ವಿಮಾನವು ಬ್ರಿಸ್ಬೇನ್‌ಗೆ ಲ್ಯಾಂಡ್‌ ಆಗುತ್ತಿದ್ದಂತೆ ಆ ವ್ಯಕ್ತಿ ತನ್ನ ಸೀಟಿನಲ್ಲಿ ಕುಳಿತು ವಿಮಾನದ ಫ್ಲೋರ್‌ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಕುಡಿದ ಅಮಲಿನಲ್ಲಿ ಅನೇಕ ಅವಘಡಗಳು ಸಂಭವಿಸುವುದನ್ನು ಆಗಾಗ್ಗೆ ವರದಿಗಳನ್ನು ಕೇಳುತ್ತಿರುತ್ತೀರಿ, ಅಥವಾ ನೋಡುತ್ತಿರುತ್ತೀರಿ. ಇದೇ ರೀತಿ, ವಿಮಾನದ (Flight) ಫ್ಲೋರ್‌ ಮೇಲೆ ಪ್ರಯಾಣಿಕರ ನಡುವೆಯೇ ಮೂತ್ರ ವಿಸರ್ಜಿಸಿದ (Urinating) ಆರೋಪ ವ್ಯಕ್ತಿಯೊಬ್ಬರ ವಿರುದ್ದ ಕೇಳಿಬಂದಿದೆ. ಬಾಲಿಯಿಂದ (Bali) ಬ್ರಿಸ್ಬೇನ್‌ಗೆ (Brisbane) ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಲವಾರು ಸಣ್ಣ ಬಾಟಲಿ ವೈನ್‌ಗಳನ್ನು ಸೇವಿಸಿದ ನಂತರ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಪ್ರಯಾಣಿಕನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಆಸ್ಟ್ರೇಲಿಯಾ ಪೊಲೀಸರು (Australia Police) ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ (New Zealand) 72 ವರ್ಷದ ವೃದ್ಧನ ಮೇಲೆ ಆಕ್ಷೇಪಾರ್ಹ ವರ್ತನೆ ತೋರಿದ ಆರೋಪ ಹೊರಿಸಲಾಗಿದೆ. "ನಿನ್ನೆ ಸಂಜೆ ವಿಮಾನವು ಬ್ರಿಸ್ಬೇನ್‌ಗೆ ಲ್ಯಾಂಡ್‌ ಆಗುತ್ತಿದ್ದಂತೆ ಆ ವ್ಯಕ್ತಿ ತನ್ನ ಸೀಟಿನಲ್ಲಿ ಕುಳಿತು ವಿಮಾನದ ಫ್ಲೋರ್‌ ಮೇಲೆ ಮೂತ್ರ ವಿಸರ್ಜಿಸಿದ್ದಾರೆ’’ ಎಂದು ಪೊಲೀಸರು ನವೆಂಬರ್ 3 ರಂದು ತಿಳಿಸಿದ್ದಾರೆ. ಇನ್ನು, ವೃದ್ಧನ ನಡವಳಿಕೆಯನ್ನು "ಅವಮಾನಕರ" ಎಂದು ವಿವರಿಸಿದ ಪೊಲೀಸರು, ಅದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದೂ ಹೇಳಿದರು. 

ಇದನ್ನು ಓದಿ: ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ

ಹಾಗೂ, ಸಮಾಜವಿರೋಧಿ ಅಥವಾ ಕಾನೂನುಬಾಹಿರ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ (Austraian Federal Police) (ಎಎಫ್‌ಪಿ) (AFP) ಇದನ್ನು ಆಸ್ಟ್ರೇಲಿಯಾದ ವಿಮಾನ ನಿಲ್ದಾಣಗಳಲ್ಲಿ ಸಹಿಸುವುದಿಲ್ಲ" ಎಂದು ಬ್ರಿಸ್ಬೇನ್ ವಿಮಾನ ನಿಲ್ದಾಣದ ಕಮಾಂಡರ್ ಸೂಪರಿಂಟೆಂಡೆಂಟ್ ಮಾರ್ಕ್ ಕೋಲ್‌ಬ್ರಾನ್ ಹೇಳಿದ್ದಾರೆ. ಅಲ್ಲದೆ, ಪ್ರಯಾಣಿಕರು ಜವಾಬ್ದಾರಿಯಿಂದ ಮದ್ಯ ಸೇವಿಸಬೇಕು. ಕುಟುಂಬಗಳು ಮತ್ತು ಇತರ ಪ್ರಯಾಣಿಕರು ಸುರಕ್ಷಿತವಾಗಿರುವ ಹಕ್ಕನ್ನು ಹೊಂದಿದ್ದಾರೆ ಎಂದೂ ಅವರು ಹೇಳಿದರು.

