ಸೆಕ್ಸ್ ಕಾಲ್ ವಿವಾದದಲ್ಲಿ ಇಮ್ರಾನ್ ಖಾನ್: ಈ ಆಡಿಯೋ ನಕಲಿ ಎಂದ ಖಾನ್ ಪಕ್ಷ
ಪಾಕಿಸ್ತಾನದ ಸಾಮಾನ್ಯ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿರುವುದು ಎಂದು ಹೇಳಲಾದ ‘ಸೆಕ್ಸ್ ಕಾಲ್’ ಆಡಿಯೋವೊಂದು ಬಿಡುಗಡೆಯಾಗಿದ್ದು, ಇಮ್ರಾನ್‌ರನ್ನು ವಿವಾದದಲ್ಲಿ ಸಿಲುಕಿಸಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಸಾಮಾನ್ಯ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿರುವುದು ಎಂದು ಹೇಳಲಾದ ‘ಸೆಕ್ಸ್ ಕಾಲ್’ ಆಡಿಯೋವೊಂದು ಬಿಡುಗಡೆಯಾಗಿದ್ದು, ಇಮ್ರಾನ್‌ರನ್ನು ವಿವಾದದಲ್ಲಿ ಸಿಲುಕಿಸಿದೆ. ಪತ್ರಕರ್ತ ಸೈಯದ್ ಅಲಿ ಹೈದರ್ ಇದನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದು, ಕೆಲವು ವರದಿಗಳು ಇದು ಪ್ರಧಾನಿ ಕಚೇರಿಯಿಂದ ಮಾಡಲಾದ ಕರೆ ಎಂದು ಹೇಳಿವೆ. ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದೊಂದು ನಕಲಿ ಆಡಿಯೋ ಎಂದು ಇಮ್ರಾನ್‌ರ ಪಕ್ಷವಾದ ತೆಹ್ರಿಕ್-ಇ-ಇನ್ಸಾಫ್ ಹೇಳಿದೆ. ಆದರೂ ಕೆಲವರು, ‘ಇಂಥ ಆಡಿಯೋಗಳಿಂದ ಇಮ್ರಾನ್ ಜನಪ್ರಿಯತೆಗೆ ಧಕ್ಕೆಯೇನೂ ಆಗದು’ ಎಂದಿದ್ದಾರೆ. ಪತ್ರಕರ್ತೆಯೊಬ್ಬರು, ‘ಇಮ್ರಾನ್ ಖಾನ್, ಇಮ್ರಾನ್ ಹಶ್ಮಿಯಾಗಿ ಬದಲಾಗಿದ್ದಾರೆ’ ಎಂದು ಛೇಡಿಸಿದ್ದಾರೆ.
ಆಡಿಯೋದಲ್ಲೇನಿದೆ?:
ಇದು ಇಮ್ರಾನ್ ಖಾನ್ ಎಂದು ಹೇಳಲಾಗುತ್ತಿರುವ ವ್ಯಕ್ತಿ ಹಾಗೂ ಮಹಿಳೆಯೊಬ್ಬಳ ಜೊತೆ ನಡೆದಿರುವ ಫೋನ್ ಸಂಭಾಷಣೆಯಾಗಿದೆ. ಇಮ್ರಾನ್ ಧ್ವನಿ ಹೋಲುವ ವ್ಯಕ್ತಿ, ‘ನನ್ನನ್ನು ಭೇಟಿಯಾಗು. ಸಮ್ಮಿಲನ ಆಗೋಣ’ ಎಂದು ಮಹಿಳೆಗೆ ಕೋರುತ್ತಾನೆ. ಆದರೆ, ‘ನನಗೆ ಅನಾರೋಗ್ಯ ಇದೆ. ಭೇಟಿ ಮಾಡಲಾಗದು’ ಎಂದು ಮಹಿಳೆ ಹೇಳುತ್ತಾಳೆ. ಆದರೆ ವ್ಯಕ್ತಿಯು ‘ಮಾರನೇ ದಿನ (ನಾಳೆ) ಭೇಟಿ ಆಗೋಣ. ಆದರೆ, ನನ್ನ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಅವರಿಗೆ ತಡವಾಗಿ ಬನ್ನಿ ಎಂದು ಮನವರಿಕೆ ಮಾಡಲು ಯತ್ನಿಸುವೆ. ಯಾವುದಕ್ಕೂ ಪರಿಸ್ಥಿತಿ ನೋಡಿಕೊಂಡು ಮತ್ತೆ ನಿನಗೆ ಕಾಲ್ ಮಾಡುವೆ’ ಎನ್ನುತ್ತಾನೆ.
Imran Khan ನಟನೆಯಲ್ಲಿ ಶಾರುಖ್, ಸಲ್ಮಾನ್ ಅವರನ್ನೂ ಮೀರಿಸುತ್ತಾರೆ: ಪಾಕ್ ನಾಯಕ
Explained: ಇಮ್ರಾನ್ ಖಾನ್ ಹತ್ಯೆ ಯತ್ನದಿಂದ ಪಾಕಿಸ್ತಾನ ಸೇನೆ ಮತ್ತು ಆರ್ಥಿಕತೆಗೆ ಆದ ನಷ್ಟವೇನು?