ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್
- ಬೆಕ್ಕಿನ ತುಂಟಾಟಕ್ಕೆ ನೆಟ್ಟಿಗರು ಫುಲ್ ಖುಷ್
- ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ
- ಮಲಗಿದ್ದ ಶ್ವಾನವನ್ನು ನಿದ್ರಿಸಲು ಬಿಡದೇ ತುಂಟಾಟ
ಮಕ್ಕಳು, ನಾಯಿ ಮರಿಗಳು, ಬೆಕ್ಕು ಮರಿಗಳು ಮುದ್ದಾಗಿ ಆಟ ಆಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಬೆಕ್ಕು ನಾಯಿಯೊಂದಿಗೆ ಬರೀ ಆಟವಲ್ಲ, ತುಂಟಾಟವಾಡುತ್ತಿದೆ. ನಿದ್ರಿಸಿರುವ ಶ್ವಾನವನ್ನು ಕೈಯಲ್ಲಿ ತಟ್ಟಿ ಎಳಿಸುವ ಬೆಕ್ಕು. ಅದು ಎದ್ದು ನೋಡುತ್ತಿದ್ದಂತೆ ಅದಕ್ಕೆ ಕಾಣದಂತೆ ಮಾಯವಾಗುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಕ್ಕಿನ ತುಂಟ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಾಣಿಗಳ ವಿಡಿಯೋಗಳು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವಷ್ಟು ಬೇರಾವುದು ಮಾಡಲು ಸಾಧ್ಯವಿಲ್ಲ. ನಾಯಿ ಮರಿಗಳು ಆಟವಾಡುವ ಮುದ್ದಾದ ವಿಡಿಯೋ, ಬೆಕ್ಕು ಮರಿಗಳ ತುಂಟಾಟ, ಅಲ್ಲದೇ ಆನೆ ಮರಿಗಳ ಮುದ್ದು ಚೆಲ್ಲಾಟ ಎಲ್ಲವೂ, ಕಣ್ಣು ಮನಸ್ಸು ಎರಡನ್ನು ಹಗುರವಾಗಿಸುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಇಲ್ಲಿ ಶ್ವಾನದೊಂದಿಗೆ ಬೆಕ್ಕಿನ ಕಣ್ಣಮುಚ್ಚಾಲೆಯಾಟ ಮನಸ್ಸಿಗೆ ಮುದ ನೀಡುತ್ತಿದೆ.
ವೀಡಿಯೊದಲ್ಲಿ, ಬೆಕ್ಕು ಸ್ವಲ್ಪ ಮೋಜು ಮತ್ತು ಕಿಡಿಗೇಡಿತನ ಮಾಡಲು ನಿರ್ಧರಿಸಿದಂತಿದೆ. ನಾಯಿಯೊಂದು ಮಂಚದ ಮೇಲೆ ಶಾಂತಿಯುತವಾಗಿ ಮಲಗಿದ್ದು, ಅಲ್ಲಿಗೆ ಬಂದ ಬೆಕ್ಕು ಮೊದಲು ತನ್ನ ಕೈಯನ್ನು ನಾಯಿಗೆ ಸ್ಪರ್ಶಿಸುವ ಮೂಲಕ ನಾಯಿಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತದೆ ಮತ್ತು ನಂತರ ಅಷ್ಟೇ ವೇಗವಾಗಿ ಸೋಫಾದ ಕೆಳಗೆ ಅಡಗಿಕೊಳ್ಳುತ್ತದೆ. ಇದರ ಸ್ಪರ್ಶಕ್ಕೆ ಒಮ್ಮೆ ತಲೆ ಮೇಲೆತ್ತಿದ ನಾಯಿ ಮತ್ತೆ ಅಲ್ಲೇ ಮಲಗುತ್ತದೆ. ಇತ್ತ ನಾಯಿ ಎಚ್ಚರಗೊಂಡಿದ್ದನ್ನು ಕುತೂಹಲದಿಂದ ಕದ್ದು ನೋಡುವ ಬೆಕ್ಕು ಅದು ಏಳುತ್ತಿದ್ದಂತೆ ಸೋಪಾದ ಕೆಳಗೆ ಅಡಗಿಕೊಳ್ಳುತ್ತದೆ. ಅಲ್ಲದೇ ಮತ್ತದೆ ತನ್ನ ತುಂಟಾಟವನ್ನು ಮುಂದುವರಿಸುತ್ತದೆ. ಎರಡನೇ ಬಾರಿ ಬೆಕ್ಕು ಇದೇ ರೀತಿ ಮಾಡಿದಾಗ ಎದ್ದ ನಾಯಿ ತನ್ನನ್ನು ಮುಟ್ಟಿದ್ಯಾರು ಎಂದು ಅಚ್ಚರಿಯಿಂದ ನೋಡಲು ಶುರು ಮಾಡುತ್ತದೆ.
