಲ್ಲಿ ಇಮ್ರಾನ್ ಖಾನ್ ಅವರ ಮೇಲೆ ಹಲ್ಲೆ ಮಾಡಿ ಬಂಧಿಸಲಾಗಿದೆ. ಅವರನ್ನು ಕೊಂದುಹಾಕಬಹುದು ಎನ್ನುವ ಭಯ ಕೂಡ ನನಗೆ ಕಾಡಿದೆ' ಎಂದಿದ್ದಾರೆ.
ಇಮ್ರಾನ್ ಅವರನ್ನು ರೇಂಜರ್‌ಗಳು ನ್ಯಾಯಾಲಯದ ಒಳಗಿನಿಂದ "ಅಪಹರಣ" ಮಾಡಿದ್ದಾರೆ ಎಂದು ಪಿಟಿಐನ ಅಜರ್ ಮಶ್ವಾನಿ ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಬಂಧನದ ಬೆನ್ನಲ್ಲಿಯೇ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವಂತೆ ಪಿಟಿಐ ತನ್ನ ಕಾರ್ಯಕರ್ತರಿಗೆ ಕರೆ ನೀಡಿದೆ ಎಂದು ಹೇಳಿದ್ದಾರೆ. ಈ ನಡುವೆ ಪಾಕಿಸ್ತಾನದ ರಾಜಧಾನಿಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಯಾರಿಗೂ ಚಿತ್ರಹಿಂಸೆ ನೀಡಿಲ್ಲ ಎಂದು ದೃಢಪಡಿಸಿದ್ದು, ಪೊಲೀಸರು ಇಮ್ರಾನ್ ಕಾರನ್ನು ಸುತ್ತುವರಿದಿದ್ದಾರೆ.
ಇಮ್ರಾನ್ ಮನೇಲಿ ಶಸ್ತ್ರಾಸ್ತ್ರ, ಪೆಟ್ರೋಲ್ ಬಾಂಬ್ ಪತ್ತೆ!
ಹಲವಾರು ವಿಫಲ ಪ್ರಯತ್ನಗಳ ಬಳಿಕ ಪಾಕಿಸ್ತಾನಿ ರೇಂಜರ್ಸ್ ಇಮ್ರಾನ್ ಖಾನ್‌ರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಮೇಲೆ ಪೋಲೀಸ್ ದಾಳಿ ಸೇರಿದಂತೆ, ಅವರನ್ನು ಬಂಧಿಸಲು ಹಲವು ಪ್ರಯತ್ನ ಮಾಡಿದ್ದರು. ಪ್ರತಿ ಬಾರಿಯೂ ಅವರು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ.
ಸೆಕ್ಸ್ ಕಾಲ್ ವಿವಾದದಲ್ಲಿ ಇಮ್ರಾನ್ ಖಾನ್: ಈ ಆಡಿಯೋ ನಕಲಿ ಎಂದ ಖಾನ್ ಪಕ್ಷ
ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧನ: ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ನನ್ನು ಬಂಧಿಸಲಾಗಿದೆ. ಇದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೇಸ್ ಆಗಿದೆ.. ಇಮ್ರಾನ್ ಪ್ರಧಾನಿಯಾಗಿ ಈ ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ನೀಡಿದ್ದರು. ಈ ಪ್ರಕರಣವನ್ನು ಪಾಕಿಸ್ತಾನದ ಶ್ರೀಮಂತ ವ್ಯಕ್ತಿ ಮಲಿಕ್ ರಿಯಾಜ್ ಬಹಿರಂಗಪಡಿಸಿದ್ದಾರೆ. ಬಂಧನದ ಭೀತಿಯನ್ನು ತೋರಿಸಿ ಇಮ್ರಾನ್ ಮತ್ತು ಅವರ ಪತ್ನಿ ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದರು. ನಂತರ ರಿಯಾಜ್ ಮತ್ತು ಅವರ ಮಗಳ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದೆ. ಇದರಲ್ಲಿ ಇಮ್ರಾನ್ ಪತ್ನಿ ಬುಶ್ರಾ ಬೀಬಿ ತನಗೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ನಿರಂತರವಾಗಿ ಕೇಳುತ್ತಿದ್ದಳು ಎಂದು ರಿಯಾಜ್ ಪುತ್ರಿ ಹೇಳಿದ್ದಾಳೆ. ಈ ಬಗ್ಗೆ ರಿಯಾಜ್ ಅವರು ಆಕೆ ಎಲ್ಲವನ್ನೂ ಮಾಡಿದಲ್ಲಿ, ಐದು ಕ್ಯಾರೆಟ್ ಉಂಗುರವನ್ನು ನೀಡಿ ಎಂದು ಹೇಳಿದ್ದು ಬಹಿರಂಗವಾಗಿತ್ತು.