ಆಲೂಗಡ್ಡೆ ಬಿತ್ತನೆಗೆ ಸಹಾಯ ಮಾಡುವ ಶ್ವಾನ : ವಿಡಿಯೋ ವೈರಲ್
- ಶ್ವಾನದಿಂದ ಕೃಷಿಗೆ ಸಹಾಯ
- ಆಲೂಗಡ್ಡೆ ಬಿತ್ತನೆಗೆ ಸಹಾಯ ಮಾಡುವ ಶ್ವಾನ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೆಲಸ ಮಾಡುವಾಗ ಯಾರಾದರೂ ಧಾವಿಸಿ ಬಂದು ನಮ್ಮ ಕೆಲಸಕ್ಕೆ ಸಹಾಯ ಮಾಡಿದರೆ ಎಷ್ಟು ಖುಷಿಯಾಗುತ್ತೆ ಅಲ್ವಾ. ಕೃಷಿ ಕೆಲಸಗಳಲ್ಲಿ ಸಹಾಯಕರಿದ್ದರೆ ಕೆಲಸ ವೇಗವಾಗಿ ಸಾಗುತ್ತದೆ. ಓರ್ವ ಮಾಡುವ ಕೆಲಸವನ್ನು ಮೂವರು ಮಾಡಿದ್ದರೆ ಮತ್ತಷ್ಟು ಸುಲಭ. ಬಹುಶಃ ಇಲ್ಲೊಂದು ಶ್ವಾನ(Dog) ಇದನ್ನು ತಿಳಿದಂತಿದೆ. ಶ್ವಾನವೊಂದು ಆಲೂಗಡ್ಡೆ ನೆಡಲು ರೈತನಿಗೆ (Farmer) ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ (Viral) ಆಗಿದ್ದು, ನೆಟ್ಟಿಗರು ಈ ಮುದ್ದು ಶ್ವಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೆಡ್ಡಿಟ್‌ನಲ್ಲಿ ಈ ಕೃಷಿಕ ಶ್ವಾನದ ವಿಡಿಯೋವೊಂದನ್ನು (Video) ಪೋಸ್ಟ್ ಮಾಡಲಾಗಿದ್ದು, ಶ್ವಾನ ರೈತನಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿಡಿಯೋ ತೋರಿಸುತ್ತಿದೆ. ನಾನು ಆಲೂಗಡ್ಡೆಯನ್ನು (Potatoes) ಕೂಡ ನೆಡಬಲ್ಲೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ದೊಡ್ಡದಾದ ಹೊಲದಲ್ಲಿ ಇಬ್ಬರು ವ್ಯಕ್ತಿಗಳು ಆಲೂಗೆಡ್ಡೆ ನೆಡಲು ಸಾಲು ಮಾಡಿದ್ದು, ಒಬ್ಬ ಗುಂಡಿಗೆ ಅಲೂಗಡ್ಡೆ ಬೀಜ ಹಾಕುತ್ತಾ ಬಂದರೆ ಮತ್ತೊರ್ವ ಅದಕ್ಕೆ ಮಣ್ಣು ಮುಚ್ಚುತ್ತಿರುತ್ತಾನೆ. ಈ ವೇಳೆ ಜೊತೆಯಲ್ಲಿರುವ ಶ್ವಾನವೂ ಇವರಿಗೆ ಸಹಾಯ ಮಾಡುತ್ತದೆ. ಹೊಂಡಕ್ಕೆ ಅಲೂಗಡ್ಡೆ ಬೀಳುತ್ತಿದ್ದಂತೆ ಮುದ್ದಾದ ನಾಯಿಮರಿ ಅದಕ್ಕೆ ತನ್ನ ಬಾಯಿಯಿಂದ ದೂಡಿ ದೂಡಿ ಮಣ್ಣು ಮುಚ್ಚುತ್ತದೆ. ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 48,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದು, ಮುದ್ದಾದ ಶ್ವಾನವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಶ್ವಾನಗಳಿಗೂ ಇಲ್ಲಿ ಕೂಲರ್ ಬೇಕು, ಅಷ್ಟೇ ಅಲ್ಲ ನಿತ್ಯ ನಾಲ್ಕಾರು ಬಾರಿ ಎಳನೀರು ಕುಡಿಸ್ಬೇಕು!
