Asianet Suvarna News Asianet Suvarna News

Federal Watchdog Report: ಕೋವಿಡ್‌ ರಿಲೀಫ್‌ನಲ್ಲಿ 16.41 ಲಕ್ಷ ಕೋಟಿ ಹಗರಣ!

ಅಮೆರಿಕದ ಫೆಡರಲ್ ವಾಚ್‌ಡಾಗ್ ಏಜೆನ್ಸಿ ಆಘಾತಕಾರಿ ವರದಿಯನ್ನು ಬಹಿರಂಗ ಮಾಡಿದೆ. ಫೆಡರಲ್ ವಾಚ್‌ಡಾಗ್ ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು 200 ಶತಕೋಟಿ ಡಾಲರ್‌ ಹಗರಣವಾಗಿದೆ ಎಂದು ಹೇಳಿದೆ.

federal watchdog says More than 200 billion USD in COVID 19 aid may have been stolen san
Author
First Published Jun 28, 2023, 5:34 PM IST

ನವದೆಹಲಿ (ಜೂ.28): ಅಮೆರಿಕದ ಫೆಡರಲ್ ವಾಚ್‌ಡಾಗ್‌ ಸಂಸ್ಥೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಎರಡು ಬಾರಿ ಪರಿಹಾರಕ್ಕಾಗಿ ಬಿಡುಗಡೆಯಾದ ಹಣದಲ್ಲಿ ಸುಮಾರಿ 16.41 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಣ್ಣ ಉದ್ಯಮಗಳನ್ನು ರಕ್ಷಿಸಲು ಈ ಹಣವನ್ನು ಅಮೆರಿಕ ಸರ್ಕಾರ ಬಿಡುಗಡೆ ಮಾಡಿತ್ತು. ಅಲ್ಲದೆ, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಈ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಯುಎಸ್ ಸ್ಮಾಲ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಇನ್ಸ್‌ಪೆಕ್ಟರ್ ಜನರಲ್ ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ವಂಚಕರು ಕೋವಿಡ್‌-19 ನಿಂದ ಆರ್ಥಿಕ ಹೊಡೆತವನ್ನು ತಪ್ಪಿಸಲು ಬಿಡುಗಡೆ ಮಾಡಿದ ಹಣದಲ್ಲಿ ಅವ್ಯವಹಾರ ಆಗಿರುವ ಸಾಧ್ಯತೆ ಎನ್ನಲಾಗಿದೆ. ಇಡೀ ಕೋವಿಡ್‌ ಸಾಂಕ್ರಾಮಿಕ ಸಮಯವನ್ನು ಭಾರತ ಸರ್ಕಾರ ಅತ್ಯಂತ ಮುತುವರ್ಜಿಯಿಂದ ವಹಿಸಿದ್ದರೆ, ವಿಶ್ವದ ಸಕಲ ಸೌಲಭ್ಯಗಳನ್ನೂ ಹೊಂದಿರುವ ಅಭಿವೃದ್ಧಿ ಹೊಂದಿದ ದೇಶವಾಗಿರುವ ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಹಗರಣವಾಗಿರುವುದು ಬೆಳಕಿಗೆ ಬಂದಿದೆ.

ಕೊರೋನಾ ವೈರಸ್‌ ಸಾಂಕ್ರಾಮಿಕದ ಆರಂಭಿಕ ಹಂತಗಳಲ್ಲಿ ಜನರಿಗೆ ಪರಿಹಾರ ನೀಡಲು ಈ ನಿಧಿಯನ್ನು ನೀಡಲಾಗಿತ್ತ. ಆದರೆ ವಂಚಕರು ಈ ಹಣವನ್ನು  ಬಳಸಿಕೊಂಡಿದ್ದಾರೆ. ಕನಿಷ್ಠ 17 ಪ್ರತಿಶತದಷ್ಟು COVID-EIDL ಮತ್ತು PPP ನಿಧಿಗಳಲ್ಲಿ ಹಗರಣವಾಗಿದೆ ಎಂದು ಇನ್‌ಸ್ಪೆಕ್ಟರ್ ಜನರಲ್ ವರದಿ ಹೇಳಿದೆ. ವರದಿಯ ಪ್ರಕಾರ, COVID-19 ರ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ವಿಪತ್ತು ಸಾಲ ಕಾರ್ಯಕ್ರಮದ ಸಮಯದಲ್ಲಿ $136 ಶತಕೋಟಿಗಿಂತ ಹೆಚ್ಚು ವಂಚನೆ ಮಾಡಲಾಗಿದೆ. ಇದು ಆ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಒಟ್ಟು ಹಣದ ಶೇ. 33ರಷ್ಟಾಗಿದೆ. ಪೇಚೆಕ್ ಪ್ರೊಟೆಕ್ಷನ್ ವಂಚನೆಯು ಸುಮಾರು $64 ಶತಕೋಟಿ ಎಂದು ಅಂದಾಜಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಹೇಳಿದ್ದಾರೆ.

