- Home
- Business
- ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗುರುವಾರದಿಂದ ಇಳಿಕೆ ಕಾಣಲಾರಂಭಿಸಿದ್ದು, ಇಂದು ಕೂಡಾ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಈ ಅಪ್‌ಡೇಟ್ಸ್ ಇಲ್ಲಿದೆ.

ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ದರ
ಸಂಕ್ರಾಂತಿ ಬಳಿಕ ಹಬ್ಬಹರಿ ದಿನಗಳು, ಮದುವೆ ಇನ್ನಿತರ ಶುಭ ಸಮಾರಂಭಗಳು ಆರಂಭವಾಗಿವೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲಿ ದಾಖಲೆಯ ಪ್ರಮಾಣದ ಏರಿಳಿತಗಳು ಕಂಡಿದ್ದವು. ಜನವರಿ ಕೊನೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ಕಳೆದ ಮಂಗಳವಾರ ಹಾಗೂ ಬುಧವಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಗ್ರಾಹಕರ ನಿದ್ದೆಗೆಡಿಸುವಂತೆ ಮಾಡಿತ್ತು.
ಗುರುವಾರದಿಂದ ಇಳಿಕೆ ಆರಂಭವಾಗಿತ್ತು
ಆದರೆ ನಿನ್ನೆ ಅಂದರೆ ಗುರುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿತ್ತು. ಗುರುವಾರದ ಅಂತ್ಯದ ವೇಳೆಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ 502 ರುಪಾಯಿ ಇಳಿಕೆ ಕಂಡಿದ್ದು, 15,442 ರುಪಾಯಿ ಪ್ರತಿ ಗ್ರಾಮ್‌ಗೆ ಆಗಿತ್ತು. ಇನ್ನು ಇನ್ನು 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಬರೋಬ್ಬರಿ 460 ರುಪಾಯಿ ಪ್ರತಿ ಗ್ರಾಮ್‌ಗೆ ಇಳಿಕೆಯಾಗಿತ್ತು. ಇದೀಗ ಅದೇ ಟ್ರೆಂಡ್ ಮುಂದುವರೆದಿದೆ.
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 2,070 ರುಪಾಯಿ ಕುಸಿತ!
ಹೌದು, ಶುಕ್ರವಾರ ಬೆಳ್ಳಂಬೆಳಗ್ಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಹತ್ತು ಗ್ರಾಮ್‌ಗೆ ಬರೋಬ್ಬರಿ 2070 ರುಪಾಯಿ ಕುಸಿತ ಕಂಡಿದೆ. ಗುರುವಾರ 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ 442 ರುಪಾಯಿಗಳಾಗಿದ್ದವು. ಆದರೆ ಇಂದು ಒಂದು ಗ್ರಾಮ್‌ಗೆ 207 ರುಪಾಯಿ, ಹಾಗೆಯೇ 10 ಗ್ರಾಮ್‌ಗೆ 2070 ರುಪಾಯಿ ಕುಸಿತ ಕಂಡಿದೆ.
22 ಕ್ಯಾರಟ್ 10 ಗ್ರಾಮ್ ಚಿನ್ನಕ್ಕೆ 1900 ರುಪಾಯಿ ಕುಸಿತ!
ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಬರೋಬ್ಬರಿ 1900 ರುಪಾಯಿ ಕುಸಿತ ಕಂಡಿದ್ದು, ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಸದ್ಯ ಇಂದಿನ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ 13,965 ರುಪಾಯಿಗಳಾಗಿವೆ.
ಬೆಳ್ಳಿ ಬೆಲೆಯಲ್ಲಿ ಕೆಜಿಗೆ 25,000 ರುಪಾಯಿ ಕುಸಿತ
ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಬೆಳಗ್ಗೆ ಮಹಾಕುಸಿತ ಕಂಡಿದೆ. ಹೌದು, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 25,000 ರುಪಾಯಿ ಕುಸಿತ ಕಂಡಿದೆ. ಗುರುವಾರ ಒಂದು ಕೆಜಿ ಚಿನ್ನದ ಬೆಲೆ 3 ಲಕ್ಷ ರುಪಾಯಿಗಳಾಗಿತ್ತು. ಆದರೆ ಇಂದು ಒಂದು ಕೆಜಿ ಚಿನ್ನದ ಬೆಲೆ 2,75,000 ರುಪಾಯಿಗಳಾಗಿವೆ.
ಚಿನ್ನದ ಬೆಲೆ ಕುಸಿತ ಗ್ರಾಹಕರಿಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ!
ಒಟ್ಟಿನಲ್ಲಿ ಶುಭ ಸಮಾರಂಭದ ಸಂದರ್ಭದಲ್ಲೇ ದಿನದಿಂದ ದಿನಕ್ಕೆ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟಿಸಿರುವ ಬಿಡುವಂತೆ ಮಾಡಿದೆ. ಈ ಬೆಲೆ ಇನ್ನೂ ಇಳಿಕೆ ಕಾಣುತ್ತಾ ಅಥವಾ ಮತ್ತೆ ಹೆಚ್ಚಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

