ಅಮೆರಿಕದ ಗುರುದ್ವಾರದಲ್ಲಿ (Gurudwara) ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಕ್ಯಾಲಿಫೋರ್ನಿಯಾದ (California) ಸ್ಯಾಕ್ರಮೆಂಟೊ ಕೌಂಟಿಯಲ್ಲಿರುವ ಗುರುದ್ವಾರ ಸ್ಯಾಕ್ರಮೆಂಟೊ ಸಿಖ್ ಸೊಸೈಟಿಯಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.  

ಕ್ಯಾಲಿಫೋರ್ನಿಯಾ: ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ಸ್ಥಾಪನೆಗೆ ಭಾರತದ ಪಂಜಾಬ್‌ನಲ್ಲಿ ಖಲಿಸ್ತಾನ್ ಭಯೋತ್ಪಾದಕ ಸಂಘಟನೆ ಹಾಗೂ ಅದರ ಬೆಂಬಲಿತ ಸಂಘಟನೆಗಳು ಹೋರಾಟ ಇತ್ತೀಚೆಗೆ ತೀವ್ರಗೊಂಡಿದ್ದು, ಈ ಹೋರಾಟವನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈ ಖಾಲಿಸ್ತಾನಿಗಳಿಗೆ ವಿದೇಶದಿಂದಲೂ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಭಾರತದಲ್ಲಿ ಖಾಲಿಸ್ತಾನ ಹೋರಾಟವನ್ನು ಬೆಂಬಲಿಸಿ ಇತ್ತೀಚೆಗೆ ಅಮೆರಿಕಾ ಲಂಡನ್, ಆಸ್ಟ್ರೇಲಿಯಾದಲ್ಲಿಯೂ ಖಾಲಿಸ್ತಾನ್ ಬೆಂಬಲಿಗರು ಪ್ರತಿಭಟನೆ ನಡೆಸಿ ಕಿಡಿಗೇಡಿತನ ಮೆರೆದಿದ್ದರು. ಈ ಘಟನೆಗಳೆಲ್ಲಾ ಮಾಸುವ ಮೊದಲೇ ಅಮೆರಿಕಾದಲ್ಲಿ ಸಿಖ್ಖರ ಧಾರ್ಮಿಕ ಸ್ಥಳವೆನಿಸಿದ ಗುರುದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. 

ಭಾನುವಾರ ಅಮೆರಿಕದ ಗುರುದ್ವಾರದಲ್ಲಿ (Gurudwara) ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಕ್ಯಾಲಿಫೋರ್ನಿಯಾದ (California) ಸ್ಯಾಕ್ರಮೆಂಟೊ ಕೌಂಟಿಯಲ್ಲಿರುವ ಗುರುದ್ವಾರ ಸ್ಯಾಕ್ರಮೆಂಟೊ ಸಿಖ್ ಸೊಸೈಟಿಯಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇದು ದ್ವೇಷಕ್ಕೆ ಸಂಬಂಧಿಸಿ ನಡೆದ ದಾಳಿಯಲ್ಲ ಎಂದು ಪೊಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ ಗುಂಡಿನ ದಾಳಿಗೊಳಗಾದ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದು ಒಬ್ಬರಿಗೊಬ್ಬರು ತಿಳಿದಿರುವ ವ್ಯಕ್ತಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಆತ್ಮಾಹುತಿ ದಾಳಿಕೋರರ ಸಜ್ಜುಗೊಳಿಸುತ್ತಿದ್ದ ಅಮೃತ್‌ಪಾಲ್‌: ಗುರುದ್ವಾರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ

ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ (Sacramento County Sheriffs Office) ವಕ್ತಾರ ಅಮರ್ ಗಾಂಧಿ ಪ್ರಕಾರ, ಈ ಗುಂಡಿನ ಚಕಮಕಿಯಲ್ಲಿ ಮೂರು ಜನರು ಭಾಗಿಯಾಗಿದ್ದಾರೆ. ಸ್ನೇಹಿತನೋರ್ವನ ಮೇಲೆ ದುಷ್ಕರ್ಮಿಯೋರ್ವ ಗುಂಡು ಹಾರಿಸಿದಾಗ ಗಾಯಗೊಂಡವನ ಸ್ನೇಹಿತ ದುಷ್ಕರ್ಮಿಯತ್ತ ಪ್ರತಿದಾಳಿ ನಡೆಸಿ ಸ್ಥಳದಿಂದ ಓಡಿ ಹೋಗಿದ್ದಾನೆ. ಈ ಗಲಾಟೆಯಲ್ಲಿ ಭಾಗಿಯಾದವರೆಲ್ಲರೂ ಪರಸ್ಪರ ತಿಳಿದವರೇ ಆಗಿರಬೇಕು ಎಂಬ ಶಂಕೆ ಇದೆ. ಇದು ಯಾವುದೋ ವೈಯಕ್ತಿಕ ಕಾರಣಕ್ಕೆ ಸಂಬಂಧಿಸಿದ ಗುಂಡಿನ ದಾಳಿಯಾಗಿರಬಹುದು ಎಂದು ಅಮರ್ ಗಾಂಧಿ (Amar Gandhi) ಹೇಳಿದ್ದಾರೆ. 

ಶಂಕಿತರಲ್ಲಿ ಓರ್ವ ಭಾರತೀಯನಾಗಿದ್ದು, ಇನ್ನೊಬ್ಬ ಶಂಕಿತ (suspect) ಶೂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಯಾರು ಬೇಕಾದರೂ ಗನ್ ಖರೀದಿಸಬಹುದು. ಪ್ರತಿ ಮನೆಯಲ್ಲೂ ಗನ್ ಇಟ್ಟುಕೊಳ್ಳಬಹುದು. ಇದೇ ಕಾರಣಕ್ಕೆ ಗುಂಡಿನ ದಾಳಿಯ ಕಾರಣಕ್ಕೆ ಅಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ದಾಖಲೆಗಳ ಪ್ರಕಾರ, ಕೇವಲ ಕಳೆದೊಂದು ವರ್ಷದಲ್ಲಿ 44,000 ಗನ್ ಸಂಬಂಧಿತ ಸಾವುಗಳು ಆ ದೇಶದಲ್ಲಿ ಸಂಭವಿಸಿವೆ. ಇದರಲ್ಲಿ ಅರ್ಧದಷ್ಟು ಕೊಲೆ ಪ್ರಕರಣಗಳು, ಮತ್ತೆ ಕೆಲವು ಆತ್ಮರಕ್ಷಣೆಗಾಗಿ ನಡೆದ ಹೋರಾಟಗಳು, ಮತ್ತೆ ಕೆಲವು ಆತ್ಮಹತ್ಯೆಗಳಾಗಿವೆ. 

ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸ್ಫೋಟ: ಇಬ್ಬರ ಬಲಿ

Scroll to load tweet…

ಅಮೆರಿಕಾದಲ್ಲಿ ಮುಂದುವರೆದ ಖಾಲಿಸ್ತಾನಿಗಳ ಉಪಟಳ: ಭಾರತೀಯ ಪತ್ರಕರ್ತನ ಮೇಲೆ ಹಲ್ಲೆ

ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿಗಳು ಪೌರುಷ ತೋರಿದ್ದಾರೆ. ಅಮೆರಿಕಾದ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿರುವುದನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಭಾರತೀಯ ಸಂಜಾತ ವಾಷಿಂಗ್ಟನ್‌ ಮೂಲದ ಲಲಿತ್ ಝಾ ಹಲ್ಲೆಗೊಳಗಾದ ಪತ್ರಕರ್ತ. ಅವಾಚ್ಯವಾಗಿ ನಿಂದಿಸಿ ನಂತರ ದೈಹಿಕವಾಗಿ ಲಲಿತ್ ಝಾ ಮೇಲೆ ಖಾಲಿಸ್ತಾನಿ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.