ಹಾಲುಗಲ್ಲದ ಕೂಸಿಗೆ ಮಸಾಜ್ ಮಾಡುವ ಬೆಕ್ಕು: ವಿಡಿಯೋ ವೈರಲ್
- ಬೆಕ್ಕಿನ ಮಸಾಜ್‌ಗೆ ಫಿದಾ ಆದ ನೆಟ್ಟಿಗರು
- ಹಸುಗೂಸಿನ ಮೈ ಒತ್ತುವ ಮರ್ಜಾಲದ ಮೋಡಿ ನೋಡಿ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬೆಕ್ಕೊಂದು ಮಲಗಿರುವ ಪುಟ್ಟ ಮಗುವಿನ ಬೆನ್ನ ಮೇಲೆ ನಿಂತು ಮಗುವಿಗೆ ತನ್ನ ಕೈಗಳಿಂದ ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral)ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಹಾಲುಗಲ್ಲದ ಕೂಸನ್ನು ಹಾಸಿಗೆ ಮೇಲೆ ಮಲಗಿಸಲಾಗಿದೆ. ಪುಟ್ಟ ಮಗುವಿನ ಬೆನ್ನೇರುವ ಬೆಕ್ಕು ತನ್ನ ಕೈಗಳಿಂದ ಮಗುವಿನ ಬೆನ್ನಿಗೆ ಮಸಾಜ್ ಮಾಡುತ್ತದೆ. ಡಚ್‌ನ ಪ್ರಾಣಿ ಪ್ರಿಯರೊಬ್ಬರು ಬಿಟಿಂಗ್ ಬಿಡ್ಡೆನ್ ಎಂಬ ತಮ್ಮ ಟ್ವಿಟ್ಟರ್ (Twitter) ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಸಾಜ್ ಟೈಮ್ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಮಗುವೂ (Baby) ಕೂಡ ಯಾವುದೇ ಅಂಜಿಕೆ ಭಯ ಇಲ್ಲದೇ ಬೆಕ್ಕಿನ ಮಸಾಜ್‌ನ್ನು ಆನಂದಿಸುತ್ತದೆ. ನನ್ನ ಬೆಕ್ಕು (cat) ಮಸಾಜ್ ಮಾಡುವುದನ್ನು ಇಷ್ಟ ಪಡುತ್ತದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅಲ್ಲದೇ ನಮ್ಮ ಬೆಕ್ಕು ಕೂಡ ಇದೇ ರೀತಿ ಮಾಡುತ್ತದೆ ಎಂದು ಕಾಮಂಟ್‌ಗಳಲ್ಲಿ ತಿಳಿಸಿದ್ದಾರೆ. ಪ್ರಾಣಿಗಳ (Animal) ಇಂತಹ ಸಾಕಷ್ಟು ವಿಡಿಯೋಗಳು (video) ಸಾಮಾಜಿಕ ಜಾಲತಾಣಗಳಲ್ಲಿವೆ. ಇವು ನೋಡುಗರ ಮೂಡನ್ನು ಬದಲಾಯಿಸುವುದಲ್ಲದೇ ಖುಷಿ ನೀಡುತ್ತವೆ.
Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ
ಕೆಲ ದಿನಗಳ ಹಿಂದೆ ತುಂಟ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇತ್ತೀಚೆಗೆ ಪ್ರಾಣಿಗಳು ಬುದ್ಧಿವಂತರಾಗಿದ್ದು, ಮನುಷ್ಯರಂತೆ ಐಷಾರಾಮಿ ಜೀವನವನ್ನು ಅವುಗಳು ಇಷ್ಟಪಡುತ್ತವೆ. ಇದು ನಿಜ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಹಾಗೆಯೇ ಇಲ್ಲೊಂದು ಬೆಕ್ಕು ಕೈ ತೊಳೆಯಲು ಬಳಸುವಂತಹ ಸಿಂಕ್‌ನಲ್ಲಿ ಮಲಗಿಕೊಂಡು ಸ್ವತಃ ತಾನೇ ಕೈಯಲ್ಲಿ ನಲ್ಲಿ ತಿರುಗಿಸಿ ಸ್ನಾನ (Bath) ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಕ್ಕಿನ ಸ್ಮಾರ್ಟ್‌ನೆಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಕೈ ತೊಳೆಯುವ ಸಿಂಕ್‌ನ್ನೇ ಬೆಕ್ಕು ಬಾತ್ ಟಬ್ ಆಗಿಸಿಕೊಂಡಿದ್ದು, ಸ್ವತಃ ಅದುವೇ ನಲ್ಲಿಯನ್ನು ತಿರುಗಿಸಿಕೊಂಡು ಮೈಮೇಲೆ ನೀರು (water) ಬಿಟ್ಟುಕೊಳ್ಳುತ್ತಿರುವ ವಿಡಿಯೋ ನೋಡುಗರಿಗೆ ಸೋಜಿಗ ಉಂಟು ಮಾಡುತ್ತಿದೆ.
ಹೌದು ಸ್ವಾವಲಂಬನೆ ಹಾಗೂ ಐಷಾರಾಮಿ ಜೀವನ ಕೇವಲ ಮಾನವನಿಗೆ ಸೀಮಿತವಾಗಿಲ್ಲೆ ಕೆಲವೊಮ್ಮೆ, ಸಾಕು ಬೆಕ್ಕುಗಳು ಮತ್ತು ನಾಯಿಗಳಲ್ಲಿಯೂ ಸಹ ಇದನ್ನು ಕಾಣಬಹುದು. ಇದಕ್ಕೆ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಕೂಡ ಒಂದು ಉದಾಹರಣೆ. ಇಲ್ಲಿ ಬೆಕ್ಕು ತುಂಬಾ ಸ್ಮಾರ್ಟ್ ಮತ್ತು ಸ್ವತಂತ್ರವಾಗಿದ್ದು ಅದು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆಯೇ ಸ್ನಾನವನ್ನು ಮಾಡುತ್ತದೆ.
ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್
ಐಷಾರಾಮಿ ಜೀವನ ನಡೆಸುವ ಮನುಷ್ಯರು ಬಾತ್‌ಟಬ್‌ನಲ್ಲಿ ಮಲಗಿಕೊಂಡು ಹೇಗೆ ಸ್ನಾನ ಮಾಡುತ್ತಾರೋ ಹಾಗೆಯೇ ಈ ಬೆಕ್ಕು ಬಾತ್‌ಟಬ್‌ನಲ್ಲಿ ಆರಾಮವಾಗಿ ಮಲಗಿಕೊಂಡು ಟ್ಯಾಪ್ ಅನ್ನು ಮಾಡಿ ಮೇಲಿನಿಂದ ಬೀಳುವ ನೀರಿಗೆ ಮೈಯೊಡ್ಡುತ್ತದೆ. ಬೆಕ್ಕಿನ ವರ್ತನೆ ನೋಡಿದರೆ ಬಹುಶಃ ಈ ಬೆಕ್ಕು ಮನೆ ಮಂದಿ ಯಾರೋ ಬಾತ್‌ಟಬ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿದೆ ಎಂದೆನಿಸುವುದಂತು ನಿಜ. ಒಟ್ಟಿನಲ್ಲಿ ಈ ಬೆಕ್ಕು ಸೆಲೆಬ್ರಿಟಿ (celebrity) ರೀತಿ ವರ್ತಿಸುತ್ತಿರುವುದಂತು ನಿಜ.