ಕುಡುಕಿಯ ಅವಾಂತರ : ವಿಮಾನ ತುರ್ತು ಭೂಸ್ಪರ್ಶ

ಇಲ್ಲೊಂದು ಕಡೆ ಕುಡಿದ ಮತ್ತಿನಲ್ಲಿ ಮಹಿಳೆ ಮಾಡಿದ ಅವಾಂತರದಿಂದ ವಿಮಾನವೊಂದು  ತುರ್ತು ಲ್ಯಾಂಡ್ ಆಇದ್ದಲ್ಲದೇ ಆರು ಗಂಟೆ ಕಾಲ ವಿಳಂಬವಾಗಿ ತಲುಪಿದೆ.

Flight emergency landing because of drunk woman, video goes viral akb

ನಟಿ ಮಾಲಾಶ್ರೀ, ನಟನೆಯ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ಸರ್ವಕಾಲಕ್ಕೂ ಸತ್ಯ ಎನಿಸುತ್ತಿದೆ. ಶರಾಬು ಸೇವಿಸಿದ ಮೇಲೆ ಹುಡುಗಿಯೇ ಆಗಲಿ ಹುಡುಗನೇ ಆಗಲಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಮದಿರೆಯ ಮತ್ತಿಗೆ ಅವರಿಗೆ ಇನ್ನಿಲ್ಲದ ಧೈರ್ಯ ಬರುವುದು. ಒಳಗಿರುವ ಪರಮಾತ್ಮ ಆಡಿಸಿದಂತೆ ಆಡಲು ಶುರು ಮಾಡುವುದರಿಂದ ಇತರರಿಗೆ ಪೀಕಲಾಟ ಶುರುವಾಗವುದು. ಅದೇ ರೀತಿ ಇಲ್ಲೊಂದು ಕಡೆ ಕುಡಿದ ಮತ್ತಿನಲ್ಲಿ ಮಹಿಳೆ ಮಾಡಿದ ಅವಾಂತರದಿಂದ ವಿಮಾನವೊಂದು ಆರು ಗಂಟೆ ಕಾಲ ವಿಳಂಬವಾಗಿ ಹೊರಟಿದೆ. 

ಪೋರ್ಚುಗಲ್ ವಿಮಾನದಲ್ಲಿ (Portugal Flight) ಮಹಿಳೆಯೊಬ್ಬಳು ಕುಡಿದು ತೂರಾಡಿ ವಿಮಾನ ಸಿಬ್ಬಂದಿಗೆ ತೀವ್ರವಾಗಿ ಕಿರುಕುಳ ನೀಡಿದ್ದಾಳೆ. ರೌಡಿಯಂತೆ ವರ್ತಿಸಿ ವಿಮಾನದ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಈಕೆಯ ಕಿರುಕುಳ ತಾಳಲಾರದೇ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ (Emergency Landing) ಆಗಿದೆ. ವಿಮಾನ ತುರ್ತು ಭೂಸ್ಪರ್ಶವಾಗುತ್ತಿದ್ದಂತೆ ವಿಮಾನವೇರಿದ ಪೊಲೀಸರು ಅಲ್ಲಿಗೆ ಆಕೆಯನ್ನು ಅಲ್ಲಿಯೇ ಬಂಧಿಸಿ ಕರೆದುಕೊಂಡು ಬಂದಿದ್ದಾರೆ. 

ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ

ದ ಮಿರರ್ ವರದಿ ಪ್ರಕಾರ, ವಿಜ್ ಏರ್‌ ಸಂಸ್ಥೆಗೆ (Wizz Air) ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವಿಮಾನ ಬ್ರಿಟನ್‌ನ (Britain) ಗಟ್ವಿಕ್‌ನಿಂದ (Gatwick)  ಪೋರ್ಚುಗಲ್‌ನ (Portugal) ಮಡೈರಾಗೆ (Madeira) ಪ್ರಯಾಣಿಸುತ್ತಿತ್ತು. ಆದರೆ ವಿಮಾನ ಟೇಕ್‌ ಆಪ್ ಆದ ಬಳಿಕ ವಿಮಾನದಲ್ಲಿ ಮಹಿಳೆಯ ಗಲಾಟೆ ಜೋರಾಗಿದ್ದು, ಈಕೆಯ ಕಿರುಕುಳ ತಡೆಯಲಾಗದೇ ಪೈಲಟ್ ವಿಮಾನವನ್ನು ಪೋರ್ಚುಗಲ್ ರಾಜಧಾನಿ ಲಿಸ್ಬನ್‌ಗೆ (Lisbon) ತಿರುಗಿಸಿ ಅಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದ್ದಾನೆ. ನಂತರ ವಿಮಾನ ನಿಲ್ದಾಣದ ಪೊಲೀಸರು ಆಗಮಿಸಿ ಆಕೆಯನ್ನು ಬಂಧಿಸಿದ್ದಾರೆ. 