ಸಾಂಕ್ರಾಮಿಕ ಪರಿಹಾರ ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ಶ್ವೇತಭವನದ ಹಿರಿಯ ಅಧಿಕಾರಿ ಜೀನ್ ಸ್ಪೆರ್ಲಿಂಗ್ ಮಂಗಳವಾರ ಸಂದರ್ಶನವೊಂದರಲ್ಲಿ ತುರ್ತು ಸಾಲ ಕಾರ್ಯಕ್ರಮದಲ್ಲಿ ಶೇ. 86 ರಷ್ಟು ಮೋಸವಾಗಿರಬಹುದು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲ ಒಂಬತ್ತು ತಿಂಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಇದು ಸಂಭವಿಸಿದೆ ಎಂದಿದ್ದಾರೆ. $200 ಶತಕೋಟಿ ಎನ್ನುವುದು ದೊಡ್ಡ ಹಗರಣ ಎಂದು ನೆನಪಿಟ್ಟುಕೊಳ್ಳಬೇಕು ಸ್ಪೆರ್ಲಿಂಗ್ ಹೇಳಿದರು.  

ಶ್ವೇತಭವನದ ಇನ್ನೊಬ್ಬ ಮಾಜಿ ಅಧಿಕಾರಿ, "ನಿಜವಾದ ಅಥವಾ ಸಂಭಾವ್ಯ ವಂಚನೆಯ ಮೊತ್ತವು ತುಂಬಾ ಚಿಕ್ಕದಾಗಿದೆ ಎಂದು ನಾವು ನಂಬುತ್ತೇವೆ" ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಆಗಿರುವ ಹಗರಣದ ಮೊತ್ತವು 40 ಶತಕೋಟಿ ಡಾಲರ್‌ನಿಂದ 100 ಶತಕೋಟಿ ಡಾಲರ್‌ ಆಗಿರಬಹುದು ಎನ್ನಲಾಗಿದೆ. ಆದರೆ, ಹೇಳುವ ಭರದಲ್ಲಿ ಮೊತ್ತವನ್ನು ದೊಡ್ಡದಾಗಿ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮೆಲ್ಲರ ಪ್ರಯತ್ನಗಳು ವಂಚನೆಗೆ ಬಲಿಯಾಗಿವೆ ಎಂದು ಸಾರ್ವಜನಿಕರಿಗೆ ಹೇಳುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

ಭಾರತದ ಮತ್ತೊಂದು ಮೈಲಿಗಲ್ಲು, ಒಮಿಕ್ರಾನ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

ಎಸ್‌ಬಿಎ ಇನ್ಸ್‌ಪೆಕ್ಟರ್ ಜನರಲ್ ಈ ಹಿಂದೆ ಕೋವಿಡ್‌-19 ವಿಪತ್ತು ಸಾಲ ಕಾರ್ಯಕ್ರಮದಲ್ಲಿ ಸುಮಾರು $86 ಶತಕೋಟಿ ವಂಚನೆ ಸಂಭವಿಸಿದೆ ಮತ್ತು ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂನಲ್ಲಿ ಸುಮಾರು $20 ಶತಕೋಟಿ ಡಾಲರ್‌ ವಂಚನೆ ಆಗಿರಬಹುದು ಎಂದು ಅಂದಾಜಿಸಿದ್ದರು.

ಕೋವಿಡ್‌ ನಿರ್ವಹಣೆಯಲ್ಲಿ ಭಾರತ ಮಾದರಿಯಾಗಿದೆ: ನಿಕೋಲಸ್‌ ನಾಸಿಮ್‌ ತಾಲೇಬ್‌

ಜೂನ್ 13 ರಂದು ಅಸೋಸಿಯೇಟೆಡ್ ಪ್ರೆಸ್ ಈ ಕುರಿತಂತೆ ವರದಿ ಮಾಡಿದೆ. ಕೋವಿಡ್‌-19 ಸಮಯದಲ್ಲಿ ಸ್ಕ್ಯಾಮರ್‌ಗಳು ಮತ್ತು ವಂಚಕರು ಸುಮಾರು $280 ಶತಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಪತ್ತು ಪರಿಹಾರದ ಸಮಯದಲ್ಲಿ ಸುಮಾರು $ 123 ಶತಕೋಟಿ ತಪ್ಪಾಗಿ ಖರ್ಚು ಮಾಡಲಾಗಿದೆ ಎಂದು ವರದಿ ಮಾಡಿದೆ. ಅದೇ ಸಮಯದಲ್ಲಿ, ಕೋವಿಡ್ ಸಮಯದಲ್ಲಿ ವಿತರಿಸಲಾದ $ 4.2 ಟ್ರಿಲಿಯನ್ ಮೊತ್ತದ ಸುಮಾರು 10 ಪ್ರತಿಶತದಷ್ಟು ಮೋಸವಾಗಿರಬಹುದು ಎಂದು ಇನ್ನೊಂದು ಪತ್ರಿಕೆ ವರದಿ ಮಾಡಿದೆ.

Follow Us:
Download App:
  • android
  • ios