ನಿಷ್ಠಾವಂತ ಆಲೂಗೆಡ್ಡೆ ಕೃಷಿಕ, ಓಹ್ ನಾನು ಅವನನ್ನು ಪ್ರೀತಿಸುತ್ತೇನೆ, ಕೆಲವು ಶ್ವಾನಗಳು ನಂತರದ ಬಳಕೆಗಾಗಿ ನೆಲವನ್ನು ಅಗೆದು ಆಹಾರವನ್ನು ಮುಚ್ಚಿಡುವ ಅಭ್ಯಾಸವನ್ನು ಹೊಂದಿರುತ್ತವೆ ಹೀಗೆ ಒಬ್ಬೊಬ್ಬರು ಒಂದೊಂದು ತರದಲ್ಲಿ ಕಾಮೆಂಟ್ ಮಾಡಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನಾಯಿಯು ನೋಡುವುದನ್ನು ನಾನು ಇಷ್ಟಪಡುತ್ತೇನೆ. ಶ್ವಾನವೂ ಉದ್ದೇಶವನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ತಾನು ಅದೇ ರೀತಿ ಮಾಡಲು ಮತ್ತು ಸಹಾಯ ಮಾಡಲು ನಿರ್ಧರಿಸುತ್ತದೆ. ನಾನು ನೆಲದಲ್ಲಿ ಬಿದ್ದ ಎಲೆಗಳನ್ನು ಗುಡಿಸುವ ಅಥವಾ ಅಂಗಳವನ್ನು ಒರೆಸುವ ಹಸ್ಕಿ ತಳಿಯ ಶ್ವಾನವನ್ನು ನೋಡಿದ್ದೇನೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.
ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಚೆಂಡು ಎತ್ತಿಕೊಂಡು ಹೋದ ಶ್ವಾನ
ಪ್ರಾಣಿಗಳು ಎಂದರೆ ಬಹುತೇಕರು ಬುದ್ಧಿ ಇಲ್ಲದ ಭಾವನೆಗಳಿಲ್ಲದ ಜೀವಿಗಳು ಎಂದು ಬಹುತೇಕ ಮಾನವರು ಭಾವಿಸುವುದುಂಟು. ಆದರೆ ಮನುಷ್ಯರ ಈ ಊಹೆಯನ್ನು ಅನೇಕ ಬಾರಿ ಪ್ರಾಣಿಗಳು ಸುಳ್ಳು ಮಾಡಿವೆ. ನಮಗೂ ಭಾವನೆಗಳಿವೆ. ನಮಗೂ ಗೌರವಯುತವಾಗಿ ಬದುಕಲು ಅವಕಾಶ ನೀಡಿ ಎಂದು ಹೇಳುವಂತಿರುತ್ತವೆ ಪ್ರಾಣಿಗಳ ವರ್ತನೆಗಳು. ಅದರಲ್ಲೂ ಶ್ವಾನಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ತಪ್ಪಾಗಲಾರದು. ತನಗೆ ಒಂದು ತುತ್ತು ಊಟ ಕೊಟ್ಟವನ ಎಂದೂ ಮರೆಯದ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರುವಾಸಿ. ಶ್ವಾನಗಳು ಮನುಷ್ಯನ ರಕ್ಷಿಸಿದಂತಹ ಹಲವು ಘಟನೆಗಳನ್ನು ನೀವು ಈಗಾಗಲೇ ನೋಡಿರಬಹುದು. ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಶ್ವಾನಗಳು ತಮ್ಮ ಮೃತ ಗೆಳೆಯನಿಗೆ ಮನುಷ್ಯರೂ ಮಾಡುವಂತೆಯೇ ಅಂತಿಮ ಸಂಸ್ಕಾರವನ್ನು ನಡೆಸಿದ್ದು, ಇದನ್ನು ನೋಡಿದ ಜನ ಇವುಗಳೇನು ಪ್ರಾಣಿಗಳೋ ಅಥವಾ ಪ್ರಾಣಿವೇಷದಲ್ಲಿರುವ ಮನುಷ್ಯರೋ ಎಂದು ಗೊಂದಲಕ್ಕೊಳಗಾಗುತ್ತಿದ್ದಾರೆ.
ಐಎಎಸ್ ಅಧಿಕಾರಿ (IAS officer) ಅವನೀಶ್ ಶರನ್( Awanish Sharan) ಅವರು ಈ ವಿಡಿಯೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 'ಇವುಗಳು ಪ್ರಾಣಿಗಳೋ ಹೇಗೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋವನ್ನು 1 ಲಕ್ಷದ 64 ಸಾವಿರ ಮಂದಿ ವೀಕ್ಷಿಸಿದ್ದಾರೆ.