Asianet Suvarna News Asianet Suvarna News

ವಿಮಾನದಲ್ಲಿ ಪಯಣಿಗರಿಗೆ ಸೆಲೆಬ್ರಿಟಿಯಂತೆ ವಿಶ್ ಮಾಡಿ ಚಿಲ್ ಮಾಡಿದ ಪುಟ್ಟ ಬಾಲಕ

ವಿಮಾನ ಪ್ರಯಾಣದಲ್ಲಿ ಮಗುವೊಂದು ಎಲ್ಲರಿಗೂ ಅಪರಿಚಿತರು ಎಂಬುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಹಾಯ್ ಹಾಯ್ ಎನ್ನುತ್ತಾ ವಿಶ್ ಮಾಡುತ್ತಿದ್ದು, ಆ ಮಗುವಿನ ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Toddler says hi to everybody in flight journey, kids video goes viral akb
Author
First Published Sep 5, 2022, 11:03 AM IST

ಒಳ್ಳೆಯ ಕಂಪನಿ ಇಲ್ಲದಿದ್ದರೆ ಯಾವುದೇ ಪ್ರಯಾಣವಾಗಲಿ ಅದು ಬೋರೆನಿಸುವುದು, ಬಸ್ ಪ್ರಯಾಣವೇ ಇರಬಹುದು ಅಥವಾ ಅದು ವಿಮಾನ ಪ್ರಯಾಣವೇ ಇರಬಹುದು. ಆದರೆ ಪುಟ್ಟ ಮಕ್ಕಳು ಪ್ರಯಾಣದ ವೇಳೆ ಜೊತೆ ಇದ್ದರೆ ಪ್ರಯಾಣ ಕೆಲವೊಮ್ಮೆ ಮಜಾ ನೀಡುವುದು. (ಪ್ರಯಾಣದ ವೇಳೆ ಭೂಮಿ ಆಕಾಶ ಒಂದಾಗುವಂತೆ ಅತ್ತು ಕರೆದು ಮಾಡುವ ಮಕ್ಕಳಿದ್ದಾರೆ ಅದು ಬೇರ ವಿಚಾರ) ಅದೇ ರೀತಿ ಇಲ್ಲೊಂದು ಪುಟ್ಟ ಮಗುವೊಂದು ವಿಮಾನ ಪ್ರಯಾಣಿಕರಿಗೆ ಫುಲ್ ಖುಷಿ ನೀಡಿದ್ದಾನೆ. 

ಸಾಮಾನ್ಯವಾಗಿ ಅಪರಿಚಿತರು ಎಂದು ಗೊತ್ತಾದಾಗ ದೊಡ್ಡವರು ಬಿಡಿ ಪುಟ್ಟ ಮಕ್ಕಳು ಕೂಡ ಮುಖ ತಿರುಗಿಸಿಕೊಳ್ಳುತ್ತಾರೆ. ಕೆಲವರು ಮಕ್ಕಳಂತು ಸ್ವಲ್ಪ ಗುರಾಯಿಸಿದರೂ ಜೋರಾಗಿ ಅಳಲು ಶುರು ಮಾಡುತ್ತಾರೆ. ಆದರೆ ಇಲ್ಲೊಂದು ಪುಟ್ಟ ಹುಡುಗ ಪಕ್ಕಾ ಸೆಲೆಬ್ರಿಟಿಯಂತೆ (Celebrity) ವಿಮಾನದಲ್ಲಿ (Flight) ಹವಾ ಕ್ರಿಯೇಟ್ ಮಾಡಿದ್ದಾನೆ. ಎಲ್ಲರೂ ಮಗುವಿನ ಈ ನಿರ್ಭಿತ ನಡೆಗೆ ಫುಲ್ ಫಿದಾ ಆಗಿದ್ದು, ಖುಷಿ ಖುಷಿಯಾಗಿ ಪ್ರತಿಕ್ರಿಯಿಸಿದ್ದಾರೆ. 

 

ತನ್ನ ಸಹೋದರನೊಂದಿಗೆ ವಿಮಾನವೇರಿ ಬಂದ ಬಾಲಕ (Little boy) ಮೊದಲ ಸೀಟಿನಲ್ಲಿ ಕುಳಿತವರಿಂದ ಆರಂಭಿಸಿ ಕೊನೆಯವರೆಗೂ ಎಲ್ಲರಿಗೂ ಹಾಯ್ ಹಾಯ್ ಹಾಯ್ ಎಂದು ಹೇಳುತ್ತಾ ಕೈ ಬೀಸಿ ವಿಶ್ ಮಾಡಿದ್ದಾನೆ. ಈ ವೇಳೆ ಅಪರಿಚಿತ ಪ್ರಯಾಣಿಕರು ಕೂಡ ಮಗುವಿಗೆ ಅದೇ ರೀತಿ ಖುಷಿಯಾಗಿ ಸ್ಪಂದಿಸಿದ್ದಾರೆ. ಜೊತೆಗೆ ಪುಟ್ಟ ಬಾಲಕನನ್ನು ಮಾತನಾಡಿಸಲು ಯತ್ನಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮಗುವಿನ ಈ ಖುಷಿ ಖುಷಿಯಾದ ನಡೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಮಗುವಿನ ತಾಯಿ ಕೆಲ್ಲಿ ನೆಲ್ಸನ್ (Kelli Nielson) ಎಂಬುವವರು ಸಾಮಾಜಿಕ ಜಾಲತಾಣ (Social Media) ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.

