ಫುಟ್ಬಾಲ್‌ ಪಂದ್ಯದ ವೇಳೆ ಬಿಟ್ಟಿ ಮನೋರಂಜನೆ ನೀಡಿದ ಶ್ವಾನ ಮೈದಾನಕ್ಕಿಳಿದ್ದು, ಚೆಂಡು ಎತ್ತಿಕೊಂಡು ಹೋದ ಜರ್ಮನ್‌ ಶೆಫರ್ಡ್ ಶೋ ಸ್ಟೀಲರ್‌ ಆದ ಮುದ್ದು ಶ್ವಾನ

ಫುಟ್ಬಾಲ್ ಪಂದ್ಯಾವಳಿ ಸಮಯದಲ್ಲಿ ಪೊಲೀಸ್ ನಾಯಿಯೊಂದು ಎಲ್ಲರ ಕುತೂಹಲದ ಕೇಂದ್ರಬಿಂದು ಆಯಿತು. ಎಲ್ಲರೂ ನೋಡು ನೋಡುತ್ತಿದ್ದಂತೆ ಮೈದಾನಕ್ಕಿಳಿದ ಶ್ವಾನ ಮೈದಾನದ ತುಂಬೆಲ್ಲಾ ಓಡಾಡಿ ಕೊನೆಗೆ ಆಟಗಾರರು ಆಡುತ್ತಿದ್ದ ಬಾಲನ್ನೇ ಬಾಯಲ್ಲಿ ಕಚ್ಚಿ ಹೊತ್ತೊಯ್ದಿದೆ. ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಏಕಾಏಕಿ ಮೈದಾನಕ್ಕೆ ನುಗ್ಗಿದ ಶ್ವಾನದ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಬ್ರೆಜಿಲ್‌ನ (Brazil) 'ದಿ ಕ್ಯಾಂಪಿಯೊನಾಟೊ ಪೆರ್ನಾಂಬುಕಾನೊ ಡಿ ಫುಟೆಬೋಲ್' ಪಂದ್ಯಾವಳಿಯ ಈ ವೀಡಿಯೊದಲ್ಲಿ ಎರಡು ಸ್ಥಳೀಯ ತಂಡಗಳಾದ ನಾಟಿಕೊ ಮತ್ತು ರೆಟ್ರೊ ನಡುವೆ ನಡೆಯುತ್ತಿರುವ ಪಂದ್ಯದ ವೇಳೆ ಪೊಲೀಸ್ ನಾಯಿಯೊಂದು ಇದ್ದಕ್ಕಿದ್ದಂತೆ ಮೈದಾನಕ್ಕೆ ಇಳಿದು ತಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಚೆಂಡನ್ನೆತ್ತಿಕೊಂಡು ಓಡಿದೆ.

Scroll to load tweet…

ಪಂದ್ಯಾವಳಿಯ ಅಂತಿಮ ಪಂದ್ಯದ ಸಂದರ್ಭದಲ್ಲಿ ಕೆ-9 ತಂಡದ ಭಾಗವಾಗಿರುವ ಜರ್ಮನ್ ಶೆಫರ್ಡ್ (German Shepherd) ಶ್ವಾನಕ್ಕೆ ಆಟವಾಡುವ ಮನಸ್ಸಾಗಿದ್ದು, ಮೈದಾನದ ತುಂಬೆಲ್ಲಾ ಓಡಲು ಶುರು ಮಾಡಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ರೆಟ್ರೊ ತಂಡ 1-0 ಅಂತರದಲ್ಲಿ ಗೆಲುವು ಕಂಡಿತು.

ವೀಡಿಯೊದಲ್ಲಿ, ನಾಯಿಯು ಆಟಗಾರರ ಸುತ್ತಲೂ ಮೈದಾನದಲ್ಲಿ ಓಡುತ್ತಿರುವುದನ್ನು ಕಾಣಬಹುದು. ನಾಯಿಯ ಓಡಾಟವನ್ನು ಆಟಗಾರರು ಕೂಡ ಆನಂದಿಸುತ್ತಾರೆ. ಮೈದಾನದಲ್ಲಿ ಕೆಲವು ಸುತ್ತು ಹೊಡೆದ ನಂತರ ಶ್ವಾನ ಬಾಯಿಯಲ್ಲಿ ಫುಟ್‌ಬಾಲ್ ಅನ್ನು ತೆಗೆದುಕೊಂಡು ಹೋಗಲು ನಿರ್ಧರಿಸುತ್ತದೆ. ಈ ವೇಳೆ ಮೈದಾನಕ್ಕೆ ಬಂದ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತೊಂದು ಬಾಲ್ ತೋರಿಸುತ್ತಾ ಶ್ವಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕರೆದುಕೊಂಡು ಹೋಗುತ್ತಾರೆ.

ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ

ಈ ವೀಡಿಯೊವನ್ನು @geglobo ಎಂಬ ಟ್ವಿಟ್ಟರ್( Twitter) ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಪೆರ್ನಾಂಬುಕೊ ಫೈನಲ್‌ನಲ್ಲಿ ಪೋಲೀಸ್ ನಾಯಿ ಮೈದಾನವನ್ನು ಆಕ್ರಮಿಸಿತು.ಮತ್ತು ಈ ಸಾಕುಪ್ರಾಣಿಗೆ ಚೆಂಡು ಬೇಕಿತ್ತು ಎಂದು ಅವರು ಬ್ರೆಜಿಲ್ ಭಾಷೆಯಲ್ಲಿ ಬರೆದಿದ್ದಾರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ವಾನದ ಈ ಆಟಕ್ಕೆ ಮನಸೋತಿದ್ದು, ಅದು ತನ್ನ ಜೀವನದ ಸಮಯವನ್ನು ಎಂಜಾಯ್ ಮಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಥ್ಯಾಂಕ್ಸ್ ಹೇಳಿದ ತಾಯಿ ಶ್ವಾನ
ಫುಟ್ಬಾಲ್ ಒಂದು ಸರಳ ಆಟವಾಗಿದ್ದು ಇಪ್ಪತ್ತೆರಡು ಪುರುಷರು 90 ನಿಮಿಷಗಳ ಕಾಲ ಚೆಂಡನ್ನು ಬೆನ್ನಟ್ಟುತ್ತಾರೆ ಮತ್ತು ಕೊನೆಯಲ್ಲಿ, ಜರ್ಮನ್ ಶೆಫರ್ಡ್ (German Shepherds)ಯಾವಾಗಲೂ ಗೆಲ್ಲುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜರ್ಮನ್‌ ಶೆಫರ್ಡ್‌ ಶ್ವಾನವೂ ನಿಷ್ಠಾವಂತ, ಸ್ವಯಂ-ಭರವಸೆ, ಧೈರ್ಯ ಮತ್ತು ಸ್ಥಿರತೆ ಹೆಸರುವಾಸಿಯಾಗಿದೆ. ಇವುಗಳನ್ನು ಅತ್ಯುತ್ತಮ ಕೆಲಸಗಾರರು ಎಂದು ಪರಿಗಣಿಸಲಾಗುತ್ತದೆ. ಮತ್ತು ಅವು ಉದಾತ್ತ ವ್ಯಕ್ತಿತ್ವ ಮತ್ತು ಅತ್ಯುತ್ತಮ ಬುದ್ಧಿವಂತಿಕೆಯೊಂದಿಗೆ ಹೆಸರುವಾಸಿಯಾದ ನಾಯಿ ತಳಿಗಳಾಗಿವೆ.

ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್‌ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಳೆದ ವರ್ಷ ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿತ್ತು. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್‌ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈತನ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿತ್ತು. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದಾರೆ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.