ನವದೆಹಲಿ(ನ.18): ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಇರಾನ್‌ನಿಂದ ಅಪಹರಿಸಿ, ಪಾಕಿಸ್ತಾನಕ್ಕೆ ಕೊಂಡೊಯ್ದು ಅಲ್ಲಿನ ಸೇನೆಗೆ ನೀಡಿದ್ದ ಜೈಷ್‌ ಅಲ್‌-ಅದಲ್‌ ಸಂಘಟನೆಯ ಉಗ್ರ ಮುಲ್ಲಾ ಒಮರ್‌ನನ್ನು ಪಾಕಿಸ್ತಾನ ಸೇನೆಯೇ ಹೊಡೆದುರುಳಿಸಿದೆ.

ಕುಲಭೂಷಣ್ ಜಾಧವ್ ತೀರ್ಪು ಪರಿಶೀಲನೆಗೆ ಪಾಕ್‌ ಸಂಸತ್ತಿನಲ್ಲಿ ಅನುಮೋದನೆ

ದಕ್ಷಿಣ ಬಲೂಚಿಸ್ತಾನದ ಟಬ್ರ್ಯಾಟ್‌ ನಗರದಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮುಲ್ಲಾ ಒಮರ್‌ ಮತ್ತು ಅವನ ಪುತ್ರ ಸಹ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನಲ್ಲಿದ್ದುಕೊಂಡು ಪಾಕ್‌ ಪರ ಕೆಲಸ ಮಾಡುತ್ತಿದ್ದ ಮುಲ್ಲಾ ಒಮರ್‌ ಇರಾನ್‌ ಸರ್ಕಾರಕ್ಕೆ ಬೇಕಾಗಿದ್ದ ಆರೋಪಿಯಾಗಿದ್ದ. ಹೀಗಾಗಿ ಸಾಕ್ಷ್ಯ ನಾಶದ ಉದ್ದೇಶಕ್ಕಾಗಿ ಪಾಕಿಸ್ತಾನ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ.

ಕುಲಭೂಷಣ್‌ ಪರ ವಾದಕ್ಕೆ ಪಾಕಿಸ್ತಾನ ವಕೀಲರ ಹಿಂದೇಟು!

ಜಾಧವ್‌ರನ್ನು ಇರಾನ್‌ನಿಂದ ಅಪಹರಿಸಲಾಗಿತ್ತು ಎಂಬುದು ಭಾರತದ ವಾದ. ಆದರೆ ಪಾಕಿಸ್ತಾನ ಮಾತ್ರ ಆತ ಭಾರತೀಯ ಗೂಢಚರ. ಉಗ್ರ ಕೃತ್ಯಕ್ಕೆ ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದಿದ್ದ ಎಂದು ವಾದಿಸಿಕೊಂಡೇ ಬಂದಿದೆ. ಇದೇ ಪ್ರಕರಣದಲ್ಲಿ ಜಾಧವ್‌ಗೆ ಪಾಕ್‌ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯದ ಸೂಚನೆ ಅನ್ವಯ ಸದ್ಯ ಶಿಕ್ಷೆ ಜಾರಿಗೆ ತಡೆ ನೀಡಲಾಗಿದೆ.