ಆದರೆ ಹೀಗೆ ಕುಡಿದು ತೂರಾಡುತ್ತಾ ರೌಡಿಸಂ ತೋರಿದ ಈ ರೌಡಿಬೇಬಿ ಯಾವ ದೇಶದವಳು ಎಂಬ ಬಗ್ಗೆ ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿಲ್ಲ. ಈ ವಿಮಾನ ನವಂಬರ್ 4 ರಂದು ಸಂಜೆ 5.30 ರ  ಸುಮಾರಿಗೆ ಸರಿಯಾಗಿ ಗಟ್ವಿಕ್‌ನಿಂದ ಟೇಕ್ ಆಫ್ ಆಗಿತ್ತು. ಅಲ್ಲದೇ 9.30 ರ ಸುಮಾರಿಗೆ ಮಡೈರಾದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಈ ಕುಡುಕಿಯ ಅವಾಂತರದಿಂದಾಗಿ ಸುಮಾರು ಆರು ಗಂಟೆ ವಿಳಂಬವಾಗಿ ವಿಮಾನ ಲ್ಯಾಂಡ್ ಆಗಿದೆ. ಸ್ಥಳೀಯ ಮಾಧ್ಯಮದ ವರದಿ ಪ್ರಕಾರ, ಮಹಿಳೆ ತನ್ನ ಸಹ ಪ್ರಯಾಣಿಕರ ಮೇಲೆ ಮೊದಲಿಗೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಬಿಡಿಸಲು ಹೋದ ವಿಮಾನ ಸಿಬ್ಬಂದಿ ಮೇಲೆಯೂ ಆಕೆ ತನ್ನ ಜಂಘಾಬಲ ತೋರಿಸಿದ್ದಾಳೆ. ವಿಮಾನದಲ್ಲಿದ್ದ ಇಬ್ಬರು ಕುಡುಕ ಪ್ರಯಾಣಿಕರಿಂದ ಈ ರೀತಿ ಆಗಿದ್ದು, ಇವರಿಬ್ಬರನ್ನು ಕೂಡ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

 ವಿಮಾನದಲ್ಲಿ ಪಾಕಿಸ್ತಾನ ಪ್ರಜೆಯ ಕಿತಾಪತಿ: ಫ್ಲೈಟ್ ವಿಂಡೋ ಒಡೆಯಲು ಯತ್ನ: ದುಬೈನಲ್ಲಿ ಬಂಧನ

ಕೆಲವು ವಿಮಾನ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಏನನಿಸುವುದೋ ಏನೋ ಎಂದೂ ಕಾಣದ ವಿಚಿತ್ರ ವರ್ತನೆಗಳನ್ನು ಅವರು ತೋರಿಸುತ್ತಾರೆ. ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರನ್ನು ನಿಭಾಯಿಸುವುದು ಗಗನಸಖಿಯರು ಹಾಗೂ ವಿಮಾನದ ಸಿಬ್ಬಂದಿಗೆ ದೊಡ್ಡ ತಲೆನೋವಿನ ವಿಚಾರವಾಗಿದೆ. ವಿಮಾನ ಸಿಬ್ಬಂದಿಯ ಜೊತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸಿ ಅವರ ಮೇಲೆ ಹಲ್ಲೆ ನಡೆಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆ ಪ್ರಯಾಣಿಕನೋರ್ವ ಡ್ರಗ್ಸ್‌ ಸೇವಿಸಿ ವಿಮಾನವೇರಿ ಗಗನಸಖಿಯ ಜೊತೆ ಅಸಭ್ಯವಾಗಿ ವರ್ತಿಸಿದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾಗ ಡ್ರಗ್ ಸೇವಿಸಿ ವಿಮಾನವೇರಿದ್ದರಿಂದ ಹೀಗಾಯಿತು ಎಂದು ಕ್ಷಮೆ ಕೇಳಿದ್ದ. ಇದಕ್ಕೂ ಮೊದಲು ಪಾಕಿಸ್ತಾನ ವಿಮಾನದಲ್ಲಿ ಪ್ರಯಾಣಿಕನೋರ್ವ ವಿಮಾನದಲ್ಲಿ ತನ್ನ ಬಟ್ಟೆಯನ್ನೆಲ್ಲಾ ಹರಿದುಕೊಂಡಿದ್ದ. ಅಲ್ಲದೇ ಹಾರುತ್ತಿದ್ದ ವಿಮಾನದ ಬಾಗಿಲು ಒಡೆಯಲು ಮುಂದಾಗಿದೆ. 
 

Latest Videos
Follow Us:
Download App:
  • android
  • ios