ನಾಯಿಯ ಗಾತ್ರದ ಬೆಕ್ಕು ನೋಡಿ ಜನರ ಗೊಂದಲ.... ಇದು ಬೆಕ್ಕೋ ನಾಯೋ... ನೀವೇ ಹೇಳಿ
ಈ ವಿಡಿಯೋವನ್ನು Buitengebieden ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು ಸಾವಿರಾರು ಜನ ವೀಕ್ಷಿಸಿದ್ದಾರೆ. ಅಲ್ಲದೇ ಬೆಕ್ಕು ಮೋಜು ಮಾಡುತ್ತವೆ. ಇದು ಇಂಟರ್‌ನೆಟ್‌ನಲ್ಲಿರುವ ಮುದ್ದಾದ ವಿಡಿಯೋ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಮರಿಯನ್ನು ರಕ್ಷಿಸಿದ ಮುದ್ದು ಶ್ವಾನ
ಮನುಷ್ಯರು ಮಾತ್ರವಲ್ಲ ಪ್ರಾಣಿಗಳಿಗೂ ಬುದ್ಧಿವಂತಿಕೆ ಸಂವೇದನಾಶೀಲತೆ ಎರಡೂ ಇದೆ. ಕಳೆದ ವರ್ಷ ಅಮೆರಿಕಾದ ಚಿಕಾಗೋದಲ್ಲಿ 5 ಮಹಡಿಗಳ ಕಟ್ಟಡಕ್ಕೆ ಬೆಂಕಿ ಬಿದ್ದು ಹೊತ್ತಿ ಉರಿಯಲು ಶುರುವಾಗಿತ್ತು. ಈ ವೇಳೆ ಆ ಕಟ್ಟಡದಲ್ಲಿದ್ದ ಬೆಕ್ಕೊಂದು ಐದನೇ ಮಹಡಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿತ್ತು. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಂಕಿ, ಹೊಗೆಯಿಂದ ಆತಂಕಗೊಂಡ ಬೆಕ್ಕು, ಕಿಟಕಿಯ ಮೂಲಕ ಹೊರಬಂದು 5ನೇ ಮಹಡಿಯಿಂದ ಕೆಳಕ್ಕೆ ಹಾರಿದೆ. ಎತ್ತರದಿಂದ ಜಿಗಿದ ಬೆಕ್ಕು ನೆಲಕ್ಕೆ ಬಿದ್ದ ತಕ್ಷಣ ಎದ್ದು ಮುಂದೆ ಸಾಗಿದೆ. ಬೆಕ್ಕಿಗೆ ಯಾವುದೇ ಅಪಾಯ ಆಗಿಲ್ಲ. ಇದುವರೆಗೂ ಹೊರಜಗತ್ತು ಕಾಣದ ಬೆಕ್ಕು, ಹಾರಿದ ಬಳಿಕ ಇದೀಗ ಮನೆಗೆ ಹಿಂತಿರುಗಿಲ್ಲ ಎಂದು ಬೆಕ್ಕಿನ ಮಾಲೀಕ ಕಣ್ಣೀರಿಟ್ಟಿದ್ದಾರೆ.