ವೃದ್ಧನಿಗೆ ನೋಟಿಸ್‌..!
ಬಾಲಿ-ಬ್ರಿಸ್ಬೇನ್ ವಿಮಾನದಲ್ಲಿ ಈ ಕೃತ್ಯವೆಸಗಿದ ವ್ಯಕ್ತಿಗೆ ಬ್ರಿಸ್ಬೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಅವರಿಗೆ ನೋಟಿಸ್ ನೀಡಲಾಗಿದೆ ಎಂದೂ ತಿಳಿದುಬಂದಿದೆ. ನಂತರ, ಅವರನ್ನು ಬ್ರಿಸ್ಬೇನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಪರಾಧಕ್ಕೆ ತಪ್ಪೊಪ್ಪಿಕೊಂಡ ನಂತರ, ಅವರಿಗೆ 12 ತಿಂಗಳ ಉತ್ತಮ ನಡವಳಿಕೆ ತೋರಬೇಕೆಂಬ ಬಾಂಡ್‌ ನೀಡಲಾಗಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ವಿಮಾನದಲ್ಲಿ ಪಾಕಿಸ್ತಾನ ಪ್ರಜೆಯ ಕಿತಾಪತಿ: ಫ್ಲೈಟ್ ವಿಂಡೋ ಒಡೆಯಲು ಯತ್ನ: ದುಬೈನಲ್ಲಿ ಬಂಧನ

ಸಾಮಾನ್ಯವಾಗಿ, ವಿಮಾನಯಾನ ಸಂಸ್ಥೆಗಳು ಮತ್ತು ಪೊಲೀಸರು ಈ ರೀತಿ ನಿಯಮಗಳನ್ನು ಉಲ್ಲಂಘಿಸಿದರೆ, ದುರ್ವರ್ತನೆ ತೋರಿದರೆ ಮತ್ತು ವಿಮಾನಗಳಲ್ಲಿ ಭದ್ರತಾ ಉಲ್ಲಂಘನೆಗಳ ನಿದರ್ಶನಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತವೆ.

ಕಳೆದ ತಿಂಗಳು, ಡ್ರಗ್ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿಮಾನದ ಬಾತ್‌ರೂಮ್‌ನ ಬಾಗಿಲು ಒಡೆದಿದ್ದಲ್ಲದೇ, ಗಗನಸಖಿಯ ಎದೆಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದ. ಆಕ್ಟೋಬರ್ 4 ರಂದು ಯುನೈಟೆಡ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಈ ವಿಮಾನವು ಅಮೆರಿಕದ ಫ್ಲೋರಿಡಾದ ಮಿಯಾಮಿಯಿಂದ ವಾಷಿಂಗ್ಟನ್ ಡಿಸಿಗೆ ಆಗಮಿಸುತ್ತಿತ್ತು. 

ಒಂದು ಗಂಟೆಗೂ ಹೆಚ್ಚು ಕಾಲ ಈತ ಡ್ರಗ್ ನಶೆಯಲ್ಲಿ ತೇಲಾಡುತ್ತಾ ಸಹ ಪ್ರಯಾಣಿಕರಿಗೆ ವಿಮಾನದ ಸಿಬ್ಬಂದಿಗೆ ಕಿರುಕುಳ ನೀಡಿದ್ದ. ಇನ್ನು, ಈತನ ಕಿತಾಪತಿಯನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದರು. ಹೀಗೆ ಕಿರುಕುಳ ನೀಡಿದ ವಿಮಾನ ಪ್ರಯಾಣಿಕನನ್ನು ಚೆರ್ರಿ ಲೋಗನ್ ಸೆವಿಲ್ಲಾ ಎಂದು ಗುರುತಿಸಲಾಗಿತ್ತು. ಮಾದಕ ದ್ರವ್ಯ ಎನಿಸಿರುವ ಮ್ಯಾಜಿಕ್ ಮಶ್ರೂಮ್ ಅನ್ನು ಈತ ಹೀರಿದ ಬಳಿಕ ಹೀಗೆ ಕಪಿಯಂತೆ ವರ್ತಿಸಿದ್ದ ಎಂದೂ ತಿಳಿದುಬಂದಿತ್ತು. 

ಇದನ್ನೂ ಓದಿ: ವಿಮಾನದಲ್ಲಿ ಪಯಣಿಗರಿಗೆ ಸೆಲೆಬ್ರಿಟಿಯಂತೆ ವಿಶ್ ಮಾಡಿ ಚಿಲ್ ಮಾಡಿದ ಪುಟ್ಟ ಬಾಲಕ

ಈ ಹಿಂದೆ ಸೆಪ್ಟೆಂಬರ್‌ ತಿಂಗಳಲ್ಲಿ, ಸಿಂಗಾಪುರ್ ಏರ್‌ಲೈನ್ಸ್ ವಿಮಾನದ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಮತ್ತು ತನ್ನ ಬ್ಯಾಗ್‌ನಲ್ಲಿ ಸ್ಫೋಟಕವಿದೆ ಎಂದು ಹೇಳುವ ಮೂಲಕ ಪ್ರಯಾಣಿಕರನ್ನು ಬೆದರಿಸಿದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಅದಕ್ಕೂ ಒಂದು ತಿಂಗಳ ಹಿಂದೆ, ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಆರು ಬ್ರಿಟಿಷ್ ಪ್ರಯಾಣಿಕರನ್ನು ಬಂಧಿಸಲಾಗಿತ್ತು.