ಮಕ್ಕಳ ಒಳ್ಳೆಯ ಗುಣಗಳಾಗಲಿ ಅಥವಾ ಕೆಟ್ಟ ಗುಣಗಳಾಗಲಿ ಅದು ಪೋಷಕರ ನಡವಳಿಕೆ ಮೇಲೆ ಅವಲಂಬಿತವಾಗಿರುತ್ತದೆ. ಬೆಳೆಯುತ್ತಿರುವ ಮಕ್ಕಳು ತಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಜೊತೆಗೆ ಅವುಗಳನ್ನು ಕಲಿಯಲು ಪ್ರಯತ್ನಿಸುತ್ತವೆ. ಇದೇ ಕಾರಣಕ್ಕೆ ಮಕ್ಕಳ ಮುಂದೆ ಒಳ್ಳೆಯ ನಡವಳಿಕೆ ತೋರಬೇಕೆಂದು ಹಿರಿಯರು ಸದಾ ಹೇಳುತ್ತಿರುತ್ತಾರೆ.

 ಗರ್ಭಧಾರಣೆಗೆ ಗಂಡಸು ಬೇಕಿಲ್ಲ ! ಪುರುಷನ ಸಂಪರ್ಕವಿಲ್ಲದೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಅನೇಕ ಮಕ್ಕಳು (Children) ಬಾಲ್ಯ (Childhood) ದಲ್ಲಿಯೇ ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತಾರೆ. ಸಿಕ್ಕವರಿಗೆಲ್ಲ ಹೊಡೆಯುತ್ತಿರುತ್ತಾರೆ. ಮಕ್ಕಳು ಎಳವೆಯಲ್ಲಿರುವಾಗ ಪಾಲಕರಿಗೆ ಇದು ತಮಾಷೆ ಎನ್ನಿಸುತ್ತದೆ. ಆದ್ರೆ ಮಕ್ಕಳು ದೊಡ್ಡವರಾದಂತೆ ಇದು ಮುಂದುವರೆದ್ರೆ ತೊಂದರೆ ಕಟ್ಟಿಟ್ಟಬುಟ್ಟಿ. ಹಾಗಾಗಿ ಮಕ್ಕಳ ಹೊಡೆಯುವ, ಗಲಾಟೆ ಮಾಡುವ ಚಟವನ್ನು ಆರಂಭದಲ್ಲಿಯೇ ಬಿಡಿಸಬೇಕು. ಮಕ್ಕಳಿಗೆ ಇದ್ರಿಂದಾಗುವ ನಷ್ಟವನ್ನು ಹೇಳ್ಬೇಕು. ಜೊತೆಗೆ ಪ್ರೀತಿಯಿಂದ ಮಾತನಾಡುವುದು ಹೇಗೆ ಎಂಬುದನ್ನು ಕಲಿಸಬೇಕು.

ಮನೆಯಲ್ಲಿ ಪಾಲಕರು (Parents) ಮಾತನಾಡುವ ಶಬ್ಧಗಳನ್ನು ಅಥವಾ ಸ್ನೇಹಿತರು, ಸುತ್ತಮುತ್ತಲಿನ ಜನರು ಬಳಸುವ ಶಬ್ಧವನ್ನು ಮಕ್ಕಳು ಬೇಗ ಗ್ರಹಿಸ್ತಾರೆ. ನಂತ್ರ ಅವರೂ ಅದರ ಬಳಕೆ ಶುರು ಮಾಡ್ತಾರೆ. ಕೆಲವೊಮ್ಮೆ ಮಕ್ಕಳಿಗೆ ಆ ಪದದ ಅರ್ಥವೇ ತಿಳಿದಿರುವುದಿಲ್ಲ. ನಿಮ್ಮ ಮಕ್ಕಳು ಕೆಟ್ಟ ಭಾಷೆ, ಕೊಳಕು ಪದ ಬಳಕೆ ಮಾಡ್ತಿದ್ದರೆ ಅದನ್ನು ತಪ್ಪಿಸುವ ಕೆಲಸ ಮಾಡಿ. ಮನೆಯಲ್ಲಿ ಮಕ್ಕಳ ಮುಂದೆ ನೀವೂ ಅಸಭ್ಯ ಶಬ್ಧಗಳ ಬಳಕೆ ಮಾಡಬೇಡಿ. ಮಕ್ಕಳ ಮುಂದೆ ಜಗಳವಾಡುವಾಗ ಎಚ್ಚರವಿರಲಿ.

ನವಜಾತ ಶಿಶು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್

ಮಕ್ಕಳಿಗೆ ವಸ್ತುವನ್ನು ಕದಿಯಬೇಕೆಂಬ (Stealing) ಉದ್ದೇಶವಿರುವುದಿಲ್ಲ. ಅವರಿಗೆ ಇಷ್ಟವಾಗ್ತಿದ್ದಂತೆ ಅದನ್ನು ಎತ್ತಿಟ್ಟುಕೊಳ್ತಾರೆ. ಮನೆಯಲ್ಲಿ ಮಾತ್ರವಲ್ಲ ಶಾಲೆಯಲ್ಲೂ ಇದು ರೂಢಿಯಾದ್ರೆ ಇದಕ್ಕೆ ಕಳ್ಳತನ ಎಂಬ ಹೆಸರು ಬರುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ವಸ್ತುವನ್ನು ತೆಗೆದುಕೊಳ್ಳುವಾಗ್ಲೂ ಪಾಲಕರನ್ನು ಅಥವಾ ಆ ವಸ್ತುವಿನ ಮಾಲೀಕರನ್ನು ಕೇಳಬೇಕೆಂಬ ಗುಣ ಬೆಳೆಸಿ. ಆಗ ಮಕ್ಕಳು ಸದ್ದಿಲ್ಲದೆ ಎತ್ತಿಟ್ಟುಕೊಳ್ಳುವ ಬದಲು ಕೇಳಿ ಪಡೆಯುತ್ತಾರೆ.
 

Follow Us:
Download App:
  • android
  • ios